Advertisement
ಎರಡು ದಿನಗಳ ಕಾಲ ಎಲ್ಲ ಶಾಸಕರು ಅತ್ಯುತ್ತಮ ಸಲಹೆಗಳನ್ನು ನೀಡಿದ್ದು, ವಿಧಾನ ಸಭೆಯಲ್ಲಿ ಪ್ರತೀ ದಿನದ ಕಾರ್ಯಕಲಾಪದ ಹೊರತಾಗಿ ಸಮಾಜ ಸುಧಾರಿಸುವ ವಿಷಯಗಳ ಕುರಿತು ಮುಕ್ತವಾಗಿ ಚರ್ಚೆಯಾಗಬೇಕು. ಅದಕ್ಕೆ ಕರ್ನಾಟಕ ವಿಧಾನಸಭೆ ಮೇಲ್ಪಂಕ್ತಿಯಾಗಬೇಕು. ಜನರು ಚುನಾವಣೆಯಲ್ಲಿ ಆಯ್ಕೆ ಯಾದ ನಮ್ಮನ್ನು (ಜನಪ್ರತಿನಿಧಿಗಳು) ಮೇಲ್ಪಂಕ್ತಿಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಅದಂರಂತೆ ನಾವು ನಡೆದುಕೊಳ್ಳುವ ಜವಾಬ್ದಾರಿ ವಹಿಸಿ ಕೊಳ್ಳಬೇಕು.
ಸಮಾಜ ಜಾಗೃತವಾಗಬೇಕು. ಅದು ಜಾಗೃತ ಆಗಬೇಕೆಂದರೆ ಸಮಾಜದ ಎಲ್ಲ ರಂಗದಲ್ಲಿಯೂ ಚರ್ಚೆಯಾಗಬೇಕು. ಈ ಚರ್ಚೆ ಸಮಾಜದ ಭಾಗವಾಗಬೇಕು. ಇದನ್ನು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಮಠಾಧೀಶರಿಗೆ ಕಳುಹಿಸಿ ಎಲ್ಲಡೆಯೂ ಚರ್ಚೆಯಾಗುವಂತೆ ನೋಡಿಕೊಳ್ಳುತ್ತೇವೆ. ಇದೊಂದು ಅಭಿಯಾನದ ರೀತಿಯಲ್ಲಿ ಮುಂದು ವರಿಯಬೇಕು. ಸಾಮಾನ್ಯ ಜನರು ನನ್ನ ಮತ ಮಾರಾಟಕ್ಕಿಲ್ಲ ಎಂದು ಬಹಿರಂಗವಾಗಿ ಹೇಳುವ ವ್ಯವಸ್ಥೆ ಬರಬೇಕು. ಈ ಚರ್ಚೆಗಳನ್ನು ಸಂವಿಧಾನ ಬದ್ದ ಸಂಸ್ಥೆಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಚುನಾವಣ ಆಯೋಗ, ರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ಎಲ್ಲರ ಬಗ್ಗೆಯೂ ಚರ್ಚೆಯಾಗಿದೆ.
ಶ್ರೇಷ್ಠ ಗೌರವ ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ಯಿಂದ ಚರ್ಚೆ ಯಶಸ್ವಿಯಾಗಿದೆ. ಇದು ದೇಶದ ಇತಿಹಾಸದಲ್ಲಿ ಕರ್ನಾಟಕ ವಿಧಾನಸಭೆಗೆ ಸಲ್ಲುವ ಶ್ರೇಷ್ಠ ಗೌರವ. ಈ ರೀತಿ ಚರ್ಚೆಗಳು ನಿರಂತರವಾಗಿ ನಡೆಯುವಂತೆ ಮುಂದುವರೆಸುವ ಪ್ರಯತ್ನ ಮಾಡು ತ್ತೇನೆ ಎಂದು ಸ್ಪೀಕರ್ ಹೇಳಿದರು.