Advertisement
ಸ್ವಲ್ಪ ವಿಳಂಬವಾಗುತ್ತಿದ್ದರೂ ಈ ಹೋರಿಗಳು ಕೊನೆ ಉಸಿರೆಳೆಯುತ್ತಿದ್ದವು. ಗೋಭಕ್ತರ ಸುಪ್ತ ಮನಸ್ಸು ಎಚ್ಚೆತ್ತುಕೊಂಡದ್ದರಿಂದ ಬಲಿಯಾಗುತ್ತಿದ್ದ ಹೋರಿಯನ್ನು 3,20,000 ರೂ. ನೀಡಿ ತಮ್ಮ ವಶಕ್ಕೆ ಪಡೆದುಕೊಂಡು ರಕ್ಷಿಸುವಲ್ಲಿ ಸಾಧ್ಯವಾಯಿತು. ಈ ಹೋರಿ ಪೆರಿಯದ ಗೋ ಲೋಕಕ್ಕೆ ಹೊಸ ಅತಿಥಿಯಾಗಿ ತೆರಳಿದೆ.
ಐದು ಓಂಗೋಲ್ ಹೋರಿಗಳು ಇರುವುದು ಪೆರಿಯದ ಸುಬ್ರಹ್ಮಣ್ಯ ಅವರಿಗೆ ಕಾಣಿಸಿತು. ಅಪೂರ್ವ ತಳಿಯ ಆ ಗೋವುಗಳನ್ನು ಹೇಗಾದರೂ ರಕ್ಷಿಸಬೇಕೆಂದುಕೊಂಡ ಅವರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಪೆರಿಯದಲ್ಲಿ ಕಾರ್ಯಾಚರಿಸುತ್ತಿರುವ ಗೋಲೋಕ ಗೋಶಾಲೆಯ ಸಂಚಾಲಕ ವಿಷ್ಣು ಹೆಬ್ಟಾರ್ ಮೊದಲಾದವರಿಗೆ ಮಾಹಿತಿ ನೀಡಿದರು. ಈಗಾಗಲೇ ಗೋರûಾ ವಿಚಾರದಲ್ಲಿ ದೇಶದಲ್ಲಿ ಕ್ರಾಂತಿಯೆಬ್ಬಿಸಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಗಮನಕ್ಕೂ ಈ ವಿಚಾರ ಬಂತು. ತತ್‌ಕ್ಷಣ ಶ್ರೀ ಮಠದ ಕಾಮದುಘಾ ಗೋರûಾ ವಿಭಾಗ ಸಂಚಾಲಕ ಡಾ| ವೈ.ವಿ. ಕೃಷ್ಣಮೂರ್ತಿ ಅವರ ಮೂಲಕ ರಕ್ಷಣಾ ಜಾಲ ಕಾರ್ಯಪ್ರವೃತ್ತವಾಯಿತು. ತಂಡದಲ್ಲಿ ತಿರುಮಲೇಶ್ವರ ಪ್ರಸನ್ನ, ಡಾ| ಜಯಪ್ರಕಾಶ್ ಲಾಡ, ಶ್ರೀಕೃಷ್ಣ ಭಟ್ ಮೀನಗದ್ದೆ, ಮುರಳಿ ಮೊಗ್ರಾಲ್, ಪೆರಿಯ ಗೋಲೋಕದ ಕಾರ್ಯಕರ್ತರು ಇದ್ದರು.
Related Articles
Advertisement
ಹೀಗೆ ನಡೆಯಿತು ಕಾರ್ಯಾಚರಣೆಮಠದ ಗೋ ಸಂಜೀವಿನಿ ವಿಭಾಗವು ಕಸಾಯಿಯವರ ಜತೆ ಚರ್ಚಿಸಿದಾಗ ಒಂದೊಂದು ಹೋರಿಗೂ 70ರಿಂದ 80 ಸಾವಿರ ರೂ. ಬೆಲೆ ಇದೆ. ಪೂರ್ವಾಹ್ನ 11.30ರ ಒಳಗೆ ಅಷ್ಟು ಹಣವನ್ನು ಕೊಟ್ಟಲ್ಲಿ ಎಲ್ಲ ಹೋರಿಗಳನ್ನು ಬಿಟ್ಟು ಕಳುಹಿಸುತ್ತೇವೆ; ವಿಳಂಬವಾದರೆ ಅವುಗಳನ್ನು ಕಸಾಯಿ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಷಯ ಹರಿದಾಡಿತು. ಗಂಭೀರತೆಯನ್ನರಿತ ಗುರು ಗೋ ಭಕ್ತರು ಗೋ ಸಂಜೀವಿ ನಿಧಿಗೆ ದೇಣಿಗೆ ನೀಡಲಾರಂಭಿಸಿದರು. ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಕಸಾಯಿಖಾನೆಗೆ ಧಾವಿಸಿ ಅವರಲ್ಲಿ ಸಮಾಲೋಚನೆ ಮಾಡಿ ಒಟ್ಟು 3,20,000 ರೂ. ಪಾವತಿಸಿ ಐದೂ ಓಂಗೋಲ್ ಹೋರಿಗಳನ್ನು ತಮ್ಮ ವಶಕ್ಕೆ ಪಡೆದು ಕಾಲ್ನಡೆಯ ಮೂಲಕ ಪೆರಿಯದ ಗೋಲೋಕದಲ್ಲಿ ರಕ್ಷಣೆ ನೀಡಿದರು. ಎರಡನೇ ಪ್ರಕರಣ
ಮೊದಲೊಮ್ಮೆ ಇದೇ ರೀತಿಯ ಘಟನೆಗೆ ಸಾಕ್ಷಿಯಾಗಿ ಮುರಳಿ ಮೊಗ್ರಾಲ್ ಅವರ ಮೂಲಕ ವಿಷಯ ಪ್ರಸ್ತಾವನೆಯಾಗಿ ರಕ್ಷಣೆಯಾಗಿ ಬಂದ ಇದೇ ತಳಿಯ ಬೃಹತ್ ಹೋರಿಯೊಂದು ಶ್ರೀಗಳಿಂದ ಮಹದೇಶ್ವರ ಎಂದು ನಾಮಕರಣಗೊಂಡು ಈಗ ಗೋಲಕದಲ್ಲಿ ವಿಹರಿಸುತ್ತಿದೆ.