Advertisement

ಪಾರದರ್ಶಕ ಚುನಾವಣೆಗೆ ವಿಶೇಷ ತಂಡ 

04:14 PM Apr 01, 2018 | |

ಪುತ್ತೂರು: ವಿಧಾನಸಭಾ ಚುನಾವಣೆ ಪಾರದರ್ಶಕವಾಗಿ ನಡೆಯವ ನಿಟ್ಟಿನಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಪುತ್ತೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ವಿನಂತಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 27ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಎ. 24ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಮೇ 12ರಂದು ರಾಜ್ಯದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮೇ 15ರಂದು ಮತ ಎಣಿಕೆ. ಈ ನಿಟ್ಟಿನಲ್ಲಿ ಮತಗಟ್ಟೆ ಸಿಬಂದಿ ಸಹಿತ ಎಲ್ಲರಿಗೂ ತರಬೇತಿ ನೀಡಲಾಗುತ್ತದೆ ಎಂದರು.

ಮತಗಟ್ಟೆಗಳ ವಿವರ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 217 ಮೂಲ ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ ಒಂದು ಮತಗಟ್ಟೆಯಲ್ಲಿ 1,300 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 1,400 ಮಂದಿ ಮತ ಚಲಾವಣೆ ನಡೆಸಲಿದ್ದಾರೆ. ಮತದಾರರ ಸಂಖ್ಯೆ ಅಧಿಕವಾಗಿರುವ ಕಡೆಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಇಂತಹ 6 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮೂಲ ಮತ್ತು ಹೆಚ್ಚುವರಿ ಸೇರಿ ಒಟ್ಟು 223 ಇವಿಎಂ ಮತಯಂತ್ರಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾನ ನಡೆಯಲಿದೆ ಎಂದರು.

ಮತದಾರರ ಸಂಖ್ಯೆ
ಈಗ ಗುರುತಿಸಿರುವಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,70,879 ಜನಸಂಖ್ಯೆಯಿದೆ. ಇವರಲ್ಲಿ 98,928 ಪುರುಷ, 98,995 ಮಹಿಳೆಯರು ಸಹಿತ ಒಟ್ಟು 1,97,923 ಮತದಾರರಿದ್ದಾರೆ. ಎ. 14ರ ತನಕ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶವಿದ್ದು, ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಪ್ರಮಾಣ ಅಧಿಕವಾಗಿದೆ. ಒಟ್ಟು ಜನಸಂಖ್ಯೆಗೆ ಒಟ್ಟು ಮತದಾರರ ಪ್ರಮಾಣ ಶೇ. 73.7 ಇದೆ. ಸೇವಾ ಮತದಾರರು 64 ಮಂದಿ ಇದ್ದಾರೆ ಎಂದು ಹೇಳಿದರು.

ಅಧಿಕಾರಿಗಳ ನೇಮಕ
ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಚುನಾವಣಾ ಆಯೋಗದ ಅಡಿಯಲ್ಲಿ ಬರುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ಮಂದಿ ಸೆಕ್ಟರ್‌ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಓರ್ವ ಸೆಕ್ಟರ್‌ ಆಫೀಸರ್‌ ಗೆ 12-13 ಕೇಂದ್ರಗಳ ಜವಾಬ್ದಾರಿಯಿದೆ. ಚುನಾವಣೆಗೆ ಸಂಬಂಧಿಸಿದ ದೂರು, ಕುಂದು-ಕೊರತೆ, ಕಾರ್ಯಕ್ರಮಗಳ ಮಾಹಿತಿ ಸಹಿತ ಎಲ್ಲ ಜವಾಬ್ದಾರಿಗಳನ್ನು ಇವರು ನಿರ್ವಹಿಸಲಿದ್ದಾರೆ ಎಂದರು. ಚುನಾವಣೆಯ ಸಂದರ್ಭದಲ್ಲೇ ಐತಿಹಾಸಿಕ ಪುತ್ತೂರಿನ ಜಾತ್ರೆಯೂ ಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next