Advertisement
1. ಮಖಾನ ರಾಯತಬೇಕಾಗುವ ಸಾಮಗ್ರಿ: ಮೊಸರು- 1 ಕಪ್, ಮಖಾನ (ತಾವರೆ ಬೀಜ)- 1 ಕಪ್, ಗರಂ ಮಸಾಲ- ಅರ್ಧ ಚಮಚ, ಜೀರಿಗೆ ಪುಡಿ- 1 ಚಮಚ, ಒಣಮೆಣಸಿನಪುಡಿ- 1 ಚಮಚ, ಕೊತ್ತಂಬರಿ ಸೊಪ್ಪು- 1 ಕಪ್, ರುಚಿಗೆ ಉಪ್ಪು, ಎಣ್ಣೆ- 2 ಚಮಚ.
ಬೇಕಾಗುವ ಸಾಮಗ್ರಿ: ಹುರಿದ ಮಖಾನ- 1 ಕಪ್, ಹಾಲು- 3 ಕಪ್, ತುಪ್ಪ- 2 ಚಮಚ, ದ್ರಾಕ್ಷಿ-ಗೋಡಂಬಿ- 2 ಚಮಚ, ಏಲಕ್ಕಿ ಪುಡಿ- ಅರ್ಧ ಚಮಚ, ಸಕ್ಕರೆ- 2 ಕಪ್.
Related Articles
Advertisement
3. ಪಾಲಕ್ ಮಖಾನ ಕರಿಬೇಕಾಗುವ ಸಾಮಗ್ರಿ: ಪಾಲಕ್ ಸೊಪ್ಪು- 1 ಕಂತೆ, ಟೊಮೇಟೊ- 2, ಮಖಾನ- 2 ಕಪ್, ಜೀರಿಗೆ- 1 ಚಮಚ, ಹಸಿಮೆಣಸಿನಕಾಯಿ- 2, ಗರಂ ಮಸಾಲ- 1 ಚಮಚ, ಒಣಮೆಣಸಿನಪುಡಿ- ಅರ್ಧ ಚಮಚ, ಅರಿಶಿನ- ಅರ್ಧ ಚಮಚ, ಹಾಲು- 2 ಚಮಚ, ಉಪ್ಪು ರುಚಿಗೆ. ಮಾಡುವ ವಿಧಾನ: ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಜೊತೆಗೆ ಜೀರಿಗೆ, ಅರಿಶಿಣ, ಉಪ್ಪು, ಹಸಿಮೆಣಸಿನಕಾಯಿ ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಮಖಾನವನ್ನು ಹೊಂಬಣ್ಣಕ್ಕೆ ಹುರಿದು, ಅದೇ ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ, ಹೆಚ್ಚಿದ ಟೊಮೇಟೊ ಹಾಕಿ ಹದವಾಗಿ ಬೇಯಿಸಿ. ಎಲ್ಲ ಮಸಾಲೆ ಪುಡಿಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ ಕುದಿಸಿ. ಇದಕ್ಕೆ ಹಾಲು, ರುಬ್ಬಿದ ಪಾಲಕ್ ಮಿಶ್ರಣವನ್ನು ಸೇರಿಸಿ ಕುದಿಸಿ. ನಂತರ ಮಖಾನ ಸೇರಿಸಿ 2 ನಿಮಿಷ ಕುದಿಸಿ. ಇದು ರೋಟಿ, ಜೀರಾ ರೈಸ್, ನಾನ್‌ಗಳೊಂದಿಗೆ ತಿನ್ನಲು ರುಚಿಯಾಗಿರುತ್ತದೆ. 4. ಮಖಾನ ಫ್ರೈ
ಬೇಕಾಗುವ ಸಾಮಗ್ರಿ: ಮಖಾನ -200 ಗ್ರಾಂ, ಅರಿಶಿಣ ಪುಡಿ – ಅರ್ಧ ಚಮಚ, ಖಾರದ ಪುಡಿ – ಅರ್ಧ ಚಮಚ, ಚಾಟ್ ಮಸಾಲ – 1 ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಎಣ್ಣೆ – 2 ದೊಡ್ಡ ಚಮಚ, ಉಪ್ಪು ರುಚಿಗೆ. ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ತಾವರೆ ಬೀಜ ಹಾಕಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಆಗ ಆ ಬೀಜಗಳು ಪಾಪ್ ಕಾರ್ನ್ನಂತೆ ಊದಿಕೊಳ್ಳುತ್ತವೆ. ಅದಕ್ಕೆ, ಉಪ್ಪು, ಅರಿಶಿಣ, ಖಾರದ ಪುಡಿ, ಚಾಟ್ ಮಸಾಲ, ಕಾಳುಮೆಣಸಿನ ಪುಡಿ ಸೇರಿಸಿದರೆ, ಕಾಫಿ, ಟೀ ಜೊತೆ ಸ್ನ್ಯಾಕ್ಸ್‌ನಂತೆ ಸವಿಯಬಹುದು. -ಶ್ರುತಿ ಕೆ.ಎಸ್.