Advertisement
ಸುರತ್ಕಲ್: ಇಡೀ ದೇಶ ವಿಶ್ವಕಪ್ ಕ್ರಿಕೆಟ್ ಗೆದ್ದ ಸಂಭ್ರಮದಲ್ಲಿದ್ದರೆ ಸುರತ್ಕಲ್ ಕೃಷ್ಣಾಪುರ ಕುಂಜತ್ತಬೈಲ್ ದೇವಿನಗರದ ವೀರ ಯೋಧ ಹವಾಲ್ದಾರ್ ಗಿರೀಶ್ (35) ಭಾರತ-ಚೀನಾ ಗಡಿಯ ಪೂರ್ವ ಸಿಕ್ಕಿಂನ ತುದಿಯಲ್ಲಿ ಮಂಜುಗಡ್ಡೆಯಡಿ ಸಿಲುಕಿ ಒದ್ದಾಡುತ್ತಿದ್ದರು. ಅವರ ಕುಟುಂಬ ಶೋಕದಲ್ಲಿ ಮುಳುಗಿತ್ತು. ಮಗಳ ಹುಟ್ಟುಹಬ್ಬ ಆಚರಣೆಗೆ ಬರುತ್ತೇನೆಂದು ಹೇಳಿದ್ದ ಗಿರೀಶ್ ಮೃತದೇಹ ಮನೆಗೆ ತಲುಪಿತ್ತು.
ಕುಂಜತ್ತಬೈಲ್‌ನ ದೇವಿನಗರ ನಿವಾಸಿ ತಂಗಮ್ಮ ಮತ್ತು ನಾರಾಯಣ ಅವರ ಪ್ರಥಮ ಪುತ್ರ ಗಿರೀಶ್ ಅವರು 1977ರ ಡಿ. 15ರಂದು ಜನಿಸಿದರು. ಉಳ್ಳಾಲದ ಸಂತ ಸೆಬೆಸ್ಟಿಯನರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ಕೃಷ್ಣಾಪುರದ ಮದ್ಯದಲ್ಲಿ ಐಟಿಐ (ನಾರಾಯಣಗುರು) ಮುಗಿಸಿದರು. 1995ರ ಅ. 26ರಂದು 6 ಮದ್ರಾಸ್ ರೆಜಿಮೆಂಟಿನ ಯೋಧನಾಗಿ ಭೂಸೇನೆಗೆ ಆಯ್ಕೆಯಾದರು. ಅಂಡಮಾನ್, ರಾಜಸ್ಥಾನ, ಪಂಜಾಬ್, ಅಸ್ಸಾಂ, ಜಮ್ಮು-ಕಾಶ್ಮೀರ, ಸಿಕ್ಕಿಂ ಮೊದಲಾದೆಡೆ ಒಟ್ಟು 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು.
Related Articles
Advertisement
ಮಗಳ ಬರ್ತ್‌ಡೇಗೆ ಬರುತ್ತೇನೆ….ಗಿರೀಶ್ ಅವರು ಸಿಕ್ಕಿಂನಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅನಂತರ ಎನ್‌ಸಿಸಿಯಲ್ಲಿ ಆಯ್ಕೆಯಾಗಿ ತುಮಕೂರಿಗೆ ವರ್ಗಾವಣೆಗೊಂಡು ವರ್ಗಾವಣೆ ಸಮೇತ ರಜೆಯಲ್ಲಿ ಬರುವುದಾಗಿಯೂ ಎ. 16ರಂದು ಮಗಳ ಬರ್ತ್‌ಡೇಯಲ್ಲಿ ಪಾಲ್ಗೊಳ್ಳುವುದಾಗಿಯೇ ಹೇಳಿದ್ದರು. ನಾಪತ್ತೆಯಾಗುವ ಮುನ್ನಾದಿನ ಕೂಡ ಪತ್ನಿ ಶ್ರೀಕಲಾ ಅವರಿಗೆ ಕರೆ ಮಾಡಿ ಒಂದು ತಾಸು ಮಾತನಾಡಿದ್ದರು. ಮರುದಿನ ಮತ್ತೆ ಕರೆ ಮಾಡುವುದಾಗಿ ಹೇಳಿದ್ದರು. ಸೇವೆಗೆ ಹಲವು ಮೆಡಲ್
17 ವರ್ಷಗಳ ದೇಶ ಸೇವೆಯಲ್ಲಿ 50 ಇಂಡಿಪೆಂಡೆನ್ಸ್ ಅವಾರ್ಡ್ ಮೆಡಲ್, 9 ಇಯರ್ ಲಾಂಗ್ ಸರ್ವಿಸ್ ಮೆಡಲ್, ಸೈನ್ಯ ಸೇವಾ ಸರ್ವೀಸ್ ಮೆಡಲ್(ಜಮ್ಮು ಮತ್ತು ಕಾಶ್ಮೀರ), ಸ್ಪೆಷಲ್ ಸರ್ವೀಸ್ ಮೆಡಲ್ ವಿದ್ ಕ್ಲಾಸ್³, ಹೈ ಅಟಿಟ್ಯೂಡ್ ಮೆಡಲ್(ಸಿಕ್ಕಿಂ)ಗಳು ಸಂದಿವೆ. ಈ ಬಾರಿಯೂ ಸರ್‌ಪ್ರೈಸ್ ನೀಡುತ್ತಾರೆ ಅಂದುಕೊಂಡಿದ್ದೆ…
ಮಿಸ್ಸಿಂಗ್ ಆಗಿದ್ದಾರೆ ಎಂದು ಎ. 3ರಂದು ಅಪರಾಹ್ನ ಸಂದೇಶ ಬಂದಿತ್ತು. ಅವರಿಗೆ ರಜೆ ಮಂಜೂರಾಗಿತ್ತು. ಹಾಗೆ ಮನೆಗೆ ಬಂದಿರಬಹುದು. ಹೇಳದೆ ಸರ್‌ಪ್ರೈಸ್ ಆಗಿ ಬರುವುದು ಹೆಚ್ಚು. ಹಾಗೆ ಅವರು ಹೊರಟಿರಬಹುದು ಅಂದುಕೊಂಡಿದ್ದೆ. ಆದರೆ ಅವರು ಬರಲಿಲ್ಲ.
-ಶ್ರೀಕಲಾ, ಹವಾಲ್ದಾರ್ ಗಿರೀಶ್ ಅವರ ಪತ್ನಿ – ಲಕ್ಷ್ಮೀನಾರಾಯಣ ರಾವ್ ಇದನ್ನೂ ಓದಿ: Olympian Sushil Kumar: ಕುಸ್ತಿಪಟು ಹತ್ಯೆ ಪ್ರಕರಣ: ಮತ್ತೆ ಜೈಲಿಗೆ ಶರಣಾದ ಸುಶೀಲ್ ಕುಮಾರ್