ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) ತನ್ನ ಸುವರ್ಣ ಮಹೋತ್ಸವದ ವರ್ಷದಲ್ಲಿ ಆರಂಭಿಸಿರುವ ಹೊಸತೆಂದರೆ ‘ಮಿನಿ ಮೂವಿ ಮಾಡಿ ಬಹುಮಾನ ಗೆಲ್ಲಿ‘.
ಮಿನಿ ಮೂವಿ ಮೇನಿಯಾ – ಕಿರುಚಿತ್ರ ಸ್ಪರ್ಧೆಗೆ ಈಗಾಗಲೇ ನೋಂದಣಿ ಆರಂಭವಾಗಿದೆ. ಇಫಿ ಸಮಿತಿ ಉತ್ಸವದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಲಿದೆ. ಆ ಬಳಿಕ 72 ಗಂಟೆಗಳಲ್ಲಿ ಕಿರುಚಿತ್ರ ನಿರ್ಮಿಸಿ ಸಲ್ಲಿಸಬೇಕು. ಈ ಪೈಕಿ ಗೋವಾ ವಿಭಾಗ ಮತ್ತು ರಾಷ್ಟ್ರೀಯ ವಿಭಾಗಗಳೆಂದು ಇರಲಿವೆ.
ಇಫಿ ಸಮಿತಿಯವರು ಹೇಳುವಂತೆ, ಕಿರುಚಿತ್ರ ನಿರ್ಮಾಣವನ್ನು ಪ್ರೋತ್ಸಾಹಿಸುವುದು, ಚಿತ್ರ ನಿರ್ಮಾಣಕಾರರನ್ನು ಪರಸ್ಪರ ಬೆಸೆಯುವುದು ಈ ಸ್ಪರ್ಧೆಯ ಉದ್ದೇಶ. ಇದರೊಂದಿಗೆ ಹೊಸ ತರುಣ ಪ್ರತಿಭೆಗಳನ್ನು ಬೆಳಕಿಗೆ ತರುವ ಮೂಲೋದ್ದೇಶವನ್ನೂ ಹೊಂದಲಾಗಿದೆ.
ಅರ್ಹತೆಗಳು:
ರಾಷ್ಟ್ರೀಯವಿಭಾಗ : ಸಿನಿಮಾ ಮೂಕಿ ಚಿತ್ರವಾಗಿರಬಹುದು ಅಥವಾ ಯಾವುದೇ ಭಾರತೀಯ ಭಾಷೆ ಅಥವಾ ಇಂಗ್ಲಿಷ್ ಭಾಷೆಯ ಸಿನೇಮಾ ಆಗಿರಬಹುದು. ಆದರೆ ಅದನ್ನು ಭಾರತೀಯರೇ ಅಥವಾ ಭಾರತದ ಚಿತ್ರ ನಿರ್ಮಾಣ ಕಂಪೆನಿಗಳು, ಸಾಮಾಜಿಕ – ಶೈಕ್ಷಣಿಕ ಸಂಸ್ಥೆಗಳು ಅಥವಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ತಮ್ಮ ರಾಷ್ಟ್ರೀಯತೆಯನ್ನು ಖಚಿತಪಡಿಸುವ ಯಾವುದೇ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಗೋವಾ ವಿಭಾಗ: ಈ ವಿಭಾಗದಡಿ ಗೋವಾದವರು, ಗೋವಾದ ಸಂಸ್ಥೆಗಳು ಸಿನಿಮಾವನ್ನು ಸಲ್ಲಿಸಬಹುದು. ಜತೆಗೆ ಸಿನಿಮಾದಲ್ಲಿ ಬಳಸಲಾಗುವ ಕಲಾವಿದರು ಮತ್ತು ಪರಿಣಿತರೂ ಗೋವಾದವರೇ ಆಗಿರಬೇಕು. ಇಲ್ಲಿಯೂ ಸರಕಾರ ನೀಡಿದ ಯಾವುದಾದರೂ ದಾಖಲೆಗಳನ್ನು ಸಲ್ಲಿಸಬೇಕು. ಗೋವಾದವರು ಎರಡೂ ವಿಭಾಗಗಳಲ್ಲಿ ಭಾಗವಹಿಸಬಹುದು.
Related Articles
ಇಂಗ್ಲಿಷ್ ಹೊರತುಪಡಿಸಿದಂತೆ ಉಳಿದೆಲ್ಲಾ ಚಿತ್ರಗಳು ಇಂಗ್ಲಿಷ್ ಸಬ್ ಟೈಟಲ್ಸ್ ಗಳನ್ನು ಹೊಂದಿರಬೇಕು. ಹೆಸರು ನೋಂದಾಯಿಸಲು ಇದೇ ನವೆಂಬರ್ 15 ಕೊನೆಯ ದಿನ. ಹೆಸರು ನೋಂದಣಿ ಉಚಿತವಾಗಿದ್ದು, ಸಿನಿಮಾ ಸಲ್ಲಿಕೆಗೆ ಒಂದು ಸಾವಿರ ರೂ. ಶುಲ್ಕ ಪಾವತಿಸಬೇಕು.
ಬಹುಮಾನಗಳ ವಿವರ
– ಅತ್ಯುತ್ತಮ ಚಿತ್ರ – ಪ್ರಥಮ ಒಂದು ಲಕ್ಷ ರೂ, ದ್ವಿತೀಯ 50 ಸಾವಿರ ರೂ.,
– ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಥೆ – ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಿನಿ ಛಾಯಾಗ್ರಾಹಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಧ್ವನಿ ಮುದ್ರಣ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ನಟ – ನಟಿ ವಿಭಾಗಗಳಲ್ಲಿ ಪ್ರಥಮ (25 ಸಾವಿರ ರೂ) ಹಾಗೂ ದ್ವಿತೀಯ (20) ಸಾವಿರ ರೂ, ಬಹುಮಾನಗಳಿವೆ.
ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ಸಂಬಂಧ ವಿವರಗಳಿಗೆ ಸಂಪರ್ಕಿಸಿ: https://iffigoa.org/mini-movie-mania-short-film-competition-iffi-2019/
ಸಿನಿಮಾ ಸಲ್ಲಿಕೆಗೆ : https://docs.google.com/forms/d/e/1FAIpQLSd2vGr6qSm7qnvx90gbhgb7p01tM0rl3DPvCSReMSdWZnB4fg/viewform