Advertisement
ಕೆಲವೊಂದು ಕುಟುಂಬದಲ್ಲಿ ಗಂಡು ಹೊರಗೆ ದುಡಿದು ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ಹೆಣ್ಣು ಮನೆ ಕೆಲಸ, ಮಕ್ಕಳ ಆರೈಕೆ ನೋಡಿಕೊಳ್ಳಬೇಕೆಂದು ತಮ್ಮ ಮಕ್ಕಳ ಮದುವೆಗೆ ಮೊದಲೇ ಹಿರಿಯರ ಅಪ್ಪಣೆಯಾಗಿರುತ್ತದೆ. ಇನ್ನೂ ಕೆಲವೊಂದು ಕುಟುಂಬದವರು, ಹೆಣ್ಣು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದೂ ಕೈತುಂಬಾ ಸಂಬಳ ತರುತ್ತಿದ್ದರೆ ಮದುವೆಯ ನಂತರ ಕೆಲಸವನ್ನು ಮುಂದುವರಿಸಲು ಹೇಳುವವರೇ ಜಾಸ್ತಿ. ಮದುವೆಯ ನಂತರ ಮಕ್ಕಳು, ಸಂಸಾರವೆಂದು ಹೆಚ್ಚಿನ ಜವಾಬ್ದಾರಿ ಹೆಣ್ಣಿಗೆ ಬಳುವಳಿಯಾಗಿ ಬರುವುದು ಸಹಜ.
Related Articles
Advertisement
ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ. ಆಗ ಚಿಕ್ಕ ಮಗುವನ್ನು ಹೇಗಪ್ಪಾ ಸಾಕುವುದು? ಅಂತಂದುಕೊಂಡಿದ್ದ ನಿಮ್ಮ ಪತ್ನಿಗೆ ಆ ಹೊಗಳಿಕೆ ಧೈರ್ಯ ತುಂಬುತ್ತದೆ.
ಮಗುವಿನ ಒದ್ದೆ ಬಟ್ಟೆ ಬದಲಿಸುವುದು, ತೊಟ್ಟಿಲಲ್ಲಿ ಮಗುವನ್ನು ಹಾಕಿ ಲಾಲಿ ಹಾಡಿ ಮಲಗಿಸುವುದು, ರಾತ್ರಿ ಜಾಸ್ತಿ ಆಳುವ ಮಗುವಾಗಿದ್ದರೆ ಸ್ವಲ್ಪ ಹೊತ್ತು ಅದನ್ನು ಎತ್ತಿಕೊಂಡು, ಸಮಾಧಾನಿಸುವುದು… ಇಂಥ ಸಣ್ಣಪುಟ್ಟ ಕೆಲಸಗಳನ್ನು ಮರೆಯದೆ ಮಾಡಿ. ಆಗ ಅವಳಿಗೆ ನಿಮ್ಮ ಮೇಲೆ ಗೌರವ ದುಪ್ಪಟ್ಟಾಗುತ್ತದೆ.
ಮಗುವಿನ ತುಂಟಾಟಗಳಲ್ಲಿ ನೀವೂ ಭಾಗಿಯಾಗಿ. ನಿಮ್ಮ ಮಗುವಿಗೆ ನೀವು ಕೋತಿಯಾಗಿ, ಆನೆಯಾಗಿ ಎಲ್ಲದಕ್ಕಿಂತ ಹೆಚ್ಚು ಅಪ್ಪನಾಗಿ ಆ ಮಗುವಿನೊಂದಿಗೆ ಆಟವಾಡಿ. ಮಗುವಿನ ತೊದಲು ನುಡಿಗಳನ್ನು ಕೇಳಿ ಆನಂದಿಸಿ.ಹೀಗೆಲ್ಲ ಮಾಡಿದಾಗಲೇ, ನೀವು ಗ್ರೇಟ್ ಅಪ್ಪ..! ಇಲ್ಲಾಂದ್ರೆ, ಬೆಪ್ಪ..!
— ವೇದಾವತಿ ಎಚ್.ಎಸ್.