Advertisement

ಕೊಳೆಗೇರಿ ಅಭಿವೃದ್ಧಿಗೆ ವಿಶೇಷ ಅನುದಾನ

03:19 PM Nov 02, 2019 | Suhan S |

ಕೊರಟಗೆರೆ: ಕೊಳೆಗೇರಿಗಳಿಗೆ ಮೂಲ ಸೌಕರ್ಯ ಒದಗಿಸಲು ವಿಶೇಷ ಅನುದಾನ ಅಗತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ ತಿಳಿಸಿದರು.

Advertisement

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಯಿಂದ ಪಟ್ಟಣದ ಗಿರಿನಗರ ಕೊಳಗೇರಿ ಪ್ರದೇಶ ದಲ್ಲಿ 56 ಲಕ್ಷ ರೂ. ವೆಚ್ಚದ ಸಮುದಾಯ ಭವನ ಹಾಗೂ 46 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ದೇಶ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಹೊಂದುತ್ತಿದ್ದರೂ ಕೊಳೆಗೇರಿಗಳ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ಕೊಳೆಗೇರಿ ನಿವಾಸಿಗಳು ಕಾಯಿಲೆಗಳಿಗೆ ತುತ್ತಾಗುತಿದ್ದು, ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಎಂದರು.

ನಂತರ ಗಿರಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿ ಪರಿಶೀಲಿ ಸಿದರು. ಈಗಾಗಲೇ ಶಾಲೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳೊಂದಿಗೆ ಹೆಚ್ಚುವರಿಯಾಗಿ 2 ಕಟ್ಟಡ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗುವುದು. ಕೊಳೆಗೇರಿ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಆರೋಪ ಕೇಳಿ ಬಂದಿದ್ದು, ಕಾಮಗಾರಿಗಳ ಗುಣಮಟ್ಟ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.

ತಹಶೀಲ್ದಾರ್‌ ಗೋವಿಂದರಾಜು, ಮುಖ್ಯಾಧಿ ಕಾರಿ ಲಕ್ಷ್ಮಣ್‌ಕುಮಾರ್‌ ಪಪಂ ಸದಸ್ಯರಾದ ಎ.ಡಿ. ಬಲ ರಾಮಯ್ಯ, ನರಸಿಂಹಪ್ಪ, ಕೆ.ಆರ್‌. ಒಬಳ ರಾಜು, ನಟರಾಜು ಕೆ.ಎನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವತ್ಥ ನಾರಾಯಣ, ಅರಕೆರೆ ಶಂಕರ್‌, ಮುಖಂಡರಾದ ಚಂದ್ರಶೇಖರ್‌ ಗೌಡ, ನಾಗರಾಜು, ತುಂಗ ಮಂಜುನಾಥ್‌, ಖಲೀಂ ಅಹಮದ್‌, ವಿಜಯಲಕ್ಚ್ಮಿ, ಅರವಿಂದ್‌, ಮಂಜುನಾಥ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next