ಹೊಸಪೇಟೆ: ವಿಜಯನಗರ ಜಿಲ್ಲೆಗೆ ಶೀಘ್ರವೇ ವಿಶೇಷ ಅಧಿಕಾರಿ ಆಗಮಿಸಲಿದ್ದಾರೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಶನಿವಾರ ಟಿಎಸ್ಪಿ ಕಾರ್ಖಾನೆ ಆವರಣ ವೀಕ್ಷಣೆ ಮಾಡಿ ಮಾತನಾಡಿದ ಅವರು, ಜಿಲ್ಲಾ ಧಿಕಾರಿ, ಜಿಪಂ ಸಿಇಒ ಮತ್ತು ಎಸ್ಪಿಯವರು ಇನ್ನು ಒಂದು ತಿಂಗಳೊಳಗೆ ವಿಜಯನಗರ ಜಿಲ್ಲೆಗೆ ನೇಮಕವಾಗಿ ಬರುತ್ತಾರೆ. ಟಿಎಸ್‌ಪಿ ಆವರಣ ಒಟ್ಟು 83 ಎಕರೆ ಭೂಮಿ ಇದ್ದು, ಈಗ 40 ಎಕರೆ ಮಂಜೂರಾಗಿದೆ. ಇದರಲ್ಲಿ ಜಿಲ್ಲಾಡಳಿತ ಭವನ, ಮೆಡಿಕಲ್ ಕಾಲೇಜ್, ಎಸ್ಪಿ ಕಚೇರಿ, ನಗರಸಭೆ/ ಪಾಲಿಕೆ ಕಚೇರಿ ಸೇರಿದಂತೆ ನಾನಾ ಇಲಾಖೆ ಕಚೇರಿಗಳ ನಿರ್ಮಾಣಕ್ಕೆ ಅವುಗಳಿಗೆ ಬೇಕಾದ ಪೂರಕ ಮಾಹಿತಿಗಳನ್ನು ಕಲೆ ಹಾಕಿ ಸರ್ಕಾರದೊಂದಿಗೆ ಚರ್ಚೆ ಮಾಡಿ ನೇಮಕ ಮಾಡಲಾಗುತ್ತದೆ ಎಂದರು.
ನಮ್ಮಲ್ಲಿ ತಾತ್ಕಾಲಿಕವಾಗಿ ಜಿಲ್ಲಾಡಳಿತ ಕಚೇರಿ ಇದೆ. ಅನುದಾನದ ಕೊರತೆ ನಮ್ಮಲ್ಲಿ ಇಲ್ಲ, ಈ ಆವರಣದಲ್ಲಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕಿದೆ. ಹಾಗಾಗಿ ಹೋರಾಟ ಮಾಡುವವರು ಎಲ್ಲೋ ರಸ್ತೆಯಲ್ಲೊ,ಯಾವುದೋ ಕಚೇರಿಗಳ ಮುಂದೆಯೋ ಕೂತು ಪ್ರತಿಭಟನೆ ಮಾಡುವಂತದ್ದಲ್ಲ, ಹೋರಾಟ ಮಾಡುವವರಿಗೆ ಪ್ರತೇಕ ಸ್ಥಳ ಮಾಡಲಾಗುತ್ತದೆ ಒಂದು ಜಿಲ್ಲೆಗೆ ಬೇಕಾಗುವ ಎಲ್ಲ ರೀತಿಯ ಅನುಕೂಲಗಳನ್ನು ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ:ಸಿಎಂ ಗಾದಿಗೆ ಕಾಂಗ್ರೆಸ್‌ನಲ್ಲಿ ಮ್ಯೂಸಿಕಲ್ ಚೇರ್ ಆಟ
ಜಿಲ್ಲೆಯಾದ್ರೂ ರಸ್ತೆ ಅಗಲೀಕರಣ ಮಾಡುವುದು ಸದ್ಯಕ್ಕೆ ಇಲ್ಲ, ಇದ್ದುದ್ರಲ್ಲೇ ರಸ್ತೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಒಟ್ಟು 83 ಎಕರೆಯಲ್ಲಿ 40 ಎಕರೆ ಭೂಮಿಯು ಕರ್ನಾಟಕ ಗೃಹ ಮಂಡಳಿಯು ಜಿಲ್ಲಾಡಳಿತಕ್ಕೆ ವರ್ಗಾವಣೆ ಮಾಡಿದೆ. ಖನಿಜ ನಿಧಿ ಯಲ್ಲಿ 17 ಸಾವಿರ ಕೋಟಿ ರೂ.ಗಳು ಇವೆ. ಈಗಾಗಲೇ 3ರಿಂದ 4 ಸಾವಿರ ಕೋಟಿ ರೂ ಬಡ್ಡಿ ಬಂದಿದೆ. ಹಾಗಾಗಿ ನಮ್ಮಲ್ಲಿ ಅನುದಾನದ ಕೊರತೆ ಇಲ್ಲ ಎಂದರು. ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ, ಮುಖಂಡರಾದ ಅಯ್ನಾಳಿ ತಿಮ್ಮಪ್ಪ, ಬೆಳಗೋಡು ಮಂಜುನಾಥ, ಬಸವರಾಜ್ ನಾಲತ್ವಾಡ್, ಅನಂತ ಪದ್ಮನಾಭ, ಕಟಿಗಿ ರಾಮಕೃಷ್ಣ, ಧಮೇಂದ್ರ ಸಿಂಗ್, ಸಂದೀಪ್ ಸಿಂಗ್, ಕಟಿಗಿ ಜಂಬಯ್ಯ ನಾಯಕ, ಚಂದ್ರಕಾಂತ್ ಕಾಮತ್, ಜೀವರತ್ನ, ರಾಘವೇಂದ್ರ ಮತ್ತಿತರರಿದ್ದರು.