Advertisement

ಉಗ್ರರಿಂದ ಮತ್ತೊಬ್ಬ ಪೊಲೀಸ್‌ ಅಪಹರಣ

06:00 AM Jul 29, 2018 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತೂಬ್ಬ ಪೊಲೀಸ್‌ ಸಿಬಂದಿಯನ್ನು ಅಪಹರಿಸಿದ್ದಾರೆ. ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ಅಪಹರಣ ಪ್ರಕರಣ ಇದಾಗಿದೆ.  ಇದಕ್ಕೂ ಮುನ್ನ ಉಗ್ರರು ಇಬ್ಬರು ಪೊಲೀಸರನ್ನು ಅಪಹರಿಸಿ, ಹತ್ಯೆಗೈದಿದ್ದರು. ಪುಲ್ವಾಮಾ ಜಿಲ್ಲೆಯ ವಿಶೇಷ ಪೊಲೀಸ್‌ ಅಧಿಕಾರಿ ಮುದಸ್ಸಿರ್‌ ಅಹಮದ್‌ ಲೋನ್‌ ಅವರನ್ನು ಆವಂತಿಪುರದಲ್ಲಿನ ರೆಶಿಪೊರಾ ಪೊಲೀಸ್‌ ಠಾಣೆಗೆ ನಿಯೋಜಿಸಲಾಗಿತ್ತು. ಶುಕ್ರವಾರ ರಾತ್ರಿಯೇ ಅವರು ನಾಪತ್ತೆಯಾದ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದರು. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Advertisement

50 ಬುಲೆಟ್‌ಪ್ರೂಫ್ ಬಂಕರ್‌ಗಳು
ಉಗ್ರರ ದಾಳಿಯಿಂದ ರಕ್ಷಿಸಿಕೊಳ್ಳಲು ಜಮ್ಮು ಕಾಶ್ಮೀರ ಪೊಲೀಸರು 50 ಬುಲೆಟ್‌ ಪ್ರೂಫ್ ಬಂಕರ್‌ಗಳನ್ನು ಖರೀದಿಸಿದ್ದಾರೆ. ಎನ್‌ಐಜೆ 3 ಮಟ್ಟದ ಬಂಕರ್‌ಗಳು ಇವಾಗಿದ್ದು, ಒಂದರಲ್ಲಿ 10 ಪೊಲೀಸರು ಕುಳಿತುಕೊಳ್ಳಬಹುದಾಗಿದೆ. 10 ಮೀ. ಗಳಷ್ಟು ಸನಿಹದಿಂದ ಗುಂಡು ಹಾರಿಸಿದರೂ ಇದ ರೊಳಗಿರುವವರಿಗೆ ಯಾವುದೇ ಬಾಧೆಯಾಗದು. ಎಕೆ 47 ಹಾಗೂ ಎಸ್‌ಎಲ್‌ಆರ್‌ ಗುಂಡಿಗೂ ತಡೆದು ಕೊಳ್ಳಬಲ್ಲ ಸಾಮರ್ಥ್ಯವನ್ನು ಇವು ಹೊಂದಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next