Advertisement
“ವಿಶ್ವಾಸ ಕಿರಣ’ ಅನ್ವಯ 25 ದಿನಗಳ ಕಾಲ, ದಿನಕ್ಕೆ 3 ತಾಸು ವಿಶೇಷ ಬೋಧನಾ ತರಗತಿ ನಡೆಸಿ ಮಕ್ಕಳನ್ನು ಮುಂದಕ್ಕೆ ತರುವ ಜವಾಬ್ದಾರಿ ಶಿಕ್ಷಕರಿಗೆ ನೀಡಲಾಗಿದೆ. ರಾಜ್ಯದ 34 ಜಿಲ್ಲೆಗಳ 204 ಶೈಕ್ಷಣಿಕ ಬ್ಲಾಕ್‌ಗಳ 535 ಕಲಿಕಾ ಕೇಂದ್ರಗಳಲ್ಲಿ ಈ ಹೆಚ್ಚುವರಿ ಕಲಿಕೆಗೆ ವ್ಯವಸ್ಥೆ ಆಗಲಿದೆ. ಮಂಗಳೂರು ಉತ್ತರದಲ್ಲಿ ಎರಡು ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಇಂತಹ ಎರಡು ಕಲಿಕಾ ಬ್ಲಾಕ್ ಗುರುತಿಸಲಾಗಿದೆ.
ಕಲಿಕೆಯಲ್ಲಿ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಕ್ಕಳನ್ನು ಗುರುತಿಸಿ ಅವರಿಗೆ “ವಿಶ್ವಾಸ ಕಿರಣ’ ವಿಶೇಷ ತರಗತಿ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ಅದರಂತೆ ಅ.9ರಿಂದ ವಿಶೇಷ ತರಗತಿ ಆರಂಭವಾಗಲಿದ್ದು ರವಿವಾರವೂ ಸೇರಿ ನಿತ್ಯ 3 ತಾಸು ತರಗತಿ ಇರಲಿದೆ. ದ.ಕ.ದಲ್ಲಿ 14 ಕಲಿಕಾ ಕೇಂದ್ರ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ “ವಿಶ್ವಾಸ ಕಿರಣ’ ಕಾರ್ಯಕ್ರಮದಲ್ಲಿ ಒಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಒ) ವಲಯದಲ್ಲಿ ಎರಡು ಕೇಂದ್ರಗಳನ್ನು ತೆರೆಯ ಲಾಗುತ್ತದೆ. 9ನೇ ತರಗತಿ ಯಿಂದ ನೂರು ಹಾಗೂ 10ನೇ ತರಗತಿಯಿಂದ 100 ಮಕ್ಕಳಂತೆ ಆಯಾ ವಲಯದ ಒಟ್ಟು 400 ಮಕ್ಕಳು ಇದರ ಪ್ರಯೋಜನ ಪಡೆಯ ಲಿದ್ದಾರೆ. ದಕ್ಷಿಣ ಕನ್ನಡದಲ್ಲಿ 14 ಕಲಿಕಾ ಕೇಂದ್ರ ತೆರೆಯಲಾಗುತ್ತಿದ್ದು, ಸುಮಾರು 1800ಕ್ಕೂ ಮಿಕ್ಕಿ ವಿದ್ಯಾರ್ಥಿ ಗಳು ಪ್ರಯೋಜನ ಪಡೆದು ಕೊಳ್ಳ ಲಿದ್ದಾರೆ. ಆಸಕ್ತ ಮಕ್ಕಳನ್ನೂ ಪರಿಗಣಿಸ ಲಾಗುತ್ತದೆ. ವಿದ್ಯಾರ್ಥಿಗಳ ಅಧ್ಯಯನ ಕೌಶಲ ಉತ್ತಮಗೊಳಿಸುವುದು, ಕಲಿಕೆ ಯಲ್ಲಿ ಹಿಂದುಳಿದವರಿಗೆ ಉತ್ತೇಜನ, ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭ್ಯಾಸ ಮಾಡುವುದು ಈ ತರಗತಿಯ ಉದ್ದೇಶ.
Related Articles
ಅ. 9ರಿಂದ ಅ. 17ರ ವರೆಗೆ ರವಿವಾರವೂ ಸೇರಿ ಈ ತರಗತಿ ನಡೆಯುವ ಕಾರಣ ಸರಕಾರಿ ಪ್ರೌಢ ಶಾಲೆ ಗಳ ಶಿಕ್ಷಕರು-ಮಕ್ಕಳು ಅಸಮಾ ಧಾನಗೊಂಡಿದ್ದಾರೆ. ಕಳೆದ 2 ವರ್ಷದಲ್ಲಿ ರವಿವಾರ ತರಗತಿ ಇರಲಿಲ್ಲ. ಈಗ ಇತರ ಶಿಕ್ಷಕರು ದಸರಾ ರಜೆಯಲ್ಲಿದ್ದರೆ ಈ ಮಕ್ಕಳು-ಶಿಕ್ಷಕರು ತರಗತಿಯಲ್ಲಿರಬೇಕಾಗಿದೆ.
Advertisement
ವಿಶ್ವಾಸ ಕಿರಣ’ ಕಾರ್ಯಕ್ರಮ ಉತ್ತಮ ಫಲಿತಾಂಶ ನೀಡಿರುವ ಕಾರಣ ಈ ಬಾರಿಯೂ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರಗಳನ್ನು ಗುರುತಿಸಿ ನುರಿತ ಶಿಕ್ಷಕರನ್ನು ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಾಗುವುದು.ಶಿವರಾಮಯ್ಯ, ಡಿಡಿಪಿಐ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಬೈಂದೂರು ಮತ್ತು ಬ್ರಹ್ಮಾವರಗಳಲ್ಲಿ ತಲಾ 3; ಇನ್ನುಳಿದ ಬ್ಲಾಕ್‌ಗಳಲ್ಲಿ ತಲಾ ಎರಡು ಕೇಂದ್ರ ತೆರೆಯಲಾಗುತ್ತದೆ. ರಾಜ್ಯಾದ್ಯಂತ ಏಕ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕೊನೆಯ ಕ್ಷಣದ ಬದಲಾವಣೆ ಇದ್ದಲ್ಲಿ ಶನಿವಾರ ನಡೆಯುವ ವೀಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ಅಧಿಕಾರಿಗಳು ತಿಳಿಸಲಿದ್ದಾರೆ.
–ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ
* ಲಕ್ಷ್ಮೀನಾರಾಯಣ ರಾವ್