ಧುಲೆ: ಬುಡಕಟ್ಟು ಜನರಿಗೆ ಶಾಶ್ವತ ಉದ್ಯೋಗ ಒದಗಿಸುವುದು ಅಗತ್ಯವಾಗಿದ್ದು, ಇದಕ್ಕಾಗಿ ಬುಡಕಟ್ಟು ಅಭಿವೃದ್ಧಿ ಇಲಾಖೆ ಮೂಲಕ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತಿರುವುದಾಗಿ ಎಂದು ಬುಡಕಟ್ಟು ಅಭಿವೃದ್ಧಿ ಸಚಿವ ಕೆ. ಸಿ. ಪಾಡ್ವಿ ಹೇಳಿದ್ದಾರೆ.
ಪಿಂಪಾಲ್‌ನರ್ ಹರಿಭಾವು ಚೌರೆ ಆಶ್ರಮ ಶಾಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರ ಬುಡಕಟ್ಟು ಅಭಿವೃದ್ಧಿ ನಿಗಮ ಮತ್ತು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಆಯೋಜಿಸಿದ್ದ ಖಾವಿ¤ ಅನುದಾನ ಯೋಜನೆಯಡಿ ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಖಾವ್ತಿ ಯೋಜನೆ ರಾಜ್ಯದ 27 ಲಕ್ಷ ಕುಟುಂಬಗಳಲ್ಲಿ 12 ಲಕ್ಷ ಕುಟುಂಬಗಳಿಗೆ ಪ್ರಯೋಜನವನ್ನು ನೀಡಲಿದೆ. ಯೋಜನೆ ಅಡಿಯಲ್ಲಿ ವಸ್ತುಗಳ ಗುಣಮಟ್ಟ ಉತ್ತಮ ವಾಗಿಡಲು ಸೂಚನೆ ನೀಡಲಾಗಿದೆ. ಕಳಪೆ ಸರಕುಗಳನ್ನು ವಿತರಿಸಿದರೆ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗು ವುದು. ಬುಡಕಟ್ಟು ಜನರು ಉತ್ತಮ ಸೌಲಭ್ಯಗಳನ್ನು ಪಡೆಯಬೇಕು, ಅವರನ್ನು ಅಭಿವೃದ್ಧಿಪಡಿಸಬೇಕು. ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕೋಲ್ಡ್ ಸ್ಟೋರೇಜ್‌ಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸ ಲಾಗುವುದು. ಇದಕ್ಕಾಗಿ 60ರಿಂದ 70 ಕೋಟಿ ರೂ. ಪೈಲಟ್ ಆಧಾರದ ಮೇಲೆ ನಂದೂರ್‌ಬಾರ್‌ನಿಂದ ಪ್ರಾರಂಭವಾಗುವ ಈ ಯೋಜನೆಯನ್ನು ರಾಜ್ಯದ ಬೇರೆಡೆ ಜಾರಿಗೆ ತರಲಾಗುವುದು ಎಂದರು.
ಬುಡಕಟ್ಟು ಅಭಿವೃದ್ಧಿ ಇಲಾಖೆ ಮೂಲಕ ಸಕ್ರಿ ತಾಲೂಕಿನಲ್ಲಿ ಶಿಕ್ಷಣ, ನೀರು ಮತ್ತು ರಸ್ತೆ ಅಭಿವೃದ್ಧಿ ಸಹಿತ ವಿವಿಧ ಯೋಜನೆಗಳಿಗೆ ಅಗತ್ಯ ನಿಧಿ ನೀಡಲಾಗುವುದು. ಉದ್ಯೋಗ ಸೃಷ್ಟಿಗೆ ನವೀನ ಯೋಜನೆಗಳನ್ನು ರೂಪಿಸ ಲಾಗುವುದು ಎಂದರು.
ಅಭಿವೃದ್ಧಿಗೆ ವಿವಿಧ ಯೋಜನೆ:
ಧುಲೆ ಮತ್ತು ನಂದೂರ್‌ಬಾರ್ ಜಿಲ್ಲೆಗಳ ಅಭಿವೃದ್ಧಿಗೆ ಸರಕಾರ ವಿಶೇಷ ಗಮನ ಹರಿಸಿದೆ. ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಶಾಸಕಿ ಮಂಜುಳಾ ಗಾವಿತ್ ಹೇಳಿದರು.
ಸಹಾಯಕ ಕಲೆಕ್ಟರ್ ಮತ್ತು ಯೋಜನಾ ಅಧಿಕಾರಿ ತ್ರಿಪ್ತಿ ಧೋಡ್ಮೆಸ್, ಮಾಜಿ ಸಂಸದ ಬಾಪು ಚೌರೆ, ಪಂ. ಸಮಿತಿ ಅಧ್ಯಕ್ಷೆ ಪ್ರತಿಭಾ ಸೂರ್ಯವಂಶಿ, ಶ್ಯಾಮ್ ಸಾರ್ನೆ, ಉತ್ತಮರಾವ್ ದೇಸಲೆ, ಗೋವಲ್ ಪಾಡ್ವಿ ಮೊದಲಾದವರು ಉಪಸ್ಥಿತರಿದ್ದರು.