Advertisement

ಜನರ ಸಮಸ್ಯೆಗಳಿಗೆ ಅಧಿಕಾರಿಗಳೇ ಸ್ಪಂದಿಸಿ

03:02 PM Aug 26, 2020 | Suhan S |

ತುಮಕೂರು: ಪಾಲಿಕೆಯಲ್ಲಿ ಸಾಮಾನ್ಯ ಸಭೆ ನಡೆಸುವುದು ಪಾಲಿಕೆ ಸದಸ್ಯರು ಪಾಲಿಕೆಗೆ ತರುವ ಜನರ ಎಲ್ಲಾ ಸಮಸ್ಯೆಗಳಿಗೆ ಆದ್ಯತೆ ಮೇಲೆ ಸ್ಪಂದಿಸಿ ಬಗೆಹರಿಸಬೇಕೆಂದು ಜನ ಸಾಮಾನ್ಯರ ಸಮಸ್ಯೆಗಳು ಬಗೆಹರಿಯುವುದು ತಡ ಆಗಬಾರದು ಎಂದು ಅಧಿಕಾರಿಗಳಿಗೆ ಪಾಲಿಕೆ ಮೇಯರ್‌ ಫ‌ರೀದಾ ಬೇಗಂ ಖಡಕ್‌ ಸೂಚನೆ ನೀಡಿದರು.

Advertisement

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪಾಲಿಕೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಾಮಾನ್ಯ ಸಭೆಗಳಲ್ಲಿ ಬಡ ಜನರಿಗೆ ಅನುಕೂಲವಾಗುವಂತಹ ಸೌಲಭ್ಯಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಂಡು ಕಾರ್ಯಗತಗೊಳಿಸಿದಾಗ ಮಾತ್ರ ಈ ಸಭೆಗಳಿಗೆ ಅರ್ಥ ಬರುತ್ತದೆ ಎಂದರು.

ಕ್ರಮಕ್ಕೆ ಒತ್ತಾಯ: ಸದಸ್ಯರು ತಮ್ಮ ವಾರ್ಡ್‌ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಸಭೆ ಆರಂಭದಲ್ಲಿ ಈ ಹಿಂದಿನ ಸಭಾ ನಡವಳಿಕೆ ಓದಿ ದಾಖಲಿಸುವಾಗ ವಾರ್ಡ್‌ ಸಮಿತಿಗಳ ರಚನೆ ಬಗ್ಗೆ ಸಭೆಯ ತೀರ್ಮಾನಕ್ಕೆ ವಿರುದ್ಧವಾಗಿ ದಾಖಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, 2019ರ ನ.9ರಂದು ನಡೆದ ಸಭೆಯಲ್ಲಿ ನಾವು ವಾರ್ಡ್‌ ಸಮಿತಿ ಮಾಡಲು ಅನುಮತಿ ನೀಡಿದ್ದೇವೆ ಆದರೆ ಇಲ್ಲಿ ಸದಸ್ಯರು ವಾರ್ಡ್‌ ಸಮಿತಿಗೆ ವಿರೋಧ ಮಾಡಿದರು ಎಂದು ದಾಖಲು ಮಾಡಿದ್ದೀರಿ ಇದು ತಪ್ಪು ಯಾರು ಈ ರೀತಿ ದಾಖಲು ಮಾಡಿದ್ದಾರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಯುಕ್ತೆ ರೇಣುಕಾ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಮೇಯರ್‌ ಫ‌ರೀದಾ ಬೇಗಂ ಪ್ರತಿಕ್ರಿಯೆ ನೀಡಿ ಈ ರೀತಿ ಸಭೆಯ ನಿರ್ಣಯ ತಿರುಚುವವರನ್ನು ಅಮಾನತು ಮಾಡಿ ಎಂದು ಸೂಚಿಸಿದರು.

ಉದ್ದಿಮೆ ಪರವಾನಿಗೆ ದರ ಹೆಚ್ಚಳ: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿರುವ ಉದ್ದಿಮೆದಾರರ ಉದ್ದಿಮೆ ಪರವಾನಗಿ ದರವನ್ನು ಶೇ.5ರಷ್ಟು ಹೆಚ್ಚಳ ಮಾಡಲು ಪಾಲಿಕೆ ಸದಸ್ಯರು ಸಹಮತ ನೀಡಿದರು. ಕೋವಿಡ್‌-19ನಿಂದಾಗಿ ಪಾಲಿಕೆ ವತಿಯಿಂದ ಉದ್ದಿಮೆ ದರಗಳನ್ನು ಶೇ.5ರಷ್ಟು ಹೆಚ್ಚಳ ಮಾಡುವಂತೆ ಆಗ್ರಹಿಸಿದರಲ್ಲದೇ ದಂಡ ಶುಲ್ಕ ಶೇ.30ರಷ್ಟು ಸಿಮೀತಗೊಳಿಸುವಂತೆ ಸದಸ್ಯರೆಲ್ಲರೂ ಒಮ್ಮತ ಸೂಚಿಸಿದರು.

Advertisement

ಶೇ.50 ರಿಯಾಯಿತಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮಡಿವಾಳ ಸಮಾಜ ಹಾಗೂ ಸವಿತಾ ಸಮಾಜ ಕಸುಬುಗಳಾದ ಕಟಿಂಗ್‌ ಶಾಪ್‌(ಹೇರ್‌ ಡ್ರೆಸೆಸ್‌) ಹಾಗೂ ಐರನ್‌ ಅಂಗಡಿಗಳಿಗೆ (ಲಾಂಡ್ರಿ ಡ್ರೆçಕ್ಲಿಂಗ್‌ ಶಾಫ್) ಪಾಲಿಕೆ ನೀಡುವ ಪರವಾನಗಿ ದರವನ್ನು ಶೇ.50 ರಿಯಾಯಿತಿ ದರದಲ್ಲಿ ಅನ್ವಯವಾಗುವಂತೆ ಉದ್ದಿಮೆ ರಹದಾರಿಯನ್ನು ನೀಡಲು ಸಭೆ ತೀರ್ಮಾನಿಸಿತು. ಅಲ್ಲದೇ ಕಡಿಮೆ ಆದಾಯ ಹೊಂದಿರುವ ಇತರೆ ಸಮುದಾಯದವರಿಗೂ ಕೂಡ ಈ ದರ ಅನ್ವಯವಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಆಯುಕ್ತರಿಗೆ ಸದಸ್ಯರೆಲ್ಲರೂ ಆಗ್ರಹಿಸಿದರು.

ಪಾಲಿಕೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಸ್ಥಾಪಿಸುವಂತೆ ಸದಸ್ಯರು ಸರ್ವಾನುಮತದಿಂದ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಯಾವುದೇ ಪುತ್ಥಳಿಯನ್ನು ಸ್ಥಾಪಿಸುವ ಮುನ್ನಾ ಸರ್ಕಾರದ ಅನುಮತಿ ಪಡೆಯ ಬೇಕು. ಅದಕ್ಕಾಗಿ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next