Advertisement

Indian Army “ಯುವತಿ ದೇಶ ಸೇವೆಗೆ ಪಣತೊಟ್ಟಿರುವುದು ಹೆಮ್ಮೆಯ ವಿಷಯ’

09:15 PM Nov 14, 2023 | Team Udayavani |

ಕುಂದಾಪುರ: ಬಿ.ಎಸ್‌.ಎಫ್‌ ಕ್ಯಾಂಪ್‌ನಲ್ಲಿ 11 ತಿಂಗಳ ತರಬೇತಿ ಪಡೆದು ಭಾರತ ಸೇನೆಯಿಂದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಕುಂದಾಪುರ ತಾಲೂಕಿನ ಹೆಮ್ಮಾಡಿ ಮೂಲದ ಸಂಜೀವ-ಗಂಗಾ ದಂಪತಿಯ ಪುತ್ರಿ ಸುನೀತಾ ಪೂಜಾರಿ ಅವರನ್ನು ಕುಂದಾಪುರದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

Advertisement

ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಸುನೀತಾ ಪೂಜಾರಿ ಅವರಿಗೆ ಅಭಿನಂದಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್‌ ಪೂಜಾರಿ ಬೀಜಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೈನ್ಯಕ್ಕೆ ಸೇರುವರ ಸಂಖ್ಯೆ ವಿರಳ. ಅದರಲ್ಲಿಯೂ ಓರ್ವ ಯುವತಿ ಉತ್ಸಾಹಿಯಾಗಿ ಮುಂದೆ ಬಂದಿರುವುದಕ್ಕೆ ಮನೆಯವರ ಪ್ರೋತ್ಸಾಹ ಕೂಡ ಕಾರಣ. ಇವರಿಂದ ಸ್ಫೂರ್ತಿಯಾಗಿ ಯುವಜನಾಂಗ ಸೈನಕ್ಕೆ ಸೇರಬೇಕು. ಬಿಲ್ಲವ ಸಮಾಜದ ಯುವತಿ ದೇಶ ಸೇವೆಗೆ ಪಣತೊಟ್ಟಿರುವುದು ನಮಗೂ ಹೆಮ್ಮೆಯ ಸಂಗತಿ ಎಂದರು.

ಸೇನೆಗೆ ನಿಯೋಜನೆಗೊಂಡ ಪಂಜಾಬ್‌ ಮೂಲದ ಆಯಂತಿಕಾ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್‌ ಪೂಜಾರಿ ವಿಠಲವಾಡಿ, ಉಪಾಧ್ಯಕ್ಷ ಶಿವರಾಮ ಪೂಜಾರಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ್‌ ಪೂಜಾರಿ ಕೋಡಿ, ರಮೇಶ್‌ ಪೂಜಾರಿ, ನಾಗರಿಕ ಹಿತರಕ್ಷಣಾ ವೇದಿಕೆಯ ಕೃಷ್ಣ ಪೂಜಾರಿ, ಹೆಮ್ಮಾಡಿ ರಿಕ್ಷಾ ಚಾಲಕ-ಮಾಲಕರ ಯೂನಿಯನ್‌ನ ಪ್ರವೀಣ್‌, ಮುಸ್ಲಿಂ ಸಮುದಾಯದ ಮುಖಂಡ ಯಾಸಿನ್‌ ಹೆಮ್ಮಾಡಿ ಮೊದಲಾದವರಿದ್ದರು. ರಾಜೇಶ್‌ ಕಡ್ಗಿಮನೆ ಸ್ವಾಗತಿಸಿ, ವಂದಿಸಿದರು. ಸೇನೆಗೆ ನಿಯೋಜಿತರಾದ ಇಬ್ಬರು ಯುವತಿಯರು ಲಾಲ್‌ ಬಹದ್ದೂರ್‌ ಶಾಸ್ತ್ರಿ ಪ್ರತಿಮೆಗೆ ವಂದಿಸಿದರು. ಬಳಿಕ ಕುಂದಾಪುರದಿಂದ ತೆರದ ವಾಹನದಲ್ಲಿ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ ಕರೆದೊಯ್ಯಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next