Advertisement
– ಇದು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಕೇಳಿದ ಪ್ರಶ್ನೆಗಳು.
Related Articles
Advertisement
ಮಕ್ಕಳಿಂದ ಕೇಳಿಬಂದ ಪ್ರಮುಖ ಪ್ರಶ್ನೆಗಳು; ಅದಕ್ಕೆ ಸಿಎಂ ಉತ್ತರ 1. ಹಾವೇರಿಯ ಶಿಲ್ಪಾ ಎಂಬುವವರು “ಸಕಾಲದಲ್ಲಿ ಗುಣಮಟ್ಟದ ಶುಚಿ ನ್ಯಾಪ್‌ಕಿನ್ ವಿತರಿಸಬೇಕು. ಹಾಗೆಯೇ ಬಳಸಿದ ನ್ಯಾಪ್‌ಕಿನ್ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತೀರಾ?
ಸಿಎಂ: “ಕೇರಳದಲ್ಲಿ ಸೂಕ್ತ ವ್ಯವಸ್ಥೆಯಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು’ 2. ವಾಕ್ ಮತ್ತು ಶ್ರವಣ ದೋಷವಿರುವ ದಾವಣಗೆರೆಯ ತೇಜ (ಅವರ ಸನ್ಹೆ ಸಂಕೇತ ಆಧರಿಸಿ ಮತ್ತೂಬ್ಬರು ಪ್ರಶ್ನೆ ಕೇಳಿದರು), “ನಾನು ಎಸ್ಸೆಸ್ಸೆಲ್ಸಿಯಲ್ಲಿ 319 ಅಂಕ ಗಳಿಸಿದ್ದೇನೆ. ಆದರೆ ಶಿಕ್ಷಣ ಮುಂದುವರಿಕೆಗೆ ಸೂಕ್ತ ವ್ಯವಸ್ಥೆ ಇಲ್ಲ. ನಮ್ಮ ಶಿಕ್ಷಣಕ್ಕೆ ಏನು ವ್ಯವಸ್ಥೆ ಮಾಡಿದ್ದೀರಿ?
ಸಿಎಂ: ನಿಮ್ಮ ಪಿಯುಸಿ, ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸಲು ಪ್ರಯತ್ನಿಸಲಾಗುವುದು. ವಾಕ್ ಮತ್ತು ಶ್ರವಣ ದೋಷ ಸಮಸ್ಯೆಯಿರುವ ಮಕ್ಕಳಿಗೆ ಮೈಸೂರಿನಲ್ಲಷ್ಟೇ ಕಾಲೇಜು ಶಿಕ್ಷಣ ವ್ಯವಸ್ಥೆ ಇದೆ. ರಾಜ್ಯದ ನಾಲ್ಕೂ ವಿಭಾಗಗಳಲ್ಲೂ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು 3 ಮೌಡ್ಯ ಆಚರಣೆ ತಡೆಗೆ ಕ್ರಮ ಕೈಗೊಳ್ಳಿ ರಾಮನಗರದ ಎಂ.ಎಸ್. ಅಮೂಲ್ಯ ಮಾತನಾಡಿ, ವಾಮಾಚಾರಕ್ಕೆ ಮಕ್ಕಳನ್ನು ಬಲಿ ಕೊಡುವ ಘಟನೆಗಳು ನಡೆಯುತ್ತಿದೆ. ಇತ್ತೀಚೆಗೆ ಮಾಗಡಿಯಲ್ಲೂ ಒಂದು ಘಟನೆ ನಡೆದಿದೆ. ಇದನ್ನು ತಡೆಯಲು ಏನು ಮಾಡಿದ್ದೀರಿ ಎಂದು
