Advertisement

ಹಣಗಳಿಸುವುದೇ ಸರ್ವಸ್ವ ಆಗಬಾರದು, ಹಣಕ್ಕಿಂತ ಜ್ಞಾನ ಸರ್ವಸ್ವ ಆಗಬೇಕು: ಸ್ಪೀಕರ್ ಕಾಗೇರಿ

01:23 PM Jun 01, 2022 | Team Udayavani |

ಶಿರಸಿ: ಹಣ ಗಳಿಸುವದಷ್ಟೇ ನಮ್ಮ ಜೀವನದ ಸರ್ವಸ್ವ ಆಗಬಾರದು. ಹಣಕ್ಕಿಂತ ಜ್ಞಾನ ಸರ್ವಸ್ವ ಆಗಬೇಕು ಎಂದು ಕರ್ನಾಕಟ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು‌.

Advertisement

ಅವರು ನಗರದ ದೈವಜ್ಞ ಕಲಾಕಾರರ ಸಂಘ ನಿರ್ಮಾಣ ಮಾಡಿದ ಜ್ಞಾನೇಶ್ವರಿ ಸಭಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.

ಭೋಗದ ಜೀವನ ಹಿಡಿದರೆ ಎಲ್ಲವನ್ನೂ‌ ಕಳೆದುಕೊಳ್ಳುತ್ತೇವೆ ಎಂದ ಅವರು, ನಮಗೆ ನಮ್ಮ ಇತಿಹಾಸ ಗೊತ್ತಿರಬೇಕು. ನಮ್ಮ ಇತರರು ಇತಿಹಾಸ ಅಪ್ಪ, ಅಜ್ಜ, ಮುತ್ತಜ್ಜ ಹೀಗೆ ವಂಶವೃಕ್ಷ ಗೊತ್ತಿರಬೇಕು. ನಮ್ಮ ದೇಶದ, ಸಮಾಜದ ಇತಿಹಾಸ ತಿಳಿದುಕೊಳ್ಳಬೇಕು ಎಂದರು.

ದೈವಜ್ಞ ಯುವ, ಮಹಿಳಾ, ಕಲಾಕಾರರ ಸಂಘಟನೆ ಬಲವಾಗಿದೆ. ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಕಾರ್ಯ ಆಗಬೇಕು. ಸಮಾಜದ ಇತರರ, ರಾಷ್ಟ್ರದ ಹಿತದ ಜೊತೆ‌ ನಮ್ಮ ಹಿತವನ್ನೂ ಕಾಯಬೇಕು.‌ ಸಮಾಜ‌ ಮುನ್ನಡೆಯಲು ಇದು ಸಹಕಾರಿ ಆಗಲಿದೆ ಎಂದರು.

ಕರ್ಕಿ ಜ್ಞಾನೇಶ್ವರಿ ಪೀಠದ ಮಠಾಧೀಶ ಶ್ರೀಸಚ್ಚಿದಾನಂ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳು ಸಾನ್ನಿಧ್ಯ ನೀಡಿದ್ದರು.

Advertisement

ಸಚಿವ ಶಿವರಾಮ ಹೆಬ್ಬಾರ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ,  ಜಿಲ್ಲಾ‌ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಆರ್.ಎಸ್.ರಾಯ್ಕರ ಉಪ್ಪೋಣಿ, ದೈವಜ್ಞ ಬ್ರಾಹ್ಮಣ ಸಭಾದ ಅಧ್ಯಕ್ಷ ರಾಮು ರಾಯ್ಕರ ಬ್ಲಾಕ್ ಕಾಂಗ್ರೆಸ್ ಅಧ್ಯಯನ ಜಗದೀಶ ಗೌಡ, ಅನಂತ ಭಟ್ಟ ಹಿರೇಮನೆ, ಗಜಾನನ ಪಾಲನಕರ, ಕೆ‌.ಪಿ.ಕಾನಳ್ಳಿ, ಸುರೇಶ ಶೇಟ್, ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆರ್ಣೇಕರ್, ಸುರೇಶ ಶೇಟ್, ಎಸ್.ಎಸ್.ಗೀತಾ, ಶಾರದಾ ಶೇಟ್, ಗಂಗಾಧರ ಭಟ್ಟ, ಆರ್.ಜಿ.ಶೇಟ್ ಕಾನಸೂರು,ಪ್ರಭಾಕರ ವೆರ್ಣೇಕರ್, ವಿನಾಯಕ ಶೇಟ್, ಉದಯಕುಮಾರ ಕಾನಳ್ಳಿ, ಮದನ ದಿವಾಕರ, ಸಂತೋಷ ರೇವಣಕರ, ಗಜಾನನ ಪಾಲಕನಕರ, ಡಿ.ಎಚ್.ಸಾನು, ವಿಜಯಕುಮಾರ ಭಟ್ಟ, ರಂಗನಾಥ ರಾಯ್ಕರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next