Advertisement

ಪಿಎಸ್‌ಐ ಸಾವಿನ ತನಿಖೆಗೆ ವಿಶೇಷ ತಂಡ

06:02 AM Jan 12, 2019 | Team Udayavani |

ಸೇಡಂ: ಪ್ರೊಬೆಷನರಿ ಪಿಎಸ್‌ಐ ಬಸವರಾಜ ಮಂಚನೂರ ಸಾವಿನ ತನಿಖೆಗೆ ವಿಶೇಷ ತಂಡ ರಚಿಸುವಂತೆ ತಿಳಿಸಲಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು. ಶುಕ್ರವಾರ ಮೃತನ ಹುಟ್ಟೂರು ಬೆನಕನಹಳ್ಳಿಗೆ ಆಗಮಿಸಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದರು. ಬಸವರಾಜ ಕುಟುಂಬಕ್ಕೆ ಸರ್ಕಾರದಿಂದ ಸೌಲಭ್ಯ ದೊರಕಿಸಲು, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವ ಸಂಬಂಧ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ ಎಂದರು.

Advertisement

ಬಿಜೆಪಿ ತಾಲೂಕಾಧ್ಯಕ್ಷ ನಾಗಪ್ಪ ಕೊಳ್ಳಿ, ಪ್ರಧಾನ ಕಾರ್ಯದರ್ಶಿ ಶಿವಲಿಂಗರೆಡ್ಡಿ ಪಾಟೀಲ, ಓಂಪ್ರಕಾಶ ಪಾಟೀಲ, ಮುಖಂಡರಾದ ಪರ್ವತರೆಡ್ಡಿ ಪಾಟೀಲ ನಾಮವಾರ, ಅನಂತೇಶ್ವರೆಡ್ಡಿ ಪಾಟೀಲ, ಶಂಕರ ಜಡಾಲ ನಿಡಗುಂದಾ, ರಾಚಯ್ಯಸ್ವಾಮಿ, ಗುರು ಬಾಳಿಕಾರ, ವಿಶ್ವನಾಥರೆಡ್ಡಿ, ಯಮುನಪ್ಪ ಯಾಳಗಿ, ರುದ್ರು ಕಂಬಾರ, ಹಣಮಂತ ಜೋಗಿ, ಮಲ್ಲಪ್ಪ ಹೊಸಮನಿ, ದೇವಪ್ಪ ಲದ್ದಿ ಹಾಗೂ ಮತ್ತಿತರರು ಇದ್ದರು.

ಮೃತ ಬಸವರಾಜ ತಾಯಿ ಮಹಾದೇವಮ್ಮ ಶಾಸಕರೆದುರು ಮಗನ ನೆನಪುಗಳನ್ನು ಹೇಳುತ್ತಾ ದುಃಖೀಸಿದರು. ನಮ್ಮಪ್ಪಗ ಪಿಎಸ್‌ಐಯೊಬ್ಬ ಕೈಏಟು ಹೊಡೆದಿದ್ದ. ಆವತ್ತಿಂದ ನನ್‌ ಹೊಟ್ಯಾಗೂ ಪಿಎಸ್‌ಐ ಕ್ಷಿುಟ್ಟಬೇಕು ಎಂದು ಛಲ ತೊಟ್ಟಿದ್ದೆ. ಆದ್ರ ನನ್‌ ಕನಸೆಲ್ಲ ನನ್‌ ಮಗನಿಂದ ಸತ್ತು ಹೋದವು. ಅಂದುಕೊಂಡ ಕನಸು ನುಚ್ಚು ನೂರಾತು. ದಾರಿ ಕಾಣಲಾರ್ದಂಗ ಕೂತಿವಿ. ಇನ್ನೊಬ್ಬ ಮಗ ಸಾಲಿ ಕಲ್ತಾನ ಹೆಂಗಾರ ಮಾಡಿ ಅವನಿಗಾದ್ರು ಪಿಎಸ್‌ಐ ಮಾಡ್ರಿ. ನಮ್‌ ಮನ್ಯಾಗ ಒಬ್ರಾದ್ರೂ ಖಾಕಿ ಹಾಕ್ಕೊಂಡಿದ್ದನ್ನ ನೋಡ್ಬೇಕ್ರಿ ಎಂದು ಕೈ ಮುಗಿದು ಬೇಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next