Advertisement

ತ್ಯಾಜ್ಯ ವಿಲೇವಾರಿಗೆ ತೆಂಕ ಮಿಜಾರು ಗ್ರಾ.ಪಂ.ನ ವಿಶಿಷ್ಟ ಕ್ರಮ

11:36 AM Apr 22, 2018 | Team Udayavani |

ತೆಂಕ ಮಿಜಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ವಿಶಿಷ್ಟ ಕ್ರಮ ಅನುಸರಿಸಲಾಗುತ್ತಿದೆ. ಗ್ರಾ.ಪಂ. ಮಟ್ಟ ದಲ್ಲಿ ಮೊದಲ ಬಾರಿಗೆ ಮನೆಮನೆಯಿಂದ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಯವನ್ನು ಮೂಡಬಿದಿರೆ ಹೋಬಳಿ ವ್ಯಾಪ್ತಿಯಲ್ಲಿರುವ ತೆಂಕ ಮಿಜಾರು ಗ್ರಾ.ಪಂ. ನಡೆಸಿದ್ದಲ್ಲದೆ ಪೂಮವರ ಪದವಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿನ ಮೈಟ್‌ ಎಂಜಿನಿಯರಿಂಗ್‌ ಕಾಲೇಜಿನಿಂದ ಬೊಳ್ಳೆಚ್ಚಾರು ಚೆಕ್‌ಪೋಸ್ಟ್‌ ಗಡಿತನಕ ಸುಮಾರು 541 ಮನೆಗಳು, 85 ಅಂಗಡಿಗಳು ಮತ್ತು 10ಕ್ಕಿಂತ ಅಧಿಕ ಹೊಟೇಲ್‌ಗಳ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಪ್ರತಿ ದಿನ ಪಂಚಾಯತ್‌ ಸಿಬಂದಿ ಸಂಗ್ರಹಿಸುತ್ತಾರೆ. 

Advertisement

ಕಳೆದ ಮಾ. 26ರಿಂದ ತ್ಯಾಜ್ಯ ವಿಲೇವಾರಿ ಹಾಗೂ ಸಂಗ್ರಹ ಕಾರ್ಯ ಆರಂಭಗೊಂಡಿದೆ. ಇದಕ್ಕಾಗಿ ಪ್ರತಿ ಮನೆಯಿಂದ 60, ಅಂಗಡಿಯಿಂದ 80, ಹೊಟೇಲ್‌ನಿಂದ 100 ರೂ. ಅನ್ನು ತಿಂಗಳಿಗೆ ವಸೂಲಿ ಮಾಡಲಾಗುತ್ತಿದೆ. ಗ್ರಾ.ಪಂ. ವತಿಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಸಂಸ್ಕರಣೆ ಘಟಕಕ್ಕೆ ಕೊಂಡೊಯ್ದು ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಒಣ ತ್ಯಾಜ್ಯದಲ್ಲಿ ಪ್ಪಾಸ್ಟಿಕ್‌, ಶೂ, ಬೆಲ್ಟ್, ಬಾಟಲಿ, ಚಪ್ಪಲ್‌, ರಟ್ಟುಗಳು ಸೇರಿವೆ. ಬಾಟಲಿ, ರಟ್ಟುಗಳನ್ನು ಗುಜಿರಿ ಅಂಗಡಿಗೆ ನೀಡಲಾಗುತ್ತದೆ. ತ್ಯಾಜ್ಯ ಘಟಕದ ಬೇರೆ ಕೋಣೆಯಲ್ಲಿ ಪ್ಲಾಸ್ಟಿಕ್‌ ತೊಟ್ಟೆಯನ್ನು ಶುಚಿಗೊಳಿಸಿ ಸಂಗ್ರಹಿಸಿ ಇಡಲಾಗಿದೆ. ಒಂದು ತಿಂಗಳೊಳಗೆ 3 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ಜಿ.ಪಂ.ಗೆ ನೀಡಲಾಗುವುದು ಎಂದು ಪಿಡಿಒ ಸಾಯೀಶ್‌ ಚೌಟ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next