Advertisement
ಮಂಡಕ್ಕಿ ಚಾಟ್ಬೇಕಾಗುವ ಸಾಮಗ್ರಿ: ಮಂಡಕ್ಕಿ- ಒಂದು ಕಪ್, ಸ್ವೀಟ್‌ಕಾರ್ನ್- ಆರು ಚಮಚ, ಖರ್ಜೂರ-ಹುಣಸೆಬೆಲ್ಲ ಸೇರಿಸಿ ರುಬ್ಬಿದ ಚಟ್ನಿ- ಎರಡು ಚಮಚ, ಕೋಡುಬಳೆ- ನಾಲ್ಕು, ಕ್ಯಾರೆಟ್‌ತುರಿ- ನಾಲ್ಕು ಚಮಚ, ನೀರುಳ್ಳಿ- ಆರು ಚಮಚ, ಹೆಚ್ಚಿದ ಟೊಮೆಟೋ- ನಾಲ್ಕು ಚಮಚ, ಕೆಂಪುಮೆಣಸಿನಪುಡಿ ಮತ್ತು ಚುರುಮುರಿ ಮಸಾಲ- ಒಂದು ಚಮಚ, ಹಸಿಮೆಣಸಿನ ಪೇಸ್ಟ್- ಒಂದು ಚಮಚ, ಚಾಟ್‌ಮಸಾಲ- ಅರ್ಧ ಚಮಚ, ಕೊತ್ತಂಬರಿಸೊಪ್ಪು ಮತ್ತು ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಹೆಚ್ಚಿದ ಕೊಬ್ಬರಿ ಚೂರು- ಆರು ಚಮಚ, ಶೇಂಗಾ- ಆರು ಚಮಚ, ಬೆಳ್ಳುಳ್ಳಿ- ಆರು ಎಸಳು, ಕರಿಬೇವು- ಸ್ವಲ್ಪ, ಕೆಂಪುಮೆಣಸು- ಎರಡು, ಮಂಡಕ್ಕಿ- ನಾಲ್ಕು ಕಪ್, ಅರಸಿನಪುಡಿ- ಒಂದು ಚಮಚ.
Related Articles
Advertisement
ಸ್ಪೆಷಲ್ ಚುರುಮುರಿಬೇಕಾಗುವ ಸಾಮಗ್ರಿ: ಮಂಡಕ್ಕಿ- ನಾಲ್ಕು ಕಪ್, ಖಾರಪುಡಿ- ಒಂದು ಚಮಚ, ಹಸಿಮೆಣಸು- ಎರಡು, ಚರುಮುರಿ ಮಸಾಲ- ಒಂದು ಚಮಚ, ತೆಂಗಿನತುರಿ- ಆರು ಚಮಚ, ಲಿಂಬೆರಸ- ನಾಲ್ಕು ಚಮಚ, ಹುರಿದ ಶೇಂಗಾ- ಆರು ಚಮಚ, ಹೆಚ್ಚಿದ ಈರುಳ್ಳಿ- ಎಂಟು ಚಮಚ, ಕೊಬ್ಬರಿಎಣ್ಣೆ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಕ್ಯಾರೆಟ್‌ತುರಿ- ಎರಡು ಚಮಚ. ತಯಾರಿಸುವ ವಿಧಾನ: ಬಿಸಿಯಾದ ಬಾಣಲೆಗೆ ಮಂಡಕ್ಕಿ ಹಾಕಿ ಗರಿಗರಿಯಾಗಿಸಿಕೊಳ್ಳಿ. ಶೇಂಗಾವನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದು ಇದಕ್ಕೆ ಸೇರಿಸಿ ಮಿಶ್ರಮಾಡಿ. ತೆಂಗಿನ ತುರಿಯನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಮಸಾಲೆ ತಯಾರಿಸಿ. ನಂತರ ಸರ್ವಿಂಗ್ ಪ್ಲೇಟ್‌ಗೆ ಶೇಂಗಾಮಿಶ್ರಿತ ಮಂಡಕ್ಕಿ ಹಾಕಿ ಮೇಲಿನಿಂದ ಕಲಸಿಟ್ಟ ಮಸಾಲೆ ಮತ್ತು ಬೇಕಿದ್ದರೆ ಸೇವ್ ಅಥವಾ ಕೋಡುಬಳೆ ಚೂರುಗಳನ್ನು ಹರಡಿ ಸರ್ವ್ ಮಾಡಬಹುದು. ಗಿರ್ಮಿಟ್
ಬೇಕಾಗುವ ಸಾಮಗ್ರಿ: ಮಂಡಕ್ಕಿ- ನಾಲ್ಕು ಕಪ್, ಈರುಳ್ಳಿ- ಒಂದು, ಹುರಿಗಡ್ಲೆ ಪೌಡರ್- ನಾಲ್ಕು ಟೀ ಚಮಚ, ಟೊಮೆಟೋ- ಒಂದು, ಕೊತ್ತಂಬರಿಸೊಪ್ಪು ಸ್ವಲ್ಪ, ಸೇವ್ ಸ್ವಲ್ಪ. ಮಸಾಲೆಗೆ : ಈರುಳ್ಳಿ- ಒಂದು, ಟೊಮೆಟೊ- ಒಂದು, ಹುರಿಗಡಲೆ ಪೌಡರ- ಎರಡು ಟೀ ಚಮಚ, ಹುಣಸೆ ರಸ- ಅರ್ಧ ಕಪ್, ಬೆಲ್ಲ- ಒಂದೂವರೆ ಟೀ ಚಮಚ, ಹಸಿಮೆಣಸಿನಕಾಯಿ- ಎರಡು, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಕೂಡಲೆ ಸಾಸಿವೆ, ಜೀರಿಗೆ, ಕರಿಬೇವು ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಅರಸಿನ, ಉಪ್ಪು ಹಾಕಿ ಮಿಶ್ರಮಾಡಿಕೊಳ್ಳಿ. ಟೊಮೆಟೋ ಹಾಕಿ ಬೆಂದ ನಂತರ ಹುಣಸೆ ಮತ್ತು ಬೆಲ್ಲದ ಮಿಶ್ರಣ ಹಾಕಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಎರಡು ಚಮಚ ಹುರಿಗಡಲೆ ಪುಡಿ ಹಾಕಿ ಮಸಾಲೆ ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ. ಮಂಡಕ್ಕಿಯನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಇದಕ್ಕೆ ಟೊಮೆಟೋ, ನೀರುಳ್ಳಿ, ಹುರಿಗಡಲೆ ಪೌಡರ್ ಮತ್ತು ಬೇಕಷ್ಟು ಮಸಾಲೆ ಸೇರಿಸಿ ಮೇಲಿನಿಂದ ಕೊತ್ತಂಬರಿಸೊಪ್ಪು ಮತ್ತು ಸೇವ್‌ನ್ನು ಹರಡಿ ಸರ್ವ್ ಮಾಡಿ. ಗೀತಸದಾ