Advertisement

ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆ

08:46 AM Jan 11, 2019 | Team Udayavani |

ಬೀದರ: ಭಾರತೀಯ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಅಂಚೆ ಚೀಟಿ ಸಂಗ್ರಹಣೆಯ ಪ್ರದರ್ಶನ ಕಾರ್ಯಕ್ರಮದ ಎರಡನೇಯ ದಿನ ಗುರುವಾರ ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪದ ಚಿತ್ರಾತ್ಮಕ ರದ್ದೀಕರಣ ಮುದ್ರೆಯನ್ನು ಬಸವಲ್ಯಾಣ ಅಂಚೆ ಕಚೇರಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.

Advertisement

ಧಾರವಾಡದ ಉತ್ತರ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ ಜನರಲ್‌ ವೀಣಾ ಶ್ರೀನಿವಾಸ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವು ಅಭಿರುಚಿಗಳನ್ನು ತೀಕ್ಷ್ಣಗೊಳಿಸುವುದರ ಜೊತೆಗೆ ಮನಸ್ಸಿಗೆ ತೃಪ್ತಿ ನೀಡುತ್ತದೆ. ಸಮಯದ ಸದುಪಯೋಗ, ಯೋಚನೆಗೆ ಗ್ರಾಸ ನೀಡುವ ಸಂತೋಷಕರ ಹವ್ಯಾಸವಾಗಿದ್ದು, ಜ್ಞಾನಾರ್ಜನೆಗೆ ಸಹಕಾರಿಯಾಗಿದೆ. ಮಕ್ಕಳು ಇದರ ಉಪಯೋಗ ಪಡೆಯಬೇಕು ಎಂದು ಹೇಳಿದರು.

ಸುಶೀಲಾದೇವಿ ಚಾರಿಟೇಬಲ್‌ ಟ್ರಸ್ಟ್‌ ಕಾರ್ಯದರ್ಶಿ ಮಾಲತಿ ಎವಳೆ ಮಾತನಾಡಿ, ಅಂಚೆ ಇಲಾಖೆಯು ವಿಶ್ವದ ಮೊದಲ ಸಂಸತ್ತಾದ ಅನುಭವ ಮಂಟಪದ ಮೇಲೆ ಸ್ಥಾಯಿ ಚಿತ್ರಾತ್ಮಕ ರದ್ದೀಕರಣ ಮುದ್ರೆಯನ್ನು ಬಸವಲ್ಯಾಣ ಅಂಚೆ ಕಚೇರಿಯಲ್ಲಿ ಪ್ರಾರಂಭಿಸಿರುವುದು ಹಾಗೂ ಅನುಭವ ಮಂಟಪದ ಮೇಲೆ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆ ಮಾಡಿರುವುದು ಸಂತಸ ನೀಡಿದೆ ಎಂದು ಹೇಳಿದರು.

ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಣಿಕಪ್ಪ ಗಾದ ಮಾತನಾಡಿ, ಅಂಚೆ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು. ಬೀದರ ಅಂಚೆ ಕಚೇರಿಗಳ ಅಧೀಕ್ಷಕರಾದ ವಿ.ಎಸ್‌.ಎಲ್‌. ನರಸಿಂಹರಾವ್‌ ಪ್ರಾಸ್ತಾವಿಕ ಮಾತನಾಡಿದರು. ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್‌ ಕಾರ್ಯಕ್ರ ನಿರೂಪಿಸಿದರು. ರಶ್ಮಿ ಶರ್ಮಾ ಪ್ರಾರ್ಥನೆ ಗೀತೆ ಹಾಡಿದರು. ಕಲ್ಲಪ್ಪಾ ಕೋಣಿ ಸ್ವಾಗತಿಸಿದರು. ಗುಂಡಪ್ಪಾ ಕನಕಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next