Advertisement

ಒಳಗಣ್ಣಿನ ಬೆಳಕಿನ ಸಾಧನೆ : ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತಮ ಫಲಿತಾಂಶ ಪಡೆದ ಗೆಳತಿಯರು

07:22 PM May 08, 2019 | Team Udayavani |

ಬದಿಯಡ್ಕ: ಒಳಗಣ್ಣಿನ ಬೆಳಕಲ್ಲಿ ಓದಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಂದ ವಿಜೇತರಾದ 4 ಮಂದಿ ಗೆಳತಿಯರ ತಂಡ ನಾಡಿಗೆ ಮಾದರಿಯಾಗಿದ್ದಾರೆ. ಕಾಸರಗೋಡು ಸರಕಾರಿ ಅಂಧರ ವಿದ್ಯಾಲಯದಲ್ಲಿ ಕಲಿತ, ಆಪ್ತ ಗೆಳತಿಯರಾದ 4 ಮಂದಿಯ ಅಕ್ಷರ ದೀಪದಡಿಯ ಸಾಧನೆಯ ಹಾದಿಯಲ್ಲಿ ದೃಷ್ಟಿ ಹೀನತೆ ತಡೆಯಾಗಿಲ್ಲ. ಪನತ್ತಡಿ ನಿವಾಸಿ ಭಾವನಾ ಭಾಸ್ಕರ್‌, ಕರಿವೇಡಗಂ ನಿವಾಸಿ ಎಂ.ಮೂವಂದಿ, ಕುತ್ತಿಕೋಲ್‌ ನಿವಾಸಿ ಎಚ್‌.ಸೌಮ್ಯಾ, ಮಡಿಕೈ ನಿವಾಸಿ ಕೆ.ಶ್ವೇತಾ ಇವರು ವಿಶೇಷ ಚೇತನೆಯ ನಡುವೆಯೂ ಕಠಿಣ ಯತ್ನದ ಮೂಲಕ ಫಲವನ್ನು ಕಂಡಿದ್ದಾರೆ.

Advertisement

ಅಕಾಡೆಮಿಕ್‌ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇವರ ಸಾಧನೆ ಗಮನಾರ್ಹವಾಗಿದೆ. ಕಳೆದ ಬಾರಿಯ ರಾಜ್ಯ ಮಟ್ಟದ ಸಎಷ್ಯಲ್‌ ಸ್ಕೂಲ್‌ ಕಲೋತ್ಸವದಲ್ಲಿ ಸಮೂಹ ಗಾಯನ, ದೇಶಭಕ್ತಿಗೀತೆ ವಿಭಾಗಗಳ ಸ್ಪರ್ಧೆಯಲ್ಲಿ ಎಶ್ರೇಣಿಯೊಂದಿಗೆ ಪ್ರಥಮ ಬಹುಮಾನವನ್ನು ಈ ಗೆಳತಿಯರ ತಂಡ ಪಡೆದುಕೊಂಡಿದೆ. ದೃಷ್ಟಿ ಹೀನರಿಗಾಗಿ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಇನ್‌ಕ್ಲೂಸಿವ್‌ ಎಜ್ಯುಕೇಶನ್‌ ಫೋರ್‌ ದಿ ಡಿಸೇಬಲ್ಡ್‌ (ಐ.ಇ.ಡಿ.) ಪ್ರಕಾರದ ಕಲಿಕೆ ಯೋಜನೆ ಮೂಲಕ ಇವರು ಶಿಕ್ಷಣ ನಡೆಸುತ್ತಿದ್ದಾರೆ. ಇತರ ವಿದ್ಯಾರ್ಥಿಗಳಿಗೂ ಕಳಿಯುತ್ತಿರುವ ಎಲ್ಲ ವಿಷಯಗಳನ್ನು ಇವರು ಅಧ್ಯಯನ ನಡೆಸುತ್ತಿದ್ದಾರೆ. ಗಣಿತದ ಬದಲು ಪ್ರತ್ಯೇಕ ಕಂಪ್ಯೂಟರ್‌ ಪಠ್ಯ ಪದ್ಧತಿಯೊಂದು ಇವರ ಕಲಿಕೆಯಲ್ಲಿದೆ. ಇದರೊಂದಿಗೆ ಮಾಹಿತಿ ತಂತ್ರಜ್ಞಾನದ ಕಲಿಕೆಯೂ ಇವರಿಗಿದೆ. ಇವರು ಸ್ಕೈÅಬ್‌ನ ಸಹಾಯದಿಂದ ಪರೀಕ್ಷೆ ಬರೆದಿದ್ದರು. ಒಂದರಿಂದ ಹತ್ತನೇ ತರಗತಿ ವರೆಗೆ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಸತಿ ಹೂಡಿ ಕಲಿಕೆ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ 7 ನೇ ತರಗತಿ ಕಲಿತು ನಂತರ ಫೌÅಢಶಾಲೆ ಕಲಿಕೆ ಕಾಸರಗೋಡು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕಾಸರಗೋಡು ಅಲ್ಲದೆ ತ್ರಿಶೂರು, ಕೋಟಯಂ, ತಿರುವನಂತಪುರಂ ಜಿಲ್ಲೆಹಳಲ್ಲಿ ಸರಕಾರಿ ಅಂಧ ವಿದ್ಯಾಲಯಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next