Advertisement
ರಾಗಿ ಹಾಲ್ಬಾಯಿ ಬೇಕಾಗುವ ಸಾಮಗ್ರಿಗಳು
ರಾಗಿ : ಅರ್ಧ ಕಪ್
ತೆಂಗಿನ ತುರಿ: ಕಾಲು ಕಪ್
ಬೆಲ್ಲ: ಅರ್ಧ ಕಪ್
ಏಲಕ್ಕಿ ಪುಡಿ: ಒಂದು ಚಿಟಿಕೆ
ರಾಗಿಯನ್ನು ತೊಳೆದು ಮೂರ್‍ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಿ. ಬೆಲ್ಲಕ್ಕೆ ಕಾಲು ಕಪ್‌ನಿàರು ಹಾಕಿ ಕುದಿಸಿಡಿ. ನೆನೆಸಿದ ರಾಗಿಗೆ ತೆಂಗಿನ ತುರಿ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.ಅರೆದ ಅನಂತರ ,ಬಟ್ಟೆ ಅಥವಾ ಜರಡಿಯ ಸಹಾಯದಿಂದ ಸೋಸಿ. ಉಳಿದ ವಿಶ್ರಣಕ್ಕೆ ಪುನಃ ನೀರು ಸೇರಿಸಿ ಅರೆಯಿರಿ.ಹೀಗೆ 2 ಬಾರಿ ಅರೆದು ಸೋಸಿ, ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ತೆಗೆಯಬೇಕು. ಒಂದು ದಪ್ಪ ತಳದ ಬಾಣಲೆಗೆ ಸೋಸಿದ ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ಸುರಿದು ಉಳಿದ ನೀರು ಹಾಗೂ ಕುದಿಸಿದ ಬೆಲ್ಲದ ನೀರನ್ನು ಸೇರಿಸಿ ಕುದಿಸಬೇಕು. ಗಟ್ಟಿಯಾದ ಕೂಡಲೇ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಕದಡುವುದನ್ನು ಮುಂದುವರಿಸಿ. ಸ್ಪಲ್ಪ ಸಮಯದ ಅನಂತರ ಮಿಶ್ರಣ ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಮಿಶ್ರಣವನ್ನು ತುಪ್ಪ ಸವರಿದ ಪ್ಲೇಟ್‌ಗೆ ಸುರಿಯಿರಿ. ಬಿಸಿ ಆರಿದ ಅನಂತರ ಬೇಕಾದ ಆಕಾರದಲ್ಲಿ ಕತ್ತರಿಸಿದಾಗ ಹಾಲಾºಯಿ ಸವಿಯಲು ಸಿದ್ಧವಾಗುತ್ತದೆ. ಅಕ್ಕಿ ತಂಬಿಟ್ಟು
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ : ಅರ್ಧ ಕಪ್
ಕೊಬ್ಬರಿ ತುರಿ: ಕಾಲು ಕಪ್
ಹುರಿದ ಕಡಲೆ: ಕಾಲು ಕಪ್
ನೆಲಗಡಲೆ: ಸ್ವಲ್ಪ
ಬೆಲ್ಲ: ಅರ್ಧಕಪ್
ನೀರು: ಕಾಲು ಕಪ್
ಏಲಕ್ಕಿ ಪುಡಿ: ಸ್ವಲ್ಪ
Related Articles
ಅಕ್ಕಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿಗಡಲೆ ಮತ್ತು ನೆಲಗಡಲೆಯನ್ನು ಪುಡಿ ಮಾಡಬೇಕು. ಈ ಹುಡಿಗೆ ಸ್ವಲ್ಪ ಬೆಲ್ಲ ಮತ್ತು ಕೊಬ್ಬರಿ ತುರಿಯನ್ನು ಮಿಶ್ರಣ ಮಾಡಬೇಕು. ಒಂದು ಬಾಣಲೆಗೆ ಬೆಲ್ಲ ಮತ್ತು ನೀರು ಹಾಕಿ ಕುದಿಸಿ ಇದಕ್ಕೆ ಅಕ್ಕಿ ಹುಡಿ ಹುರಿಗಡÇ, ನೆೆಲಗಡಲೆ ಬೆಲ್ಲ ಮತ್ತು ಕೊಬ್ಬರಿ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ ಸಣ್ಣ ಉಂಡೆ ಮಾಡಿದರೆ ಅಕ್ಕಿ ತಂಬಿಟ್ಟು ಸವಿಯಲು ಸಿದ್ಧ.