ಸಿಎಂ: ಮೌಡ್ಯಗಳನ್ನು ತಡೆಗಟ್ಟಲು ಕರಡು ಮಸೂದೆ ಸಿದ್ಧವಾಗಿತ್ತು. ಸಾಕಷ್ಟು ಚರ್ಚೆ ಬಳಿಕ ಸಂಪುಟ ಉಪ ಸಮಿತಿಯನ್ನೂ ರಚಿಸಲಾಯಿತು. ಮೈಮೇಲೆ ದೇವರು ಬರುವುದೆಲ್ಲಾ ಸುಳ್ಳು, ಮೈಮೇಲೆ ಯಾವ ಶನಿಮಹಾತ್ಮನೂ ಬರುವುದಿಲ್ಲ. ನನ್ನ ಕಾರಿನ ಮೇಲೆ ಕಾಗೆ ಕುಳಿತಾಗ ಸಿಎಂ ಸ್ಥಾನಕ್ಕೆ ಕುತ್ತು ಎಂದರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಹೇಳಿದರು. ಈವರೆಗೆ 11 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ. ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸಿದ್ದೇನೆ. ಆಗ ಸಭಿಕರೊಬ್ಬರು; ಮುಂದೆಯೂ ನೀವೇ ಸಿಎಂ ಆಗಿ ಎಂದರು. ಮುಖ್ಯಮಂತ್ರಿಗಳು, “ಮುಂದೆಯೂ ನಾನೇ ಆಗುತ್ತೇನೆ. ಅದು ಬೇರೆ ವಿಚಾರ. ಮೌಡ್ಯ ಆಚರಣೆಗಳಿಗೆ ಕಡಿವಾಣ ಹಾಕುವ ಕಾಯ್ದೆ ತರಲು ಗಂಭೀರ ಚಿಂತನೆ ನಡೆದಿದೆ’ ಎಂದರು. 4. ಕೌಟುಂಬಿಕ ಸಮಸ್ಯೆಯಿಂದ ಬೆಂಗಳೂರಿನ ಬಾಲ ಮಂದಿರದಲ್ಲಿ 15 ದಿನ ಇದ್ದೆ. ಅಲ್ಲಿ ಸ್ನಾನಕ್ಕೆ ಪ್ರತ್ಯೇಕ ಕೋಣೆಯಿಲ್ಲ. ಹೊಟ್ಟೆ ತುಂಬ ಊಟವಿಲ್ಲ. 15 ದಿನ ಒಂದೇ ಬಟ್ಟೆಯಲ್ಲೇ ಕಳೆದೆ. ಈಗ ಅಜ್ಜಿ ಮನೆಯಲ್ಲಿದ್ದು, ಶಾಲೆಗೆ ಹೋಗುತ್ತಿದ್ದೇನೆ. ದಯವಿಟ್ಟು ಅಲ್ಲಿನ ಪರಿಸ್ಥಿತಿ ಸುಧಾರಿಸಿ ಎಂದು ಬೆಂಗಳೂರಿನ ಬಾಲಕಿಯೊಬ್ಬಳು ಅಳಲು ತೋಡಿಕೊಂಡಳು.
ಸಿಎಂ: ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ವಸ್ತುಸ್ಥಿತಿ ಪರಿಶೀಲಿಸಬೇಕು. ಒಂದೊಮ್ಮೆ ಸಮಸ್ಯೆಗಳಿದ್ದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಉಮಾ ಮಹದೇವನ್ ಅವರಿಗೆ ಸೂಚಿಸಿದರು. 5. ಮೊಟ್ಟೆ ಕೊಡುತ್ತೀರಾ- ಹಾಲು ಕೊಡುತ್ತಿಲ್ಲ!
ಶಾಲೆಯಲ್ಲಿ ಬಿಸಿಯೂಟದ ಜತೆಗೆ ಮೊಟ್ಟೆ ಕೊಡಬಹುದೇ ಎಂದು ರಾಯಚೂರಿನ ವಿಜಯಲಕ್ಷ್ಮೀ ಪ್ರಶ್ನೆ ಕೇಳಿದರು.
ಸಿಎಂ: ಮೊಟ್ಟೆ ತಿಂದರಷ್ಟೇ ಪೌಷ್ಠಿಕಾಂಶ ಸಿಗಲಿದೆ ಎಂಬ ಭಾವನೆ ತಪ್ಪು. ಅಂಗನವಾಡಿಗಳಲ್ಲಿ ಮೊಟ್ಟೆ ಕೊಡಲಾಗುತ್ತಿದೆ. ಉಳಿದವರಿಗೂ ನೀಡಲು ಚಿಂತಿಸಲಾಗುವುದು. ಹಾಲು, ಬಿಸಿಯೂಟ ಸಾಲದೇ? 6. ಕೆ.ಆರ್.ಪುರದಲ್ಲಿ ಮಾದಕವಸ್ತುಗಳು ಮಾರಾಟವಾಗುತ್ತಿದೆ ಎಂದು ಸ್ಥಳೀಯ ವಿದ್ಯಾಥಿನಿ ದೀಪಿಕಾ ಸಿಎಂ ಗಮನಕ್ಕೆ ತಂದರು.
