Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಸಮಾಜಕ್ಕೆ ರತ್ನಪ್ರಾಯರು, ಕಳಸಪ್ರಿಯರು, ಮಹಾತಪಸ್ವಿ ಸಿದ್ಧಗಂಗಾ ಶ್ರೀಗಳ ವೈರಾಗ್ಯ ತ್ಯಾಗ, ಸಮಾಜ ಪ್ರೇಮವನ್ನ ಎಲ್ಲಾ ಸ್ವಾಮೀಜಿಗಳು ಅನುಸರಿಸಬೇಕಿದೆ. ಶ್ರೀಗಳಿಂದ ಎಲ್ಲಾ ಮಠ ಮಾನ್ಯಗಳಿಗೆ ಶಕ್ತಿ ಬಂದಿದೆ. ಶ್ರೀಗಳು ಇಚ್ಛಾಮರಣಿಗಳು. ಅವರಿಗೆ ಯಾವಾಗ ಇಷ್ಟವಾಗುತ್ತೆ ಅಂದು ಅವರು ಲಿಂಗೈಕ್ಯರಾಗ್ತಾರೆ. ನೂರು ವರ್ಷದ ನಂತರ ಯಾರಿಗೂ ಶಸ್ತ್ರ ಚಿಕಿತ್ಸೆ ಮಾಡಲು ಬರುವುದಿಲ್ಲ. ಶ್ರೀಗಳ ಆರೋಗ್ಯ ವಿಜ್ಞಾನಕ್ಕೆ ಒಂದು ಸವಾಲಾಗಿದೆ. ಚಿಕಿತ್ಸೆ ನೀಡುವ ವೈದ್ಯರಿಗೆ ಒಂದು ಆಶ್ಚರ್ಯವಾಗಿದೆ. ಮಹಾಸ್ವಾಮಿಗಳ ಆರೋಗ್ಯ ಸುಧಾರಣೆಯಾಗಬೇಕೆಂದು ನಾಡಿನ ಕೋಟ್ಯಂತರ ಭಕ್ತರು ಬೇಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
Related Articles
Advertisement
• ಭಾರತ ರತ್ನ ನೀಡಲು ಜನಾಗ್ರಹ
ಡಾ| ಶಿವಕುಮಾರ ಶ್ರೀಗಳಿಗೆ ಭಾರತರತ್ನ ಕೊಡಿಹಗರಿಬೊಮ್ಮನಹಳ್ಳಿ : ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸಂಘಟನೆಯ ಅಧ್ಯಕ್ಷ ಟಿ.ಮಹೇಂದ್ರ ಮಾತನಾಡಿ, ನಡೆದಾಡುವ ದೇವರು ಶತಾಯುಷಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರ ತ್ಯಾಗ, ಸೇವಾ ಮನೋಭಾವ ಪರಿಗಣಿಸಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ಉನ್ನತ ಸಾಧನೆಗೈದು ಸಮಾಜಮುಖೀಯಾದ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನಿಯವರು ಕೂಡಲೇ ಘೋಷಿಸಬೇಕು. ಪ್ರಧಾನಿಯವರು ಸ್ವಾಮೀಜಿಗೆ ಭಾರತ ರತ್ನ ನೀಡಿ ಕನ್ನಡಿಗರ ಮನ ಗೆಲ್ಲಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ದೇವರಮನಿ ನೀಲಪ್ಪ, ವರಲಹಳ್ಳಿ ಶಿವಕುಮಾರ, ಕೆ.ಮಹೇಶ್, ಆನಂದೇವನಹಳ್ಳಿ ಪ್ರಭು ಇತರರಿದ್ದರು. ಗೋಣಿಬಸವೇಶ್ವರಗೆ ವಿಶೇಷ ಪೂಜೆ
ಹೂವಿನಹಡಗಲಿ: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವೃದ್ಧಿಗಾಗಿ ಪಟ್ಟಣದ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸ್ವಾಮೀಜಿಗಳ ಆಯುಷ್ಯ ವೃದ್ಧಿ ಹಾಗೂ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಲೆಂದು ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಶತನಾಮಾವಳಿ, ಮಹಾಮಂಗಳಾರತಿ ನಡೆಸಲಾಯಿತು. ದೇವಸ್ಥಾನ ಸಮಿತಿಯವರು, ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು, ದೈವಸ್ಥರು ಭಾಗವಹಿಸಿದ್ದರು.