Advertisement

ಶಿರಸಿ:  ಸ್ಪೀಕರ್ ಹೇಳಿದ ‘ಮಂಗನ‌ ಕಾಟ ನಿಯಂತ್ರಣ’ಪ್ರಸ್ತಾಪ!

03:06 PM Jun 29, 2022 | Team Udayavani |

ಶಿರಸಿ: ಮಂಗಗಳ ನಿಯಂತ್ರಣಕ್ಕೆ ಸಲಹೆ‌ ಕೇಳಿದರೆ ಏನೆಲ್ಲ ಉತ್ತರ ತಜ್ಞರು, ಅಧಿಕಾರಿಗಳು ನೀಡಿದ್ದಾರೆ ಗೊತ್ತಾ?

Advertisement

ಬುಧವಾರ ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಗರದಲ್ಲಿ ನಡೆದ ಸಂಬಾರ ಬೆಳೆಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ ವನ್ಯ ಮೃಗ ಕಾಟ ಪ್ರಾಸ್ತಾಪಿಸಿ ಮಾಡಿದರು. ವರ್ಷಗಳ ಹಿಂದೆ ಮಂಗಗಳ ಸಮಸ್ಯೆಗೆ ಸರಕಾರವೇ ತಜ್ಞರ ಪ್ರಸ್ತಾವ ಕೇಳಿದಾಗ ಬಂದ ಸಂಗತಿಗಳನ್ನು  ಪ್ರಸ್ತಾಪಿಸಿ‌‌ ಮಾತನಾಡಿದರು. ರೈತರ ಸಹನೆ ದೊಡ್ಡದು. ಎಲ್ಲವನ್ನೂ ಸಹಿಸಿಕೊಂಡು ಕೃಷಿ ಮಾಡುತ್ತಿದ್ದಾರೆ ಎಂದೂ ಬಣ್ಣಿಸಿದರು.

ಕಾಡು ಪ್ರಾಣಿ ಅದರಲ್ಲೂ  ಮಂಗಗಳ ಕಾಟ ರೈತರಿಗೆ ಸಮಸ್ಯೆ ಆಗುತ್ತಿದೆ. ಈ ಮಂಗನ‌ ಕಾಟ ನಿಯಂತ್ರಣಕ್ಕೆ ಸಲಹೆ‌ ಕೇಳಿದರೆ  ತಜ್ಞರು ಸಾಕಷ್ಟು ವರದಿ ನೀಡಿದರು. ಆ ವರದಿ ನೋಡಿದರೆ ಸರಕಾರಕ್ಕೆ, ರೈತರಿಗೆ ಇಬ್ಬರಿಗೂ ಅನುಷ್ಠಾನ ಸಮಸ್ಯೆ ಆಗುತ್ತದೆ ಎಂದು ಹಲವು ಉದಾಹರಣೆ‌ ಸಹಿತ‌ ಮಾತನಾಡಿದರು.

ಮಂಗಗಳ ನಿಯಂತ್ರಣಕ್ಕೆ ಒಬ್ಬರು ಗಂಡು ಮಂಗ ಹಿಡಿದು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದೂ, ಕೆಲವರು ಹೆಣ್ಣು ಮಂಗಕ್ಕೆ ಮಾಡಬೇಕು ಎಂದೂ ಹೇಳಿದ್ದರು.

ಇನ್ನೊಬ್ಬರು ಒಂದ್ ಮಂಗಕ್ಕೆ ಬಣ್ಣ ಬಳಿಯಬೇಕೂ ಎಂದೂ, ಇನ್ನೊಬ್ಬರು ಸೋಲಾರ್ ಬೆಳಕು ಬಿಡಬೇಕು ಎಂದು ಹೇಳಿದರು. ಬಾಟಲಿ ಬಡಿಸಬೇಕು ಎಂದು ಹೇಳಿ ನಾನೂ ಒಯ್ದಿದ್ದೆ. ಕೊನೆಗೆ ಆ ಬಾಟಲಿ‌ ಮನೆಗೆ ಏಕೆ ಬಂತು ಚರ್ಚೆ ಆಗುವಂತಾಯಿತು ಎಂದಾಗ ಸಭೆ ನಗೆಗಡಲಲಿ ತೇಲಿತು!

Advertisement

ಈ ವೇಳೆ  ತೋಟಗಾರಿಕಾ ಉಪ ನಿರ್ದೇಶ ಬಿ.ಪಿ. ಸತೀಶ್, ಡೀನ್, ಎಂ.ಎಚ್.ತಟಗಾರ,  ರೈತರಾದ ಆರ್.ಎಂ.ಹೆಗಡೆ ಸಾಲಕಣಿ, ಶಂಭು ಶಂಕರ ಶೆಡ್ಟಿ, ಯೋಗೀಶ ,ತಜ್ಞರಾದ ವಿ.ಎಂ.ಹೆಗಡೆ, ಅಬ್ದುಲ್‌ಕರಿಂ, ಶಂಕರ‌ ಮೇಟಿ, ಗಜಾನನ ಗುಂಡೆವಾಡಿ, ವಿಶ್ವೇಶ್ವರ ಭಟ್ಟ ಇತರರು ಇದ್ದರು. ಗಣೇಶ ಹೆಗಡೆ‌ ಸ್ವಾಗತಿಸಿದರು. ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಪ್ರಸ್ತಾವಿಕ ಮಾತನಾಡಿದರು.

ಟಿಆರ್ಸಿಯಲ್ಲಿ ತೋಟಗಾರಿಕಾ ಇಲಾಖೆ, ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕಾ ಮಹಾ ವಿದ್ಯಾಲಯ, ಕ್ಲಾಪ್ಸ್‌  ರೈತ ಉತ್ಪಾದಕ ಕಂಪನಿ ಜಂಟಿಯಾಗಿ ಹಮ್ಮಿಕೊಂಡ ಸಂಬಾರು ಬೆಳೆಗಳ ಬೇಸಾಯ ತಂತ್ರಜ್ಞಾನ , ಸಂಸ್ಕರಣೆ ಹಾಗೂ ಮಾರುಕಟ್ಟೆ‌ ಕುರಿತು ನಡೆದ ವಿಚಾರ ‌ಸಂಕಿರಣ ಇದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next