Advertisement

ಮಂಗಳೂರು : ವಿಶೇಷ ರೈಲು ಸಂಚಾರ ಮುಂದುವರಿಕೆ

03:07 PM Sep 17, 2022 | Team Udayavani |

ಮಂಗಳೂರು : ರೈಲು ನಂ. 02198/02197 ಜಬಲ್‌ಪುರ ಜಂಕ್ಷನ್‌ -ಕೊಯಮತ್ತೂರು ಜಂಕ್ಷನ್‌- ಜಬಲ್‌ಪುರ ಜಂಕ್ಷನ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌ ವಿಶೇಷ ರೈಲು ಸೇವೆಯನ್ನು ಮುಂದುವರಿಸಲಾಗಿದೆ.

Advertisement

ರೈಲು ನಂ. 02198 ಜಬಲ್‌ಪುರ ಜಂಕ್ಷನ್‌ – ಕೊಯಮತ್ತೂರು ಜಂಕ್ಷನ್‌ ರೈಲಿನ ಸಂಚಾರವನ್ನು ಡಿ.30ರ ವರೆಗೆ ವಿಸ್ತರಿಸಲಾಗಿದ್ದು ಪ್ರತಿ ಶುಕ್ರವಾರ ಜಬಲ್‌ಪುರ ಜಂಕ್ಷನ್‌ನಿಂದ ಹೊರಡಲಿದೆ.

ರೈಲು ನಂ. 02197 ಕೊಯಂಬತ್ತೂರು ಜಂಕ್ಷನ್‌- ಜಬಲ್‌ಪುರ ಜಂಕ್ಷನ್‌ ರೈಲಿನ ಸಂಚಾರವನ್ನು 2023ರ ಜ.2ರ ವರೆಗೆ ವಿಸ್ತರಿಸಲಾಗಿದ್ದು ಪ್ರತಿ ಸೋಮವಾರ ಕೊಯಂಬತ್ತೂರು ಜಂಕ್ಷನ್‌ನಿಂದ ಹೊರಡಲಿದೆ.

ರೈಲಿಗೆ ನರಸಿಂಗ್‌ಪುರ, ಗದರ್‌ವಾರ್‌, ಪಿಪರಿಯಾ, ಇತ್ರಾಸಿ ಜಂಕ್ಷನ್‌, ಹರ್ದಾ, ಖಂಡ್ವಾ, ಭುಸವಾಲ್‌ ಜಂಕ್ಷನ್‌, ನಾಸಿಕರೋಡ್‌, ಪನ್ವೇಲ್‌, ರೋಹಾ. ಖೇಡ್‌, ಚಿಪೂನ್‌, ರತ್ನಗಿರಿ, ಕುಡಾಲ್‌, ತೀವಿಂ, ಮಡಂಗಾವ್‌ ಜಂಕ್ಷನ್‌, ಕಾರವಾರ, ಕುಮಟಾ,ಮುಕಾಂಬಿಕಾ ರೋಡ್‌, ಕುಂದಾಪುರ, ಉಡುಪಿ, ಮೂಲ್ಕಿ, ಮಂಗಳೂರು ಜಂಕ್ಷನ್‌, ಕಾಸರಗೋಡು, ಕಣ್ಣೂರು, ಕೋಝಿಕೋಡ್‌, ಶೋರೂನೂರು ಜಂಕ್ಷನ್‌, ಪಾಲಕ್‌ ಜಂಕ್ಷನ್‌ನಲ್ಲಿ ನಿಲುಗಡೆ ಇದೆ.

ಇದನ್ನೂ ಓದಿ : ಮಡಿಕೇರಿ : ಅ.17ರ ರಾತ್ರಿ 7.21ಕ್ಕೆ ಕಾವೇರಿ ತೀರ್ಥೋದ್ಭವ

Advertisement
Advertisement

Udayavani is now on Telegram. Click here to join our channel and stay updated with the latest news.

Next