Advertisement

Special Court: ಎಚ್‌.ಡಿ.ಕುಮಾರಸ್ವಾಮಿ ಗೈರುಹಾಜರಿಗೆ ಜನಪ್ರತಿನಿಧಿಗಳ ಕೋರ್ಟ್‌ ಗರಂ

02:56 AM Nov 07, 2024 | Team Udayavani |

ಬೆಂಗಳೂರು: ಹಲಗೆವಡೇರಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಪದೇ ಪದೆ ಗೈರುಹಾಜರಾಗುತ್ತಿರುವುದಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ನ.16ಕ್ಕೆ ಮುಂದೂಡಿದೆ.

Advertisement

ಪ್ರಕರಣ ಸಂಬಂಧ ಬುಧವಾರ ಖುದ್ದು ಕುಮಾರಸ್ವಾಮಿ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ, ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಕಾರಣದಿಂದ ವಿನಾಯಿತಿ ನೀಡುವಂತೆ ಕುಮಾರಸ್ವಾಮಿ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು.

ಕುಮಾರಸ್ವಾಮಿ ಪರ ವಕೀಲರ ಮನವಿಗೆ ಸಿಟ್ಟಾದ ನ್ಯಾಯಾಧೀಶರು, ನಿಮ್ಮ ಕಕ್ಷಿದಾರರಿಗೆ ಎಷ್ಟು ಸಮಯಾವಕಾಶ ಕೊಡಬೇಕು? ಪ್ರತಿ ಬಾರಿಯೂ ಮುಂದಿನ ವಿಚಾರಣೆ ವೇಳೆ ಬರುತ್ತಾರೆಂದು ಹೇಳುತ್ತೀರಾ ಆದರೆ ಗೈರಾಗುತ್ತಾರೆ. ಅಲ್ಲದೆ ಮತ್ತೆ ಬಂದು ಹಾಜರಾತಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಕೆ ಮಾಡುತ್ತಿರಾ? ಇದೇ ರೀತಿ ಪದೇ ಪದೆ ಗೈರಾಗುತ್ತಿದ್ದರೆ ಏನರ್ಥ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಉತ್ತರಹಳ್ಳಿ ಹೋಬಳಿಯ ಹಲಗೆವಡೇರಹಳ್ಳಿ ಸರ್ವೆ ನಂ. 128, 137 ರಲ್ಲಿನ 2.24 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿದ ಆರೋಪ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next