Advertisement
ಬಿಂಬುಳಿ ಉಪ್ಪಿನಕಾಯಿ ಬೇಕಾಗುವ ಸಾಮಗ್ರಿ: ಬಿಂಬುಳಿ- ಇಪ್ಪತ್ತು, ಸಾಸಿವೆ- ಕಾಲು ಕಪ್, ಅರಸಿನ- ಎರಡು ಚಮಚ, ಇಂಗು ಸುವಾಸನೆಗಾಗಿ, ಮೆಂತೆ- ಒಂದು ಚಮಚ, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಬಿಂಬುಳಿ- ಎರಡು, ಕ್ಯಾರೆಟ್ ತುರಿ- ಆರು ಚಮಚ, ಮೂಲಂಗಿ ತುರಿ- ನಾಲ್ಕು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಕೊತ್ತಂಬರಿಸೊಪ್ಪು$ಸ್ವಲ್ಪ$, ಹಸಿಮೆಣಸು- ಒಂದು, ತೆಂಗಿನ ತುರಿ- ಮೂರು ಚಮಚ, ಬ್ಲೇಕ್‌ಸಾಲ್ಟ್- ಅರ್ಧ ಚಮಚ, ಉಪ್ಪು ರುಚಿಗೆ ಬೇಕಷ್ಟು.
Related Articles
Advertisement
ಮೆಣಸುಕಾಯಿಬೇಕಾಗುವ ಸಾಮಗ್ರಿ: ಬಿಳಿ ಎಳ್ಳು – ಎರಡು ಚಮಚ, ಕಪ್ಪು ಎಳ್ಳು- ಎರಡು ಚಮಚ, ಉದ್ದಿನಬೇಳೆ- ಎರಡು ಚಮಚ, ಕೆಂಪು ಮೆಣಸು- ಐದು, ತೆಂಗಿನ ತುರಿ- ಒಂದು ಕಪ್, ಬಿಂಬುಳಿ- ಎಂಟು, ಮೆಣಸಿನಪುಡಿ- ಒಂದು ಚಮಚ, ಬೆಲ್ಲ ಮತ್ತು ಉಪ್ಪು ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ: ಹೆಚ್ಚಿದ ಬಿಂಬುಳಿಗೆ ಉಪ್ಪು, ಮೆಣಸಿನಪುಡಿ, ಬೆಲ್ಲ ಹಾಗೂ ಬೇಕಷ್ಟು ನೀರು ಸೇರಿಸಿ ಬೇಯಲು ಇಡಿ. ಎಳ್ಳನ್ನು ಮೊದಲು ಹುರಿದು ತೆಗೆದುಕೊಳ್ಳಿ. ಅದೇ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಮೆಣಸು ಮತ್ತು ಉದ್ದಿನ ಬೇಳೆಯನ್ನು ಹುರಿಯಿರಿ. ನಂತರ ಹುರಿದ ಮಸಾಲೆಗಳನ್ನೆಲ್ಲ ತೆಂಗಿನ ತುರಿಯೊಡನೆ ಬೇಕಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿಟ್ಟ ಬಿಂಬುಳಿಗೆ ಇದನ್ನು ಸೇರಿಸಿ ಕರಿಬೇವು ಮತ್ತು ಸೀಳಿದ ಹಸಿಮೆಣಸಿನ ಜೊತೆ ಕುದಿಸಿ ಇಳಿಸಿ. ದಪ್ಪವಾದ ಗಸಿಯಂತಿರುವ ಇದಕ್ಕೆ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ. ಗೊಜ್ಜು
ಬೇಕಾಗುವ ಸಾಮಗ್ರಿ: ಬಿಂಬುಳಿ- ಆರು, ಕೆಂಪು ಮೆಣಸಿನಪುಡಿ- ಒಂದು ಚಮಚ, ಅರಸಿನ- ಕಾಲು ಚಮಚ, ರಸಂ ಪೌಡರ್- ಎರಡು ಚಮಚ, ಉಪ್ಪು ಮತ್ತು ಬೆಲ್ಲ ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ಬಿಂಬುಳಿಗೆ ಬೆಲ್ಲ, ಉಪ್ಪು ಮೆಣಸಿನಪುಡಿ ಮತ್ತು ಅರಸಿನ ಸೇರಿಸಿ ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ರಸಂ ಪೌಡರ್ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಸ್ವಲ್ಪ ನೀರು ಆರಿದ ನಂತರ ಒಲೆಯಿಂದ ಇಳಿಸಿ. ಬೆಳ್ಳುಳ್ಳಿ ಮತ್ತು ಕರಿಬೇವು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಗೀತಸದಾ