Advertisement

ರಾಷ್ಟ್ರದ ಜನರಿಗೆ ಗಾಂಧಿಜಿ, ಲಾಲ‌ಬಹುದ್ದೂರ್ ಶಾಸ್ತ್ರೀ ಇಂದಿಗೂ ಪ್ರೇರಕರು: ಕಾಗೇರಿ

12:06 PM Oct 02, 2021 | Team Udayavani |

ಶಿರಸಿ:  ಮಹಾತ್ಮಾ ಗಾಂಧಿಜಿ, ಲಾಲ‌ಬಹುದ್ದೂರ್ ಶಾಸ್ತ್ರೀ ಅವರು ಯುವ ಪೀಳಿಗೆಗೆ, ರಾಷ್ಟ್ರದ ಜನರಿಗೆ ಇಂದಿಗೂ ಪ್ರೇರಣೆ ಆದವರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.

Advertisement

ಶನಿವಾರ ನಗರದ ಬಿಡಕಿ ಬಯಲಿನಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಬಂಧಕ್ಕೆ ಬಹುಮಾನ, ಹಿರಿಯ ನಾಗರೀಕರಿಗೆ ಸಮ್ಮಾನ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಮಾತನಾಡಿದರು.

ಗಾಂಧಿಜಿ, ಲಾಲಬಹುದ್ದೂರ ಶಾಸ್ತ್ರಿಗಳು ದೇಶಕ್ಕೇ ಬದುಕನ್ನು ಮೀಸಲು ಇಟ್ಟವರು.  ಭಾರತದ ಸಂಸ್ಕೃತಿಯ ಪ್ರತೀಕವಾಗಿ ಜೀವನ ನಡೆಸಿದವರು. ಪ್ರಪಂಚದ ಹಲವು ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ‌ಪ್ರೇರಣೆ ನೀಡಿದವರು ಎಂದರು.

ಸ್ವದೇಶಿ ಚಿಂತನೆ ಬೆಳಸಿಕೊಳ್ಳವೇಕು. ಆತ್ಮ‌ನಿರ್ಭರ ಭಾರತವಾಗಿ ಮಾಡಲು ಮುಂದಾಗಬೇಕು. ನಮ್ಮ ಮನಸ್ಸು ಬುದ್ದಿ ಸ್ವಚ್ಛವಾಗಿರಬೇಕು, ನಮ್ಮ ಪರಿಸರ ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ಗಾಂಧಿಜಿ, ಶಾಸ್ತ್ರಿಗಳ ಬದುಕು, ಮೌಲ್ಯ ನೆನಪಿಸಿ‌ ಕೆಲಸ ಮಾಡಬೇಕು ಎಂದರು.

Advertisement

ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ವಹಿಸಿ, ಸ್ವಚ್ಛ, ಸ್ವಸ್ಥ ಭಾರತ ಆಗಬೇಕು ಎಂದರು.

ವೇದಿಕೆಯಲ್ಲಿ ಡಿವೈಎಸ್ಪಿ ರವಿ‌ ನಾಯಕ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ತಹಸೀಲ್ದಾರ ಎಂ.ಆರ್.ಕುಲಕರ್ಣಿ,  ಪೌರಾಯುಕ್ತ ಕೇಶವ ಚೌಹ್ವಾಣ ಇತರರು ಇದ್ದರು.

ನಗರ ಹಾಗೂ ಗ್ರಾಮೀಣ ಭಾಗದ‌ ಸ್ವಚ್ಛತೆಗೆ ಆದ್ಯತೆ‌ ನೀಡಬೇಕು.  ನಗರದ ಸ್ವಚ್ಛತೆಗೆ  ಜನತೆ ಸಹಭಾಗಿತ್ವದಲ್ಲಿ‌ ಆದ್ಯತೆ ನಡೆಸಬೇಕು. – ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Advertisement

Udayavani is now on Telegram. Click here to join our channel and stay updated with the latest news.

Next