Advertisement

“ವಿಶಿಷ್ಟಚೇತನರ ಉನ್ನತಿಗೆ ವಿಶೇಷ ಆದ್ಯತೆ’

01:04 AM May 06, 2019 | sudhir |

ಮಂಗಳೂರು: ವಿಶಿಷ್ಟ ಚೇತನರ ಅಭಿವೃದ್ಧಿಗೆ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ತಾವು ಮೀಸಲಿರಿಸುವ ಅನುದಾನ, ನಿಧಿ ಗಳು ಮತ್ತು ಸರಕಾರೇತರ ಸಂಸ್ಥೆ ಗಳು ಸಂಗ್ರಹಿಸುವ ನಿಧಿ ನಿಗದಿತ ಉದ್ದೇಶ ಗಳಿಗೆ ಸಮರ್ಪಕವಾಗಿ ಬಳಕೆಯಾಗುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ದ.ಕ. ಜಿÇÉಾಧ್ಯಕ್ಷ, ಚಾರ್ಟರ್ಡ್‌ ಅಕೌಂಟೆಂಟ್‌ ಶಾಂತಾರಾಮ ಶೆಟ್ಟಿ ಹೇಳಿದರು.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ರವಿವಾರ ಆಯೋಜಿಸಿದ್ದ ಸಂಘದ 27ನೇ ವಾರ್ಷಿಕ ಸಮಾವೇಶ, ದಿವ್ಯಾಂಗರಿಗೆ ವೈದ್ಯಕೀಯ ನೆರವು ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಎಡಿಸಿ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಗೌ| ಕಾರ್ಯದರ್ಶಿ ಡಾ| ಎಸ್‌.ಎ. ಪ್ರಭಾಕರ್‌ ಶರ್ಮ ಮಾತನಾಡಿ, ಸರಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ವ್ಯತ್ಯಯ ಇಲ್ಲದೆ ತಲುಪಬೇಕು. ಸರ ಕಾರಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಉತ್ತರದಾಯಿತ್ವ ಪ್ರದರ್ಶಿಸಬೇಕು ಎಂದರು.

ನಿಟ್ಟೆ ವಿವಿ ಸಹಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್‌ ಎ. ಮಾತ ನಾಡಿ, ವಿಕಲಚೇತನರಿಗೆ ಸರಕಾರ ಕಲ್ಪಿಸುವ ನೆರವಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ದ. ಕನ್ನಡ ರಾಜ್ಯದÇÉೇ ಪ್ರಥಮ ಸ್ಥಾನ ದಲ್ಲಿದೆ ಎಂದರು. ಲೋಕಸಭೆ ಚುನಾವಣೆ ಯಲ್ಲಿ ಜಿÇÉೆಯಲ್ಲಿ ವಿಕಲಚೇತನರು ಶೇ. 100 ಮತದಾನ ಮಾಡಿ¨ªಾರೆ ಎಂದದವರು ಹರ್ಷ ವ್ಯಕ್ತಪಡಿಸಿದರು.

38 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 22 ಮಂದಿಗೆ ನೆರವು ವಿತರಿಸಲಾಯಿತು. ಅಬ್ದುಲ್‌ ರೆಹಮಾನ್‌ ಮತ್ತು ಅಶ್ಲಿ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.

Advertisement

ಡಾ| ವಿ. ಮುರಳೀಧರ ನಾೖಕ್‌, ಗುಣಪಾಲ, ಕೆ. ನಿತೇಶ್‌ ಶೆಟ್ಟಿ, ಯಮುನಾ, ಬಿ. ನಿತ್ಯಾನಂದ ಶೆಟ್ಟಿ, ರವೀಂದ್ರನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next