Advertisement
ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಾಗೂ ಮದ್ರಸಾಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ರಾಷ್ಟ್ರಭಕ್ತಿ ಮೂಡಿಸುವುದಕ್ಕಾಗಿ ಗಾಯನ, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟ, ಹೋರಾಟ ಗಾರರ ವೇಷಭೂಷಣ ಹಾಗೂ ರಾಷ್ಟ್ರ ಬಾವುಟದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ವಿಜೇತರಿಗೆ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸುವಂತೆ ತಿಳಿಸಲಾಗಿದೆ.
Related Articles
Advertisement
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಒಂದೇ ಮಾನದಂಡದ ರೂಪದಲ್ಲಿ ಬೋಧನ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಲೆಕ್ಕಾಚಾರ ಮಾಡಿ ಪಡೆದುಕೊಳ್ಳಲು ಹೈಕೋರ್ಟ್ ನಿರ್ದೇಶನ ನೀಡಿದೆ. ಆ ಪ್ರಕಾರ ಎಲ್ಲ ಶಾಲೆಗಳು ಡಿಸೆಂಬರ್‌ನೊಳಗೆ ತಮ್ಮ ಶುಲ್ಕ ವಿವರಗಳನ್ನು ಪ್ರಕಟಿಸುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಅದರಂತೆ 2023-24ನೇ ಶೈಕ್ಷಣಿಕ ಸಾಲಿನ ಶುಲ್ಕದ ವಿವರಗಳನ್ನು ಈ ಡಿಸೆಂಬರ್‌ನಲ್ಲಿಯೇ ಪ್ರಕಟಿಸುವಂತೆ ಸೂಚಿಸಲಾಗಿದೆ.