ಸಿಎಂ: ಸಂಬಂಧಪಟ್ಟ ಡಿಸಿಪಿಗೆ ದೂರವಾಣಿ ಕರೆ ಮಾಡಿದ ಸಿಎಂ, “ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ವಿಶೇಷ ಅಭಿಯಾನ ನಡೆಸಿ ದುಷ್ಕರ್ಮಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ,’ ಎಂದು ಸೂಚಿಸಿದರು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದದ್ದು ನಮ್ಮ ತಪ್ಪೇ?: ಜ್ವರದಿಂದ ಬಳಲುತ್ತಿದ್ದ ಹೆಣ್ಣು ಮಗುವನ್ನು ಒಂದೂವರೆ ವರ್ಷದ ಹಿಂದೆ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮಗುವಿಗೆ ಅಂಗವೈಕಲ್ಯವಾಯಿತು. ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು ನಮ್ಮ ತಪ್ಪೇ? ಜತೆಗೆ, ಮಗುವಿಗೆ ಆರ್‌ಟಿಇ ಅಡಿ ಒಂದನೇ ತರಗತಿಗೆ ಪ್ರವೇಶ ಕೊಡುತ್ತಿಲ್ಲ ಎಂದು ಪೋಷಕರು ದೂರಿದರು. ಇದಕ್ಕೆ ಉತ್ತರಿಸಿದ ಸಿಎಂ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ರೀತಿ ಆಗುವುದಿಲ್ಲ. ಕೆಲವೊಮ್ಮೆ ನಿರ್ಲಕ್ಷ್ಯವಾಗಿರಬಹುದು. ಈ ಬಗ್ಗೆ ಪರಿಶೀಲಿಸಿ ವೈದ್ಯರು ನಿರ್ಲಕ್ಷ್ಯ ತೋರಿರುವುದು ದೃಢಪಟ್ಟರೆ ಕ್ರಮ ಜರುಗಿಸಲಾಗುವುದು. ಹಾಗೆಯೇ ಮಗುವಿಗೆ ಒಂದನೇ ತರಗತಿಗೆ ಪ್ರವೇಶ ಕೊಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು. ಬಾಲಕನಿಗೆ ಐದು ಲಕ್ಷ ರೂ. ಪರಿಹಾರ!: ಮಕ್ಕಳೊಂದಿಗೆ ಸಂವಾದ ಮುಗಿಸಿ ಹೊರನಡೆದ ಮುಖ್ಯಮಂತ್ರಿಗಳ ಬಳಿ ಗದಗ್‌ನ ಅರ್ಜುನ್ ಎಂಬಾತ ತನ್ನ ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಆರ್ಥಿಕ ಸಂಕಷ್ಟವನ್ನು ಬಿಚ್ಚಿಟ್ಟ. ಇದಕ್ಕೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣವೇ ಗದಗ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಾಲಕನಿಗೆ ಐದು ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದರು. ಏನೇ ಆದರೂ ಮದುವೆ ಒಪ್ಪಬೇಡ: ಹಲವು ಸಮಸ್ಯೆಗಳ ನಡುವೆಯೇ ಎಸ್ಸೆಸ್ಸೆಲ್ಸಿ ಮುಗಿಸಿದ್ದೇನೆ. ಈಗ ಕಾಲೇಜು ಸೇರಬೇಕೆಂದಿದ್ದೇನೆ. ಅಲ್ಲಿ ಡೊನೇಷನ್ ಕೇಳುತ್ತಿದ್ದಾರೆ. ಮನೆಯಲ್ಲಿ ಬಡತನ. ಡೊನೇಷನ್ ನೀಡುವುದಕ್ಕಿಂತ ಮದುವೆ ಮಾಡುವುದಾಗಿ ಮನೆಯಲ್ಲಿ ಹೇಳುತ್ತಿದ್ದಾರೆ ಎಂದು ಗದಗ್‌ನ ರೋಣ ತಾಲ್ಲೂಕಿನ ಲಕ್ಷ್ಮೀ ಅಳಲು ತೋಡಿಕೊಂಡರು. ಆಗ ಸಿಎಂ, “ಯಾವುದೇ ಕಾರಣಕ್ಕೂ ಮದುವೆ ಒಪ್ಪಬೇಡ. ಯಾರಾದರೂ ಒತ್ತಡ ಹಾಕಿದರೆ ಪೊಲೀಸರು ಇಲ್ಲವೇ ತಹಸೀಲ್ದಾರ್‌ಗೆ ದೂರು ಕೊಡು. ಪೊಲೀಸರು ಲಂಚ ಕೇಳಿದರೆ ಅವರನ್ನು ಮನೆಗೆ ಕಳುಹಿಸಲಾಗುವುದು’ ಎಂದು ಖಡಕ್ ಆಗಿ ಹೇಳಿದರು.