ಉಡುಪಿ: ವಿದೇಶ ಪ್ರಯಾಣ ಮಾಡುವವರಿಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶೇಷ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಜು. 15ರಿಂದ ವಿದೇಶ ಪ್ರಯಾಣ ಮಾಡುವವರಿಗೆ ಕೋವಿಡ್ -19 ಪರೀಕ್ಷಾ ವರದಿ ಕಡ್ಡಾಯವಾಗಿದೆ
ಅಂಥವರಿಗೆ ನೆರವಾಗಲು ಪರೀಕ್ಷಾ ಕೇಂದ್ರ ಆರಂಭಿಸಿದ್ದೇವೆ.
ಕೇಂದ್ರವು ಆಸ್ಪತ್ರೆಯ ಕೆಲಸದ ದಿನಗಳಲ್ಲಿ ಅಪರಾಹ್ನ 2ರಿಂದ 5ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಈ ಸೇವೆಯು ಪೂರ್ವ ನಿಗದಿಯೊಂದಿಗೆ ಮಾತ್ರ ಲಭ್ಯವಿದ್ದು,
ಪೂರ್ವ ನಿಗದಿಗಾಗಿ ಬೆಳಗ್ಗೆ 9ರಿಂದ ಸಂಜೆ 4ರ ಒಳಗೆ ದೂರವಾಣಿ ಸಂಖ್ಯೆ 0820- 2922057ಕ್ಕೆ ಕರೆ ಮಾಡಬೇಕು. ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ತರಬೇಕು.
ವರದಿ ಬರಲು 24ರಿಂದ 48 ಗಂಟೆ ತಗಲಲಿದೆ ಮತ್ತು ಪರೀಕ್ಷಾ ವರದಿಗೆ 96 ಗಂಟೆಗಳವರೆಗೆ ಮಾತ್ರ ಮಾನ್ಯತೆಯಿರುವುದರಿಂದ ಅವಶ್ಯವಿರುವವರು ಅದಕ್ಕೆ ತಕ್ಕಂತೆ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.