Advertisement

ಪಿಲಿಕುಳಕ್ಕೆ ಬಂದ ವಿಶೇಷ ಅತಿಥಿಗಳು !

10:27 AM Jul 15, 2017 | Team Udayavani |

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ರಾಜಸ್ಥಾನದ ಉದಯಪುರ ಮೃಗಾಲಯದ ಅತಿಥಿಗಳು ಆಗಮಿಸಿದ್ದಾರೆ. 6ರ ಹರೆಯದ ಗಂಡು ಸಿಂಹ ಹಾಗೂ ಡಾಲ್ಮೇಷಿ ಯನ್‌ ಪೆಲಿಕನ್‌ ಮತ್ತು ವಿವಿಧ ಜಾತಿಯ ಪಕ್ಷಿಗಳನ್ನು ಪಿಲಿಕುಳಕ್ಕೆ ತರಲಾಗಿದೆ.

Advertisement

ಪ್ರಾಣಿ ವಿನಿಮಯ ಯೋಜನೆಯನ್ವಯ ಪಿಲಿಕುಳದಿಂದ 8 ವರ್ಷದ ಗಂಡು ಹುಲಿ “ಕುಮಾರ’ ಹಾಗೂ 6 ವರ್ಷದ ಆಪ್ರೋ ಏಶಿಯನ್‌ ಹೆಣ್ಣು ಸಿಂಹವನ್ನು ಉದಯಪುರ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪಿಲಿಕುಳದಿಂದ ಹೈದರಾಬಾದ್‌, ಸೂರತ್‌ ಹಾಗೂ ಬನ್ನೇರುಘಟ್ಟ ಮೃಗಾಲಯಗಳಿಗೆ ಈ ಹಿಂದೆಯೇ ಹುಲಿಗಳನ್ನು ಕಳುಹಿಸಿಕೊಡಲಾಗಿತ್ತು. ಸದ್ಯ ಪಿಲಿಕುಳದಲ್ಲಿ 11 ಹುಲಿಗಳಿದ್ದು, 1 ಜತೆ ಬಿಳಿ ಹುಲಿ ಹಾಗೂ ಇತರ ಪ್ರಾಣಿಗಳನ್ನು ಭಾರತದ ವಿವಿಧ ಮೃಗಾಲಯಗಳಿಂದ ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉದ್ಯಾನವನದ ನಿರ್ದೇಶಕ ಎಚ್‌.ಜೆ. ಭಂಡಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next