Advertisement

ವಿಶೇಷ ಕಾರ್ಯಾಚರಣೆ: 20 ವಾಹನಗಳಿಂದ ಟಿಂಟ್‌ ತೆರವು

11:17 AM Nov 14, 2018 | Team Udayavani |

ಮಂಗಳೂರು: ನಗರ ಸಂಚಾರ ಎಸಿಪಿ ಮತ್ತು ಅಧಿಕಾರಿಗಳ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಸನ್‌ ಫಿಲ್ಮ್ (ಟಿಂಟ್‌ ಗ್ಲಾಸ್‌) ಅಳವಡಿಸಿ ಚಲಾಯಿಸುತ್ತಿದ್ದ ಇಪ್ಪತ್ತು ವಾಹನಗಳಿಂದ ಟಿಂಟ್‌ ಪೇಪರ್‌ ತೆರವುಗೊಳಿಸಿದ್ದಾರೆ.

Advertisement

ವಾಹನಗಳ ಗಾಜುಗಳಿಗೆ ಅಳವಡಿಸಿದ್ದ ಟಿಂಟ್‌ ಪೇಪರ್‌ ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬಳಿಕ ಟಿಂಟ್‌ ಪೇಪರ್‌ ಅಳವಡಿಸುವ ಕ್ರಮ ಕಡಿಮೆಯಾಗಿತ್ತು. ಆದರೆ ಕೋರ್ಟ್‌ ಆದೇಶವಾಗಿ ವರ್ಷ ಕಳೆದ ಬಳಿಕ ಮತ್ತೆ ವಾಹನಗಳಿಗೆ ಟಿಂಟ್‌ ಅಳವಡಿಸುವುದು ಹೆಚ್ಚುತ್ತಿದೆ. ಇದನ್ನರಿತ ಸಂಚಾರ ಎಸಿಪಿ, ಅಧಿಕಾರಿಗಳು ಹಾಗೂ ಸಿಬಂದಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಪ್ಪತ್ತು ಕಾರುಗಳಿಗೆ ಅಳವಡಿಸಿದ್ದ ಟಿಂಟ್‌ನ್ನು ತೆರವು ಮಾಡಿದ್ದಾರೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಾಹನ ಸವಾರರು ಗಾಜುಗಳಿಗೆ ಕಪ್ಪು ಟಿಂಟ್‌ ಪೇಪರ್‌ ಹಾಕುತ್ತಾರೆ. ಆದರೆ ಕೆಲವು ದುಷ್ಕರ್ಮಿಗಳು ಅಪಹರಣ, ಅತ್ಯಾಚಾರ, ದರೋಡೆ ಸಹಿತ ಹಲವು ಅಪರಾಧ ಚಟುವಟಿಕೆಗಳಿಗೆ ಪೂರಕವಾಗಿ ಈ ರೀತಿಯ ಗಾಜನ್ನು ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್‌ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಹಿನ್ನೆಲೆಯಲ್ಲಿ ವಾಹನಗಳ ಗ್ಲಾಸ್‌ಗಳಿಗೆ ಟಿಂಟ್‌ ಬಳಸದಂತೆ 2012ರ ಎಪ್ರಿಲ್‌ 27ರಂದು ಆದೇಶ ಹೊರಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next