Advertisement
ಹೆಸರಿಟ್ಟಿನ ಉಂಡೆಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ: ಒಂದು ಕಪ್
ಸಕ್ಕರೆ : ಅರ್ಧ ಕಪ್
ತುಪ್ಪ : ಕಾಲು ಕಪ್
ಸ್ವಲ್ಪ ಗೋಡಂಬಿ ಚೂರುಗಳು ಮಾಡುವ ವಿಧಾನ
ಗೋಡಂಬಿಯನ್ನು ಚೂರು ಮಾಡಿ ಹುರಿದಿಟ್ಟುಕೊಳ್ಳಬೇಕು. ಹೆಸರು ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿದು, ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ಅನಂತರ ಸಕ್ಕರೆಯನ್ನು ಪುಡಿಮಾಡಿ . ಹೆಸರು ಬೇಳೆ,ಸಕ್ಕರೆಗೆ ತುಪ್ಪ ,ಗೋಡಂಬಿಯನ್ನು ಸೇರಿಸಿ ಉಂಡೆಮಾಡಿದರೆ ಹೆಸರಿಟ್ಟಿನ ಉಂಡೆ ರೆಡಿ. ಅರಸಿನ ಎಲೆಯ ಕಡುಬು
ಬೇಕಾಗುವ ಸಾಮಗ್ರಿಗಳು
ಅರಸಿನ ಎಲೆ :ಹತ್ತು
ಅಕ್ಕಿ : ಅರ್ಧ ಕೆಜಿ
ಬೆಲ್ಲ : ಒಂದು ಕಪ್
ಕೊಬ್ಬರಿ ತುರಿ: ಒಂದು ಕಪ್ ಅಕ್ಕಿ ಯನ್ನು ಸ್ಪಲ್ಪ ದಪ್ಪಕ್ಕೆ ಅರೆದುಕೊಳ್ಳಬೇಕು. ಹಿಟ್ಟನ್ನು ಅರಸಿನ ಎಲೆ ಮೇಲೆ ಹರಡಿ ಇದಕ್ಕೆ ಬೆಲ್ಲ ಮತ್ತು ಕೊಬ್ಬರಿ ತುರಿ ಮಿಶ್ರಣವನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು. ಅಲ್ಲಿಗೆ ಅರಸಿನ ಎಲೆಯ ಕಡುಬು ಸವಿಯಲು ಸಿದ್ಧ. ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿಗಳು
ಶೇಂಗಾ: ಒಂದು ಕಪ್
ಬೆಲ್ಲ: ಮುಕ್ಕಾಲು ಕಪ್
ಕೊಬ್ಬರಿ: ಕಾಲು ಕಪ್
ಎಳ್ಳು : ಕಾಲು ಕಪ್
ಏಲಕ್ಕಿ ಪುಡಿ: ಸ್ವಲ್ಪ ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ನೆಲಗಡಲೆ ಹಾಗೂ ಎಳ್ಳನ್ನು ಬೇರೆಬೇರೆಯಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ತುರಿದ ಕೊಬ್ಬರಿಯನ್ನು ಹುರಿದಿಟ್ಟುಕೊಳ್ಳಬೇಕು. ಅನಂತರ ಈ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಹುಡಿ ಮಾಡಬೇಕು. ಇದಕ್ಕೆ ಏಲಕ್ಕಿ ಹುಡಿಯನ್ನು ಮಿಶ್ರ ಮಾಡಿ ಉಂಡೆ ಮಾಡಿದರೆ ಶೇಂಗಾ ಉಂಡೆ ಸವಿಯಲು ಸಿದ್ಧ. ಚೈತನ್ಯ