Advertisement

“ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’

04:58 AM Jan 09, 2019 | Team Udayavani |

ಮಂಗಳೂರು: ವಿಶ್ವ ಆ್ಯಂಬುಲೆನ್ಸ್‌ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆಯು “ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ವಿಶೇಷ ಅಭಿಯಾನ ಆಯೋಜಿಸಿದೆ.

Advertisement

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅ ಧಿಕಾರಿ ಸಗೀರ್‌ ಸಿದ್ಧಿಕಿ, ಜೀವ ಉಳಿಸುವ ತಂತ್ರಗಳಲ್ಲಿ ಜಾಗೃತಿ ಮೂಡಿಸುವ ಗುರಿಯ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ತರಬೇತಿ ನೀಡುವ ಕೆಲಸವನ್ನು ಮಾಡಲಿದೆ ಎಂದರು. 

ಅಪಘಾತ ನಡೆದಾಗ ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಜೀವ ಉಳಿಸಬಹುದಾದ ಸುವರ್ಣ ಗಂಟೆಯ ಪ್ರಾಮುಖ್ಯದ
ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಮತ್ತು ಪ್ರೋತ್ಸಾಹಿಸುವುದು ಈ ಅಭಿಯಾನದ ಹಿಂದಿರುವ ಉದ್ದೇಶ. ಇದಕ್ಕಾಗಿ ಸಾರ್ವಜನಿಕರಿಗೆ ಸಿಪಿಆರ್‌(ಕಾರ್ಡಿಯೊಪಲ್ಮನರಿ ರಿಸಸಿಟೇಶನ್‌) ನಂತಹಜೀವ ಉಳಿಸುವ ತಂತ್ರಗಳ ಬಳಕೆಯಲ್ಲಿ ತರಬೇತಿ ನೀಡಲಿದೆ ಎಂದರು.

ಡಾ| ಜೀದು ರಾಧಾಕೃಷ್ಣನ್‌ ಮಾತನಾಡಿ, ಆ್ಯಂಬುಲೆನ್ಸ್‌ಗಳ ಪ್ರಾಮುಖ್ಯ ಮತ್ತು ಜೀವ ಉಳಿಸುವಲ್ಲಿ ಅವು ವಹಿಸುವ ಪಾತ್ರದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದರು. ಕೆಎಂಸಿಯ ಮಾರ್ಕೆಟಿಂಗ್‌ ಎಜಿಎಂ ಸುರೇಂದ್ರ ಪ್ರಸಾದ್‌, ಸಂತೋಷ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next