Advertisement

ಮುಂದಿನ ವಾರದಿಂದ ವಿಶೇಷ ತಂಡ ಕಾರ್ಯಾಚರಣೆ

11:38 PM Jun 07, 2019 | mahesh |

ಮಹಾನಗರ: ನಗರದಲ್ಲಿ ಸಂಚರಿಸುವ ಸಿಟಿಬಸ್‌ಗಳ ಕಾರ್ಯಾಚರಣೆಗೆ ಸಂಬಂಧಿಸಿ ಫೋನ್‌- ಇನ್‌ ಕಾರ್ಯಕ್ರಮ, ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್‌ ತಿಳಿಸಿದರು.

Advertisement

ಅವರು ಶುಕ್ರವಾರ ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಫೋನ್‌ ಇನ್‌ ಕಾರ್ಯಕ್ರಮದ ಬಳಿಕ ನಡೆದ ಸಿಟಿ ಬಸ್‌ ಮಾಲಕರ ಮತ್ತು ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡದಿರುವ ಬಗ್ಗೆ, ಬಸ್‌ಬೇಯಲ್ಲಿ ಬಸ್‌ ನಿಲ್ಲಿಸದಿರುವ ಬಗ್ಗೆ, ಅಜಾಗ್ರತೆ ಹಾಗೂ ಅಡ್ಡಾ ದಿಡ್ಡಿ ಬಸ್‌ ಚಾಲನೆ, ಫ‌ುಟ್ಬೋರ್ಡ್‌ ನಲ್ಲಿ ಪ್ರಯಾಣ, ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಕಾದಿರಿಸಿದ ಸೀಟು ನೀಡದಿರುವುದು, ಪ್ರಯಾಣಿಕರ ಜತೆ ಅಸಭ್ಯ ವರ್ತನೆ ಮತ್ತಿತರ ಹಲವಾರು ದೂರುಗಳು ಪದೇ ಪದೇ ಬರುತ್ತಿವೆ. ಬಸ್‌ ವ್ಯವಸ್ಥೆ ಸಾರ್ವಜನಿಕ ಸೇವೆಯಾಗಿದ್ದು, ಅದಕ್ಕೆ ಪೂರಕವಾಗಿ ಸೇವೆ ಒದಗಿಸುವುದು ಬಸ್‌ ಮಾಲಕರ ಕರ್ತವ್ಯ ಎಂದು ವಿವರಿಸಿದರು.

ಸುಧಾರಣೆಗೆ ಪ್ರಯತ್ನ
ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್‌ ಆಳ್ವ ಮಾತನಾಡಿ, ಈ ಸಮಸ್ಯೆಗಳ ಬಗ್ಗೆ ಈಗಾಗಲೇ ಸಂಘದ ಸಭೆಯಲ್ಲಿ ಬಸ್‌ ಮಾಲಕರ ಗಮನಕ್ಕೆ ತರಲಾಗಿದೆ. ಬಸ್‌ನಲ್ಲಿ ಟಿಕೆಟ್ ನೀಡುವ ಬಗ್ಗೆ ಎಲ್ಲ ಬಸ್‌ ಮಾಲಕರಿಗೆ ತಿಳಿಸಲಾಗುವುದು. ಈ ಸಭೆಯ ಬಗ್ಗೆಯೂ ಮತ್ತೂಮ್ಮೆ ಬಸ್‌ ಮಾಲಕರ ಗಮನಕ್ಕೆ ತಂದು ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದರು.

ನಗರದಲ್ಲಿ ಸಂಚರಿಸುವ ಕೆಲವು ಬಸ್‌ಗಳ ವಿರುದ್ಧ ಪದೇ ಪದೇ ಸಾರಿಗೆ ನಿಯಮ ಉಲ್ಲಂಘಿಸಿದ ಬಗ್ಗೆ ದೂರು, ದಂಡದ ನೋಟೀಸ್‌ ಬರುತ್ತಿವೆ. ಆದರೆ ದೂರು ಬಂದಿರುವ ಕೆಲವೊಂದು ರೂಟ್‌ಗಳಲ್ಲಿ ಆ ಬಸ್‌ಗಳು ಸಂಚರಿಸದೆ ಇರುವುದು ಗಮನಕ್ಕೆ ಬಂದಿದೆ ಎಂದರು. ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್‌, ಇಂತಹ ದೂರುಗಳ ಬಗ್ಗೆ ಎಸಿಪಿ ಮಂಜುನಾಥ್‌ ಅವರಲ್ಲಿ ಮಾತನಾಡಿ, ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಎಸಿಪಿ ಮಂಜುನಾಥ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ಬಸ್‌ ಸಿಬಂದಿಯ ವರ್ತನೆ ಕುರಿತಂತೆ ಮಾಲಕರ ಗಮನಕ್ಕೆ ತರುವುದು ಈ ಸಭೆಯ ಉದ್ದೇಶ. ಈಗಾಗಲೇ ವಿವರಿಸಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ವಾರದೊಳಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು. ಈ ಬಗ್ಗೆ ತಪಾಸಣೆಗಾಗಿ ಮುಂದಿನ ವಾರ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಹಾಗೂ ನಿಯಮ ಉಲ್ಲಂಘಿಸುವ ಬಸ್‌ ಸಿಬಂದಿ/ ಮಾಲಕರ ವಿರುದ್ಧ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದರು.

ವಾರದೊಳಗೆ ಸೂಕ್ತ ವ್ಯವಸ್ಥೆ ಮಾಡಿ
ಬಸ್‌ ಸಿಬಂದಿಯ ವರ್ತನೆ ಕುರಿತಂತೆ ಮಾಲಕರ ಗಮನಕ್ಕೆ ತರುವುದು ಈ ಸಭೆಯ ಉದ್ದೇಶ. ಈಗಾಗಲೇ ವಿವರಿಸಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ವಾರದೊಳಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು. ಈ ಬಗ್ಗೆ ತಪಾಸಣೆಗಾಗಿ ಮುಂದಿನ ವಾರ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಹಾಗೂ ನಿಯಮ ಉಲ್ಲಂಘಿಸುವ ಬಸ್‌ ಸಿಬಂದಿ/ ಮಾಲಕರ ವಿರುದ್ಧ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next