Advertisement

ಒಂದು ಅಪರೂಪದ ಸಂದರ್ಶನ; ಯುವ ಧೋನಿ ವರ್ಸಸ್‌ ನಿವೃತ್ತ ಧೋನಿ!

11:34 PM Apr 02, 2021 | Team Udayavani |

ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್‌ ಗೆದ್ದ 10ನೇ ವರ್ಷಾಚರಣೆ ದೇಶಾದ್ಯಂತ ನಡೆಯುತ್ತಿದೆ. ಆದರೆ ಧೋನಿ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನಾಗಲಿ, ಹೇಳಿಕೆಯನ್ನಾಗಲಿ ನೀಡಿಲ್ಲ ಏಕೆ ಎಂಬ ಕುತೂಹಲವಿತ್ತು. ಇದನ್ನೀಗ ಅಪರೂಪದ ವೀಡಿಯೋ ಸಂದರ್ಶನದ ಮೂಲಕ ಧೋನಿ ತಣಿಸುವ ಪ್ರಯತ್ನ ಮಾಡಿದ್ದಾರೆ.

Advertisement

ಅಂದಹಾಗೆ ಇಲ್ಲಿ ಧೋನಿ ಅವರ ಸಂದರ್ಶನ ನಡೆಸಿದ್ದು ಬೇರೆ ಯಾರೂ ಅಲ್ಲ, ಸ್ವತಃ ಧೋನಿ!
ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟ ದಿನದ ಉದ್ದ ಕೂದಲಿನ ಯುವ ಧೋನಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಹಿರಿಯ ಧೋನಿ ಇಲ್ಲಿ ಪರಸ್ಪರ ಎದುರು ಕುಳಿತು ಮಾತಾಡಿದ ವಿಶಿಷ್ಟ ದೃಶ್ಯಾವಳಿ ಇದಾಗಿದೆ.

ನೆಚ್ಚಿನ ಇನ್ನಿಂಗ್ಸ್‌ ಯಾವುದು?
ನಿಮ್ಮ ಫೇವರಿಟ್‌ ಇನ್ನಿಂಗ್ಸ್‌ ಯಾವುದು ಎಂಬ ಕಿರಿಯ ಧೋನಿಯ ಪ್ರಶ್ನೆಗೆ ಸೀನಿಯರ್‌ ಧೋನಿ ಸ್ವಲ್ಪವೂ ಯೋಚಿಸದೆ “2011ರ ವಿಶ್ವಕಪ್‌ ಫೈನಲ್‌ನಲ್ಲಿ ಸಿಡಿಸಿದ ಸಿಕ್ಸರ್‌’ ಎಂದು ಉತ್ತರಿಸುತ್ತಾರೆ. ವಿಶ್ವಕಪ್‌ನಂಥ ಪಂದ್ಯವನ್ನು ಗೆಲುವಿನ ಹೊಡೆತದೊಂದಿಗೆ ಮುಗಿಸುವುದಕ್ಕಿಂತ ಮಿಗಿಲಾದುದಿಲ್ಲ ಎಂದಿದ್ದಾರೆ.

ಮಿಡ್ಲ್ ಆರ್ಡರ್‌ ಆಯ್ದದ್ದೇಕೆ?
ಅಂತಾರಾಷ್ಟ್ರೀಯ ಕ್ರಿಕೆಟಿನ ಆರಂಭದ ದಿನಗಳಲ್ಲಿ 3ನೇ ಕ್ರಮಾಂಕದಲ್ಲಿ ಯಶಸ್ಸು ಕೈ ಹಿಡಿದರೂ ಬಳಿಕ ಮಿಡ್ಲ್ ಆರ್ಡರ್‌ನಲ್ಲಿ ಆಡಿ ಯಶಸ್ಸು ಸಾಧಿಸಿದ್ದರ ರಹಸ್ಯ ವೇನು ಎಂಬ ಪ್ರಶ್ನೆಗೂ ಸೀನಿಯರ್‌ ಧೋನಿ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.

“ಅನುಭವದಿಂದ ಹಲವು ಸಂಗತಿಗಳು ಸುಲಭವಾಗುತ್ತವೆ. ಹಾಗೆಯೇ ಹೊಸ ಹೊಸ ಸವಾಲುಗಳಿಗೆ ನಾವು ಒಡ್ಡಿಕೊಳ್ಳಬೇಕಾಗುತ್ತದೆ. ನೀವು ಹೆಚ್ಚೆಚ್ಚು ಪಂದ್ಯ ಆಡಿದಂತೆಲ್ಲ ಎದುರಾಳಿ ತಂಡದವರು ನಮ್ಮ ಆಟವನ್ನು ನಿಯಂತ್ರಿಸಲು ಹೆಚ್ಚೆಚ್ಚು ಸಿದ್ಧತೆ ಮಾಡಿಕೊಳ್ಳುತ್ತಾರೆ. ಹೀಗಾಗಿ ನೀವೂ ನಿಮ್ಮ ಆಟದ ಗುಣ ಮಟ್ಟವನ್ನು ಸುಧಾರಿಸುತ್ತ ಹೋಗಬೇಕಾದುದು ಅನಿವಾರ್ಯ. ನೀವು ಇಂದು 3ನೇ ಕ್ರಮಾಂಕದಲ್ಲಿ ಆಡುತ್ತಿರಬಹುದು. ನಾಳೆ ಕೆಳ ಸರದಿಯಲ್ಲಿ ಆಡತೊಡಗಿದರೆ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇದಕ್ಕೆ ಮಾನಸಿಕ ಸಿದ್ಧತೆ ಅತೀ ಮುಖ್ಯ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next