Advertisement
ಈ ಸಮಿತಿ ಸಂಸತ್‌ನ ಭದ್ರತೆಗೆ ಸಂಬಂಧಿಸಿದಂತೆ ಇರುವ ಎಲ್ಲ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಡಿ.13ರಂದು ನಡೆದ ಘಟನೆ ಮತ್ತೆ ಪುನರಾವರ್ತನೆಯಾಗದಂತೆ ಮಾರ್ಗಸೂಚಿಯನ್ನು ನೀಡಲಿದೆ ಎಂದಿದ್ದಾರೆ. ಇದರ ಜತೆಗೆ ಸಂಸದರು ಕೂಡ ಸಂಸತ್ ಭವನದ ಭದ್ರತಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ಸಲಹೆಗಳನ್ನು ನೀಡಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಮತ್ತೂಬ್ಬ ಆರೋಪಿ ಮಹೇಶ್ ಬಂಧನ: ಪ್ರಕರಣದ ಮಾಸ್ಟರ್‌ವೆುçಂಡ್ ಲಲಿತ್‌ಗೆ ದಿಲ್ಲಿಯಿಂದ ಪರಾರಿಯಾಗಲು ಸಹಾಯ ಮಾಡಿದ ಮಹೇಶ್ ಕುಮಾವತ್‌ನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಆತನನ್ನು 7 ದಿನಗಳ ಪೊಲೀಸ್ ವಶಕ್ಕೊಪಿಸಿ ಹೊಸದಿಲ್ಲಿಯ ಸ್ಥಳೀಯ ಕೋರ್ಟ್ ಆದೇಶ ನೀಡಿದೆ.
ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿ, ಮೈಸೂರಿನ ಮನೋರಂಜನ್ ಒಂದು ಬಾರಿ ವಿದೇಶ ಪ್ರವಾಸ ಮಾಡಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಎಂಜಿನಿಯರಿಂಗ್ ಕೋರ್ಸ್ ಅನ್ನು ಅರ್ಧಕ್ಕೇ ನಿಲ್ಲಿಸಿದ ಬಳಿಕ 2014ರಲ್ಲಿ ಮನೋರಂಜನ್ ಯಾವುದೇ ಪರಿಹಾರ ಕಾರ್ಯಾಚರಣೆಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡಲೆಂದು ಕಾಂಬೋಡಿಯಾಗೆ ಹೋಗಿ ಬಂದಿದ್ದ. ಅವನ ಅಂತಾರಾಷ್ಟ್ರೀಯ ಪ್ರಯಾಣದ ದಾಖಲೆ ಪರಿಶೀಲನೆ ವೇಳೆ ಈ ವಿಚಾರ ತಿಳಿದುಬಂದಿದೆ. ಮೈಸೂರಿನಲ್ಲಿರುವ ಆತನ ಹೆತ್ತವರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದು, ವಿಶ್ವಸಂಸ್ಥೆಯಂಥ ಸಂಸ್ಥೆಯೊಂದರಲ್ಲಿ ಸ್ವಯಂಸೇವಕನಾಗಿ ದುಡಿಯಲೆಂದು ಕಾಂಬೋಡಿಯಾಗೆ ಹೋಗಿ ಬಂದಿದ್ದ ಎಂದಿದ್ದಾರೆ. ಜತೆಗೆ ಮತ್ತೂಬ್ಬ ಆರೋಪಿ ಸಾಗರ್ ಶರ್ಮಾ ಒಮ್ಮೆಯೂ ಮೈಸೂರಿನ ನಮ್ಮ ಮನೆಗೂ ಭೇಟಿ ನೀಡಿಲ್ಲ ಎಂದೂ ಅವರು ವಿಚಾರಣಾಧಿಕಾರಿಗಳಿಗೆ ತಿಳಿಸಿದ್ದಾರೆ.
