Advertisement

ಕೃಷಿಕರು, ಬಡವರಿಗೆ ಆದ್ಯತೆ ಕಡಿಮೆಯಾಗುತ್ತಿದೆ

09:30 AM Apr 18, 2018 | Team Udayavani |

1983ರ ತನಕ ಸಿಪಿಐಎಂ ಪ್ರಾಬಲ್ಯ ಇದ್ದ ಉಳ್ಳಾಲ ಕ್ಷೇತ್ರ ಬಳಿಕ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ 1994ರ ಚುನಾವಣೆ ಉಳ್ಳಾಲದ ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿತು. ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿಯ ಜಯರಾಮ ಶೆಟ್ಟಿ ಶಾಸಕರಾದರು. ಈ ಸಂದರ್ಭದಲ್ಲಿ ಅಂದು ಕಾಂಗ್ರೆಸ್‌ ಮುಖಂಡರಾಗಿದ್ದ ಚಂದಪ್ಪ ಉಳ್ಳಾಲ ಅವರ ಪುತ್ರ ದಿನಕರ ಉಳ್ಳಾಲ ಪಕ್ಷೇತರರಾಗಿ ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಿ ಸೋತು ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದರು. ಮಾತಿನ ಮತದಲ್ಲಿ ಅವರು…

Advertisement

ಅಂದು ಸೋಲಿಗೆ ಕಾರಣವೇನು?
ಸೋಲು ನಿರೀಕ್ಷಿತವಾಗಿತ್ತು. ಆದರೆ ಪಕ್ಷೇತರನಾಗಿ ಅತ್ಯಧಿಕ ಮತ ಗಳಿಸಿದ್ದು ಬಳಿಕ ಯಾವುದೇ ಪಕ್ಷೇತರ ಅಭ್ಯರ್ಥಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಮತ ಗಳಿಸಿಲ್ಲ.

ಈ ಬಾರಿ ನಿಮ್ಮ ರಾಜಕೀಯ ಲೆಕ್ಕಾಚಾರ ಹೇಗೆ ?
ಅಂದಿನ ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಬಳಿಕ ಉಳ್ಳಾಲ ಪಟ್ಟಣ ಪಂಚಾಯತ್‌ ಉಪಾಧ್ಯಕ್ಷ , ಪುರಸಭೆಯ ಅಧ್ಯಕ್ಷನಾಗಿ ಪಕ್ಷದಲ್ಲಿ ಜಿಲ್ಲಾ ಮಟ್ಟದ ಜವಾಬ್ದಾರಿ ನಿರ್ವಹಿಸಿದ್ದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಸೌಹಾರ್ದ ವಾತಾವರಣ ಇಲ್ಲಿಲ್ಲ ಮತ್ತು ಕೃಷಿಕರಿಗೆ ಮತ್ತು ಬಡವರಿಗೆ  ಹೆಚ್ಚಿನ ಆದ್ಯತೆ ಲಭಿಸದಿರುವುದರಿಂದ ಕಳೆದ ಐದು ವರ್ಷಗಳಿಂದ ರಾಜಕೀಯದಿಂದ ದೂರವಿದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.

ಈ ಬಾರಿ ಸ್ಪರ್ಧಾಕಾಂಕ್ಷಿಯಾಗಿದ್ದಿರಾ ?
ತಮ್ಮ ಪಕ್ಷ ಸೇರುವಂತೆ ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ ಈ ಬಾರಿ ಜಾತ್ಯತೀತ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕನಾಗಿದ್ದೇನೆ.

ನಿಮ್ಮ ಪ್ರಕಾರ ರಾಜ್ಯ ಮತ್ತು  ಕ್ಷೇತ್ರದಲ್ಲಿ ಈ ಬಾರಿಯ ಫಲಿತಾಂಶ ಹೇಗಿರಬಹುದು?
ರಾಜ್ಯದಲ್ಲಿ ಈ ಬಾರಿ ಅತಂತ್ರ ಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯೇ ಹೆಚ್ಚು. ಕ್ಷೇತ್ರದಲ್ಲಿಯೂ ಈ ಬಾರಿ ಕಠಿನ ಸವಾಲುಗಳಿದ್ದು, ಜೆಡಿಎಸ್‌ ಮತ್ತು ಬಿಜೆಪಿಯ ಅಭ್ಯರ್ಥಿಯನ್ನು ಹೊಂದಿಕೊಂಡು ಫಲಿತಾಂಶದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

Advertisement

ಹಿಂದಿನ ಚುನಾವಣಾ ಪ್ರಚಾರಕ್ಕೂ ಈಗಿನ ಪ್ರಚಾರ ವೈಖರಿಗೂ ವ್ಯತ್ಯಾಸ ?
ಹಿಂದೆ ಅಬ್ಬರದ ಪ್ರಚಾರವಿತ್ತು. ಹಣಕಾಸಿನ ವಿಚಾರ ಇರಲಿಲ್ಲ; ನೈಜ ಕಾರ್ಯಕರ್ತರಿದ್ದರು. ಈಗ ಧರ್ಮಾಧಾರಿತವಾಗಿ, ಜಾತಿ ಆಧಾರಿತವಾಗಿ ಚುನಾವಣೆ ಪ್ರಚಾರಗಳಾಗುತ್ತಿವೆ. ಚುನಾವಣಾ ನೀತಿಸಂಹಿತೆಯಿಂದ ಅಬ್ಬರಕ್ಕೆ ತೆರೆ ಬಿದ್ದಿದ್ದು, ಹಣಕ್ಕೆ ಪ್ರಾಮುಖ್ಯತೆ ಬಂದಿದೆ.

– ದಿನಕರ ಉಳ್ಳಾಲ, ಉಳ್ಳಾಲ ಕ್ಷೇತ್ರದಲ್ಲಿ 1994ರಲ್ಲಿ ಪಕ್ಷೇತರ ಪರಾಜಿತ ಅಭ್ಯರ್ಥಿ

— ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next