Advertisement

ಚಾಲಕರ ಜೀವನಭದ್ರತೆಗೆ ದೇಶದಲ್ಲೇ ವಿಶೇಷ ಕಾನೂನು

12:30 AM Aug 15, 2021 | Team Udayavani |

ಬೆಳ್ತಂಗಡಿ: ಕಾರ್ಮಿಕ ಇಲಾಖೆಗೆ ಹೊಸ ರೂಪ, ಶಕ್ತಿ ನೀಡುವ ಸಂಕಲ್ಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ನೀಡುವ ನಿರ್ಧಾರವಾಗಿದೆೆ. ಮುಂದಿನ 10 ದಿನಗಳಲ್ಲಿ ರಾಜ್ಯದಲ್ಲಿ ಟ್ರಕ್‌, ಆಟೋ ಚಾಲಕರು, ಕ್ಲೀನರ್‌ಗಳು, ತಂತ್ರಜ್ಞರು ಸೇರಿದಂತೆ ವಾಹನಗಳ  ಉದ್ಯೋಗ ನಿರ್ವಹಿಸುತ್ತಿರುವವರಿಗೆ ಸಂಬಂಧಿಸಿ ದೇಶದಲ್ಲೇ ಮೊದಲ ಬಾರಿಗೆ ಹೊಸ ಮಾದರಿ ಕಾರ್ಮಿಕ ಕಾನೂನನ್ನು ಜಾರಿಗೆ ತರಲಿದ್ದೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್‌ ಹೇಳಿದರು.

Advertisement

ಬೆಳ್ತಂಗಡಿಯಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿ, ದೇಶದ ಬೆನ್ನೆಲುಬಾಗಿ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ತತ್‌ಕ್ಷಣ 5 ಲಕ್ಷ ರೂ., ನಿವೃತ್ತ ರಾದವರಿಗೆ 50 ಸಾವಿರ ರೂ., ಮಕ್ಕಳಿಗೆ ವಿದ್ಯಾರ್ಥಿವೇತನ, ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯಧನ ಸೇರಿದಂತೆ ಹತ್ತಾರು ಯೋಜನೆಗಳನ್ನು ಚಾಲಕರ ಶ್ರೇಯೋಭಿವೃದ್ಧಿಗೆ ರೂಪಿಸಿ ಹೊಸ ಕಾರ್ಮಿಕ ಕಾನೂನನ್ನು ಮುಂಬರುವ ಅಧಿವೇಶನದಲ್ಲಿ ಪ್ರಕಟಿಸಲಾಗುವುದು ಎಂದರು.

ಕಳೆದ ಎರಡು ದಶಕಗಳಿಂದ ಕಾರ್ಮಿಕ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನ ವನ್ನು 2 ಸಾವಿರದಿಂದ 4 ಸಾವಿರ ರೂ.ಗೆ ಏರಿಸಿದ್ದೇವೆ. ಕಾರ್ಮಿಕರ ವೇತನಕ್ಕಾಗಿ ಇಲಾಖೆ ಪ್ರತೀ ವರ್ಷ 280 ಕೋ.ರೂ. ನೀಡುತ್ತಿತ್ತು. ಅದನ್ನು 391 ಕೋ.ರೂ.ಗೆ ಹೆಚ್ಚಿಸಲಾಗಿದೆ. ವಿಶೇಷವಾಗಿ ಕಾರ್ಮಿಕರ ಮಕ್ಕಳು ರಾಷ್ಟ್ರೀಯ ಮಟ್ಟದ ಶಿಕ್ಷಣ ಪಡೆಯಬೇಕೆಂದು ಬಯಸಿದಲ್ಲಿ ಕಾರ್ಮಿಕ ಇಲಾಖೆ ಅದರ ಸಂಪೂರ್ಣ ವೆಚ್ಚ ಭರಿಸಲಿದೆ. ಇದಕ್ಕಾಗಿ ಐಎಎಸ್‌, ಐಪಿಎಸ್‌ ತರಬೇತಿ ಪಡೆಯಲು ಕೋಚಿಂಗ್‌ ಕೊಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಹೊರಗುತ್ತಿಗೆ ನಿಯಂತ್ರಣ :

ಸರಕಾರಿ ಅಥವಾ ಸರಕಾರೇತರ ಕಂಪೆನಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಯಾವುದೇ ನಿಯಮಬದ್ಧ ಸೌಲಭ್ಯಗಳು ದೊರೆಯುತ್ತಿಲ್ಲ. ಅದಕ್ಕಾಗಿ ಕರ್ನಾಟಕ ಕಾರ್ಮಿಕ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಒಟ್ಟಾಗಿ ಕಾರ್ಯ ನಿರ್ವಹಿಸಲಿವೆ. ಹೊರಗುತ್ತಿಗೆ ನಿಯಂತ್ರಣ ಕಾಯ್ದೆಯಡಿ ಕಠಿಣ ಕಾನೂನು ಹೊರತರುತ್ತಿದೆ ಎಂದರು.

Advertisement

ನಕಲಿ ಏಜೆಂಟ್‌ಗಳ ವಿರುದ್ಧ ತನಿಖೆ :

ನಕಲಿ ಏಜೆಂಟ್‌ ಹಾಗೂ ನಕಲಿ ಕಾರ್ಮಿಕ ಕಾರ್ಡ್‌ದಾರರ ಕಡಿವಾಣದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಕಲಿ ಕಾರ್ಡ್‌ ಸೃಷ್ಟಿಯಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದೇನೆ. ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ನಕಲಿ ಕಾರ್ಡ್‌ ಹೊಂದಿರುವವರಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ರದ್ದುಪಡಿಸಿ, ನಕಲಿ ಕಾರ್ಡ್‌ ತಡೆಯಲು ವಿಶೇಷ ಕಾನೂನು ತರುತ್ತಿದ್ದೇವೆ ಎಂದರು.

ಪತ್ರಕರ್ತರೂ ಕಾರ್ಮಿಕರು ಮಾಧ್ಯಮದವರನ್ನು ಸೇರಿಸಿ ಒಟ್ಟು 101 :

ಅಸಂಘಟಿತ ಕಾರ್ಮಿಕರು ಈಗಾಗಲೇ ಇಲಾಖೆ ಪಟ್ಟಿಯಿಂದ ಹೊರಗಿದ್ದಾರೆ. ಅಸಂಘಟಿತರನ್ನು ಸಂಘಟಿತ ಕಾರ್ಮಿಕ ರಾಗಿ ತರುವ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಪತ್ರಕರ್ತರ ಸೇವೆಯನ್ನೂ ಪರಿಗಣಿಸಿ ನ್ಯಾಯ ಕೊಡಿಸುವ ನೆಲೆಯಲ್ಲಿ ಕಾರ್ಮಿಕರ ವರ್ಗಕ್ಕೆ ಸೇರಿಸುವ ಪ್ರಯತ್ನವಾಗುತ್ತಿದೆ. ಸದ್ಯದಲ್ಲೇ ಕಾರ್ಯಗತಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next