Advertisement
ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಂದ ವಿಶೇಷ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಶಾಲಾ ಶಿಕ್ಷಕರು ಏರ್ಪಡಿಸಿದರು. ಈ ವೇಳೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಬಣ್ಣ ಬಣ್ಣದ ವಿಜ್ಞಾನ ಚಿತ್ರಗಳನ್ನು ರಂಗೋಲಿ ರೂಪದಲ್ಲಿ ಬಿಡಿಸಿದರು. ಮಕ್ಕಳಿಗೆ ವಿಜ್ಞಾನ ವಿಷಯದ ಚಿತ್ರಗಳನ್ನು ಬಿಡಿಸಲು ಸ್ಪರ್ಧೆಯಲ್ಲಿ ಹೇಳಲಾಗಿತು. ಪ್ರತಿ ವಿಧ್ಯಾರ್ಥಿಗಳು ತಮಗೆ ಇಷ್ಟವಾದ ವಿಜ್ಞಾನ ಚಿತ್ರದ ರಂಗೋಲಿ ಬಿಡಿಸಲು ಸೂಚಿಸಲಾಗಿತ್ತು. ಹೀಗಾಗಿ ವಿಧ್ಯಾರ್ಥಿಗಳು ಉತ್ಸಾಹದಿಂದಲೇ ವಿಜ್ಞಾನ ಚಿತ್ರಗಳ ರಂಗೋಲಿಯನ್ನು ಬಿಡಿಸಿ ಅವುಗಳಿಗೆ ಬಣ್ಣ ಹಾಕಿ ಅಂದಗೊಳಿಸಿದ್ದರು.
Related Articles
Advertisement
ಈ ಕಾರ್ಯಕ್ರಮದಲ್ಲಿ ಶಾಲಾ ಸುಧಾರಣ ಸಮಿತಿ ಅಧ್ಯಕ್ಷ, ಸದಸ್ಯರು, ಶಾಲಾ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತಿರಿದ್ದರು.