Advertisement

ವಿಶೇಷ ಕೋರ್ಟ್‌ಗಳ ನಿರ್ವಹಣೆಗೆ 8 ಕೋಟಿ ವೆಚ್ಚ

10:42 AM Jan 22, 2018 | Sharanya Alva |

ನವದೆಹಲಿ: ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದರೆ, ನಿರ್ವಹಣೆಗೆ ವಾರ್ಷಿಕ 8 ಕೋಟಿ ರೂ. ವೆಚ್ಚವಾಗಲಿದೆ ಎಂದು ಸರ್ಕಾರಕ್ಕೆ ಕಾನೂನು ಸಚಿವಾಲಯ ಮಾಹಿತಿ ನೀಡಿದೆ. 

Advertisement

ಜನಪತಿನಿಧಿಗಳಿಗೆ ಸೇರಿದ 1500ಕ್ಕೂ ಹೆಚ್ಚು ಪ್ರಕರಣಗಳ ತ್ವರಿತ ವಿಲೇವಾರಿಗೆ 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಅದರಂತೆ, ಹೆಜ್ಜೆಯಿಟ್ಟಿರುವ ಸರ್ಕಾರ, ಎಲ್ಲೆಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತದೋ ಅಂತಹ ಕಡೆಯಲ್ಲಿ ರಾಜ್ಯ ಸರ್ಕಾರದ ಕಡೆಯಿಂದಲೂ ವೆಚ್ಚದ ಹಣ ಪಡೆಯಲಾಗುವುದು ಎಂದಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next