Advertisement
ಖಾಲಿಸ್ಥಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಅನಂತರ ಕೆನಡಾ ಮತ್ತು ಭಾರತದ ನಡುವಿನ ಬಾಂಧವ್ಯ ಕೊಂಚ ಹಳಸಿದೆ. ಭಾರತದ ಪ್ರಯೋಜಿತ ಏಜೆಂಟರು ನಿಜ್ಜರ್ ಹತ್ಯೆ ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಆರೋಪಿಸಿದ್ದರು. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಗಳನ್ನು ಇದುವರೆಗೂ ಕೆನಡಾ ಒದಗಿಸಿಲ್ಲ.
“ಎಲ್ಲ ಜಿ20 ರಾಷ್ಟ್ರಗಳ ಸಂಸತ್ ಸದನ ಗಳ ಅಧ್ಯಕ್ಷರಿಗೆ ನಾವು ಆಹ್ವಾನ ನೀಡಿ ದ್ದೇವೆ. ಕೆನಡಾ ಸಂಸತ್ ಸ್ಪೀಕರ್‌ಗೂ ಕೂಡ ಪಿ20 ಸಮಾವೇಶಕ್ಕೆ ಆಹ್ವಾನಿಸಿದ್ದೇವೆ’ ಎಂ ದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕೆನಡಾ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮಾತುಕತೆ: ಕೆನಡಾ ಮತ್ತು ಭಾರತದ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಇತ್ತೀಚೆಗೆ ಕೆನಡಾ ವಿದೇಶಾಂಗ ಸಚಿವ ಮೆಲೋನಿ ಜೋಲಿ ಅವರೊಂದಿಗೆ ಸಭೆ ನಡೆಸಿದ್ದರು ಎಂದು ವರದಿಗಳು ತಿಳಿಸಿವೆ. ಆದರೆ ಈ ಮಾಹಿತಿಯನ್ನು ವಿದೇಶಾಂಗ ಸಚಿ ವಾಲಯ ಖಚಿತಪಡಿಸಿಲ್ಲ. ಆದರೆ ಭಾರತ- ಕೆನಡಾ ಸಂಬಂಧವನ್ನು ಹಳಿಗೆ ತರಲು ಪ್ರಯತ್ನಗಳು ನಡೆದಿವೆ ಎಂದು ಅದು ತಿಳಿಸಿದೆ.