Related Articles
ಪಾಸ್ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ದಾಖಲಿಸಲು ದಿಲ್ಲಿ ಪೊಲೀಸರ ವಿಶೇಷ ಘಟಕ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕಳೆದ ಬುಧವಾರ ನಡೆದ ಘಟನೆಯ ಮರುಸೃಷ್ಟಿಗಾಗಿ ಎಲ್ಲ ಆರೋಪಿಗಳನ್ನೂ ಸಂಸತ್ ಭವನದ ಒಳಗೆ ಕರೆದೊಯ್ಯಲು ಕೂಡ ತನಿಖಾಧಿಕಾರಿಗಳು ಚಿಂತನೆ ನಡೆಸಿದ್ದು, ಇದಕ್ಕಾಗಿ ಸಂಸತ್‌ನ ಅನುಮತಿ ಕೇಳುವ ಸಾಧ್ಯತೆಯಿದೆ. ಇದರೊಂದಿಗೆ ಲಲಿತ್ ಝಾನನ್ನು ರಾಜಸ್ಥಾನಕ್ಕೆ ಕರೆದೊಯ್ದು, ಆತ ಎಲ್ಲಿ ತಂಗಿದ್ದ ಮತ್ತು ಮೊಬೈಲ್ ಫೋನ್‌ಗಳನ್ನು ಸುಟ್ಟುಹಾಕಿದ್ದಾನೆ ಎನ್ನಲಾದ ಸ್ಥಳವನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಸಂಸತ್ ಘಟನೆಗೆ ನಿರುದ್ಯೋಗ ಕಾರಣ: ರಾಹುಲ್ ಗಾಂಧಿಭದ್ರತಾ ವೈಫಲ್ಯ ಘಟನೆ ಸಂಬಂಧ ಕೇಂದ್ರ ವಿರುದ್ಧ ವಾಗ್ಧಾಳಿ ನಡೆಸಿರುವ ಸಂಸದ ರಾಹುಲ್ ಗಾಂಧಿ, “ಘಟನೆಗೆ ನಿರುದ್ಯೋಗ ಮತ್ತು ಹಣದುಬ್ಬರವೇ ಕಾರಣ’ ಎಂದು ಆರೋಪಿಸಿದ್ದಾರೆ. “ಲೋಕಸಭೆಯಲ್ಲಿ ಗಂಭೀರ ವಾದ ಭದ್ರತಾ ಲೋಪ ಆಗಿದೆ. ಆದರೆ ಇದಕ್ಕೆ ಕಾರಣ, ಪ್ರಧಾನಿ ಮೋದಿಯವರ ನೀತಿಯಿಂದ ಹೆಚ್ಚಾಗಿರುವ ನಿರುದ್ಯೋಗ ಮತ್ತು ಹಣದುಬ್ಬರ. ಎಲ್ಲಿದೆ ಉದ್ಯೋಗಾವಕಾಶ? ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬೇಕು’ ಎಂದಿದ್ದಾರೆ.. ಬಹಿರಂಗಪಡಿಸಿ: ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ “ರಾಹುಲ್ ಗಾಂಧಿ ಯಾವತ್ತೂ ನಿರಾಸೆ ಮೂಡಿಸುವುದಿಲ್ಲ; ಸದಾ ವ್ಯರ್ಥ ಮಾತುಗಳನ್ನೇ ಆಡುತ್ತಾರೆ. ಭಾರತದಲ್ಲಿ ಈಗ ನಿರು ದ್ಯೋಗವು ಶೇ.3.2ರಷ್ಟಿದೆ. ಇದು ಕಳೆದ 6 ವರ್ಷಗಳಲ್ಲೇ ಅತೀ ಕನಿಷ್ಠ. ಇಂಥ ಹೇಳಿಕೆಗಳನ್ನು ನೀಡುವ ಬದಲು ರಾಹುಲ್ ಅವರು, ಸಂಸತ್‌ನ ಭದ್ರತೆ ಉಲ್ಲಂಘಿಸಿದ ಆರೋಪಿಗಳಿಗೆ ಕಾಂಗ್ರೆಸ್, ಟಿಎಂಸಿ ಮತ್ತು ಸಿಪಿಎಂನೊಂದಿಗಿನ ನಂಟೇನು ಎಂಬ ಬಗ್ಗೆ ವಿವರಣೆ ನೀಡಲಿ’ ಎಂದಿದ್ದಾರೆ.