Advertisement

ಇತಿಹಾಸ ಪ್ರಸಿದ್ದ ತಗ್ಗರ್ಸೆ ಕಂಬಳೋತ್ಸವ ಸಂಪನ್ನ

10:02 AM Dec 11, 2019 | Hari Prasad |

ಬೈಂದೂರು: ನಿರಂತರ ಕೃಷಿ ಕಾಯಕದ ನಡುವೆ ಕೃಕರ ಜೀವಾಳ ಸಾಕು ಪ್ರಾಣಿಗಳು. ಅವುಗಳನ್ನು ಸಲಹಿ ಕ್ರೀಡೆಯಲ್ಲಿ ಭಾಗವಹಿಸುವಂತೆ ತರಬೇತಿ ನೀಡಿ ಊರಿನ ಜನರೆಲ್ಲಾ ಸಂಭ್ರಮಿಸುವ ಕಂಬಳೋತ್ಸವ ನಿರಂತರವಾಗಿ ನಡೆಯುತ್ತಿರಲಿ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು ಅವರು ತಗ್ಗರ್ಸೆ ಹೆಗ್ಡೆಯವರ ಮನೆ ಕಂಬಳಗದ್ದೆಯಲ್ಲಿ ನಡೆದ ಸಾಂಪ್ರದಾಯಿಕ ಕಂಬಳೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.

Advertisement

ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಜಗನ್ನಾಥ ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯ ಕೆ. ಬಾಬು ಶೆಟ್ಟಿ, ಕಂಬಳ ಸಮಿತಿ ಬೈದೂರು ತಾಲೂಕು ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಉಪಸ್ಥಿತರಿದ್ದರು. ತಗ್ಗರ್ಸೆ ಹೆಗ್ಡೆ ಕುಟುಂಬದ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಣಪತಿ ಹೋಬಳಿದಾರ್‌ ಕಾರ್ಯಕ್ರಮ ನಿರ್ವಹಿಸಿದರು.ಜನ್ಮನೆ ರತ್ನಾಕರ ಶೆಟ್ಟಿ ಅರೆಶಿರೂರು ವಂದಿಸಿದರು.

ತಗ್ಗರ್ಸೆ ಕಂಬಳೋತ್ಸವದ ಫಲಿತಾಂಶ
ಕಂಬಳೋತ್ಸವ ಹಲಗೆ ವಿಭಾಗದಲ್ಲಿ ಆತ್ಮಜ ನೀರಜ್‌ ಅವರ ಕೋಣ ಪ್ರಥಮ ಸ್ಥಾನ, ವೆಂಕಟ ಪೂಜಾರಿ ಸಸಿಹಿತ್ಲು ಅವರ ಕೋಣ ದ್ವಿತಿಯ ಸ್ಥಾನವನ್ನು, ಹಗ್ಗ ವಿಭಾಗ ದಿಶಾ ಶ್ರೇಯಸ್‌ ನಾರಾಯಣ ದೇವಾಡಿಗ ಅವರ ಕೋಣ ಪ್ರಥಮ, ದಿ. ಕಾರಿಕಟ್ಟೆ ಮಹಾಬಲ ಶೆಟ್ಟಿ ಅವರ ಕೋಣ ದ್ವಿತೀಯ ಸ್ಥಾನ.

ಹಗ್ಗ ವಿಭಾಗ ಕಿರಿಯ ಸುಧಾಕರ ಶೆಟ್ಟಿ ನೆಲ್ಯಾಡಿ ಪ್ರಥಮ, ಪನ್ನಗ ಹೆಬ್ಟಾರ್‌ ಭಟ್ಕಳ ದ್ವೀತಿಯ, ಹಗ್ಗ ವಿಭಾಗ ಕಿರಿಯ ಎಚ್‌. ಎನ್‌. ನಿವಾಸ್‌ ಪಿನ್ನುಪಾಲ್‌ ಭಟ್ಕಳ ಪ್ರಥಮ, ಸುಪ್ರಿತ್‌ ಸುಜಿತ್‌ ಗಂಗನಾಡು ದ್ವಿತೀಯ,ವಿಜೇತ ಕೋಣಗಳನ್ನು ಓಡಿಸಿದ ಗೋಪಾಲ ನಾಯ್ಕ, ಭಾಸ್ಕರ್‌, ವಿವೇಕ ಪೂಜಾರಿ, ಮಂಜುನಾಥ ಗೌಡ, ಶಂಕರ್‌ ನಾಯ್ಕ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.

ಆಕರ್ಷಕ ಶೋಭಾಯಾತ್ರೆಯೊಂದಿಗೆ ಪಾಲ್ಗೊಂಡ ವೆಂಕಟ ಪೂಜಾರಿ ಸಸಿಹಿತ್ಲು ರವರಿಗೆ ಬಹುಮಾನ ವಿತರಿಸಲಾಯಿತು. ಕೆಸರು ಗದ್ದೆ ಓಟದಲ್ಲಿ ಮಂಜುನಾಥ ಗೌಡ ಪ್ರಥಮ, ಹರೀಶ್‌ ಪೂಜಾರಿ ದ್ವಿತೀಯ, ಧನರಾಜ್‌ ತೃತೀಯ ಬಹುಮಾನ ಪಡೆದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next