Advertisement

Test ಆಟಗಾರರಿಗೆ ವಿಶೇಷ ವೇತನ: ಬಿಸಿಸಿಐ

11:53 PM Feb 28, 2024 | Team Udayavani |

ಹೊಸದಿಲ್ಲಿ: ಟೆಸ್ಟ್‌ ಕ್ರಿಕೆಟಿಗರಿಗೆ “ವಿಶೇಷ ವೇತನ’ ನೀಡುವ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ. ವಾರ್ಷಿಕ ಒಡಂಬಡಿಕೆಯ ವೇತನದ ಜತೆಗೆ ಹೆಚ್ಚುವರಿ ಮೊತ್ತ ನೀಡುವುದು ಮಂಡಳಿಯ ಯೋಜನೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ, ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗಷ್ಟೇ ಇದು ಅನ್ವಯವಾಗುತ್ತದೆ.

Advertisement

ಆಟಗಾರರು ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚಿನ ಆಸಕ್ತಿ ವಹಿಸಬೇಕು, ಹೆಚ್ಚೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಬೇಕು, ಸಾಂಪ್ರದಾಯಿಕ ಕ್ರಿಕೆಟನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎನ್ನುವುದು ಇದರ ಉದ್ದೇಶ.

ಪ್ರಸ್ತುತ ಭಾರತದಲ್ಲಿ ಟೆಸ್ಟ್‌ ಪಂದ್ಯ ವೊಂದಕ್ಕೆ ಆಟಗಾರರಿಗೆ ಲಭಿಸುವ ವೇತನ 15 ಲಕ್ಷ ರೂ. ಐಪಿಎಲ್‌ ಬಳಿಕ ಒಂದು ಋತುವಿನ ಎಲ್ಲ ಟೆಸ್ಟ್‌ ಸರಣಿಗಳನ್ನು ಆಡುವ ಆಟಗಾರರಿಗೆ “ಬೋನಸ್‌’ ರೂಪದ ನೂತನ ಮಾದರಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next