Advertisement
ಸ್ಪೀಕರ್ ರಮೇಶ್ ಕುಮಾರ್ ಬೆಳಗ್ಗೆ 11 ಗಂಟೆಗೆ ತಮ್ಮ ಕಚೇರಿಗೆ ಆಗಮಿಸಿದರು. ಗುರುವಾರವೂ ಕೆಲ ಶಾಸಕರು ರಾಜೀನಾಮೆ ಸಲ್ಲಿಸುತ್ತಾರೆಂಬ ವದಂತಿ ಇತ್ತು. ಆದರೆ, ಯಾವ ಶಾಸಕರೂ ರಾಜೀನಾಮೆ ಸಲ್ಲಿಸಲಿಲ್ಲ. ಆದರೆ, ಮಧ್ಯಾಹ್ನ ಸ್ಪೀಕರ್ ಭೋಜನಕ್ಕೆಮನೆಗೆ ತೆರಳಿದ ಸಂದರ್ಭದಲ್ಲಿ ರೋಷನ್ ಬೇಗ್ ಸ್ಪೀಕರ್ ಕಚೇರಿಗೆ ಆಗಮಿಸಿದ್ದರು.
Related Articles
Advertisement
ನಾವು ವಿಧಾನಸಭಾ ಕಾರ್ಯದರ್ಶಿ ಕಚೇರಿಗೆ ಆಗಮಿಸಿದ್ದೇವೆ ಎಂದು ವಾದ ಮಾಡಿದರೂ ಪೊಲಿಸರು ಒಳಗೆ ಬಿಡಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಪೋಲೀಸರ ವಿರುದ್ಧ ಮಾಜಿ ಸಚಿವ ಸೋಮಣ್ಣ ವಾಗಾœಳಿ ನಡೆಸಿದರು. ವಿಧಾನಸೌಧ ಈಗ ಸ್ಪೀಕರ್ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರಿಗೆ ರಕ್ಷಣೆ ನೀಡುವುದು ಪೋಲೀಸರ ಕೆಲಸ. ಸ್ಪೀಕರ್ ಅವರ ಕೂಪ ಮಂಡೂಕದ ಅಧಿಕಾರ ಬಹಳ ದಿನ ನಡೆಯುವುದಿಲ್ಲ’ ಎಂದು ಸ್ಪೀಕರ್ ವಿರುದಟಛಿ ಸೋಮಣ್ಣ ವಾಗ್ಧಾಳಿ ನಡೆಸಿದರು.
ಪೊಲೀಸ್ ಭದ್ರತೆ: ವಿಧಾನಸೌಧಕ್ಕೆ ಆಗಮಿಸುವ ಶಾಸಕರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ವಿಧಾನಸೌಧದ ಮೊದಲನೆ ಮಹಡಿಯಲ್ಲಿ ಪೊಲೀಸ್ ಭದ್ರತೆ ಪರಿಶೀಲನೆ ನಡೆಸಿದರು.
ಪತ್ರಕರ್ತರು ಹಾಗೂ ಹತ್ತು ಜನ ಶಾಸಕರನ್ನು ಬಿಟ್ಟು ಸ್ಪೀಕರ್ ಕಚೇರಿ ಇರುವ ವಿಧಾನಸೌಧದ ದಕ್ಷಿಣ ಭಾಗದಲ್ಲಿ ಯಾವುದೇ ವ್ಯಕ್ತಿಯನ್ನು ಬಿಡದಂತೆ ಸೂಚನೆ ನೀಡಿದರು.
ಓಡೋಡಿ ಬಂದ ಶಾಸಕರುಸಂಜೆ ಆರು ಗಂಟೆಯೊಳಗೆ ಸ್ಪೀಕರ್ ಅವರನ್ನು ಭೇಟಿ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಅತೃಪ್ತ 11 ಶಾಸಕರು ಪೋಲೀಸರ ಭದ್ರತೆಯಲ್ಲಿ ವಿಶೇಷ ವಾಹನದಲ್ಲಿ ವಿಧಾನಸೌಧಕ್ಕೆ
ಆಗಮಿಸಿದರು. ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಕಚೇರಿ ತಲುಪುವ ಹೊತ್ತಿಗೆ ಆರು ಗಂಟೆಯಾಗಿತ್ತು. ಹೀಗಾಗಿ ಅತೃಪ್ತ ಶಾಸಕರು ತರಾತುರಿಯಲ್ಲಿ ಬಸ್ ಇಳಿದು ಕೆಂಗಲ್
ಹನುಮಂತಯ್ಯ ಗೇಟ್‌ನಿಂದ ಸ್ಪೀಕರ್ ಕಚೇರಿವರೆಗೆ ಓಡಿಬಂದರು. ಸ್ಪೀಕರ್ ಕಚೇರಿ ಪ್ರವೇಶಿಸುವ ಹೊತ್ತಿಗೆ 6 ಗಂಟೆ 5 ನಿಮಿಷವಾಗಿತ್ತು. ಆದರೂ ಸ್ಪೀಕರ್ ಕಚೇರಿಗೆ 11
ಶಾಸಕರು ಪ್ರವೇಶ ಪಡೆದು ರಾಜೀನಾಮೆ ಸಲ್ಲಿಸಿದರು.