Advertisement
ಪೋಷಕಾಂಶಗಳ ಆಗರಓಲೆ ಬೆಲ್ಲದಲ್ಲಿ ಕಬ್ಬಿಣದ ಅಂಶ, ಮ್ಯಾಗ್ನೇಷಿಯಂ, ಕ್ಯಾಲ್ಸಿಯಂ, ಪೋಟಾಷಿಯಂ ಪೋಷಕಾಂಶಗಳು ಹೇರಳವಾಗಿವೆ. ಕಬ್ಬಿಣ ರಕ್ತದಲ್ಲಿರುವ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ ಹಾಗೂ ಸುಸ್ತು ಕಡಿಮೆಗೊಳಿಸುತ್ತದೆ. ಮ್ಯಾಗ್ನೇಷಿಯಂ ನರಮಂಡಲವನ್ನು ಸಕ್ರಿಯವಾಗಿರಿಸುತ್ತದೆ. ಬೆಲ್ಲದಲ್ಲಿರುವ ಕ್ಯಾಲ್ಸಿಯಂ ಬಲಿಷ್ಠ ಮೂಳೆಗಳಿಗೆ ಸಹಾಯಕ. ಪೋಟಾಷಿಯಂ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. ಅಲ್ಲದೆ ರೋಗ ನಿರೋಧಕ ವ್ಯವಸ್ಥೆಯನ್ನು, ರಕ್ತ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಸಕ್ಕರೆಗೆ ಹೋಲಿಸಿದರೆ ಓಲೆ ಬೆಲ್ಲ ಹೆಚ್ಚು ಆರೋಗ್ಯಕರ. ಇದು ದೇಹದ ಒಳಭಾಗವನ್ನು ಶುದ್ಧೀಕರಿಸುತ್ತದೆ. ಉಸಿರಾಟದ ಭಾಗ, ಹೊಟ್ಟೆ, ಶ್ವಾಸಕೋಶ ಹಾಗೂ ದೇಹದ ಉಳಿದ ಭಾಗಗಳಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಿ ದೇಹದ ಆರೋಗ್ಯ ಕಾಪಾಡುತ್ತದೆ.
ಓಲೆ ಬೆಲ್ಲದ ಪ್ರಮುಖ ಉಪಯೋಗವೆಂದರೆ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಶಮನಗೊಳಿಸುವುದು. ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವುದು ಮಾತ್ರವಲ್ಲದೆ ಕರುಳಿನ ಚಲನೆಯನ್ನು ನಿಯಂತ್ರಿಸಿ ಮಲಬದ್ಧತೆ, ಅರ್ಜೀಣವನ್ನು ತಡೆಗಟ್ಟುತ್ತದೆ. ಅನಗತ್ಯ ಕಣಗಳನ್ನು ತೆಗೆದುಹಾಕಿ ಶುದ್ಧೀಕರಿಸುತ್ತದೆ. ಯಕೃತ್ತಿನ ಅಸಹ್ಯ ಪದಾರ್ಥಗಳನ್ನು ಹೊರಹಾಕುವ ಮೂಲಕ ನಿರ್ವಿಷವಾಗಿ ಕೆಲಸ ಮಾಡುತ್ತದೆ. ಮಾಧ್ಯಮ ಗಾತ್ರದ ಓಲೆ ಬೆಲ್ಲವನ್ನು ಸೇವಿಸುವುದರಿಂದ ಹೊಟ್ಟೆಯೂ ತಂಪಾಗುತ್ತದೆ. ಮೈಗ್ರೇನ್‌ಗೆ ರಾಮಬಾಣ
ಓಲೆ ಬೆಲ್ಲದಲ್ಲಿರುವ ಔಷಧೀಯ ಗುಣಗಳು ನೈಸರ್ಗಿಕವಾಗಿ ಮೈಗ್ರೇನ್ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ತುಪ್ಪದೊಂದಿಗೆ ಇದನ್ನು ಸೇವಿಸುವುದರಿಂದ ಯಾವುದೆ ಔಷಧಿಗಳ ಸಹಾಯವಿಲ್ಲ ರಕ್ತನಾಳಗಳನ್ನು ಹಾಗೂ ನೋವುಗಳನ್ನು ನಿಯಂತ್ರಣಕ್ಕೆ ತರುತ್ತದೆ.
Related Articles
ಇದರ ಸೇವನೆ ಆರೋಗ್ಯಕರ ಹಾಗೂ ಮೃದು ಚರ್ಮಕ್ಕೆ ಉತ್ತಮವಾದುದು. ಇದು ಮೊಡವೆಗಳನ್ನು ತಡೆದು ನೈಸರ್ಗಿಕವಾಗಿ ಹೊಳೆಯುವ ಕಾಂತಿಯನ್ನು ನೀಡುತ್ತದೆ. ಮಾತ್ರವಲ್ಲದೆ ಕಪ್ಪುವರ್ತುಲಗಳು ಬಾರದಂತೆ ತಡೆಗಟ್ಟಿ ವೃದ್ಧಾಪ್ಯದ ಚಿಹ್ನೆಗಳನ್ನು ನಿಧಾನಗೊಳಿಸುತ್ತದೆ.
Advertisement
ಶಕ್ತಿ ತುಂಬುವ ಬೆಲ್ಲಓಲೆ ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ತಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ. ಪ್ರತಿದಿನ ಬೆಲ್ಲ ತಿನ್ನುವುದರಿಂದ ಹೆಚ್ಚು ಸಮಯದವರೆಗೆ ನಿಮಗೆ ಚುರುಕು ಹಾಗೂ ಶಕ್ತಿ ನೀಡುತ್ತದೆ. ಒಂದು ವೇಳೆ ದಿನವನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ವಿಫಲರಾದರೆ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ. — ರಮ್ಯಾ ಕೆದಿಲಾಯ