ಕಾರ್ಕಳ: ತಾಲೂಕಿನ ಆಯ್ದ ಸರಕಾರಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಗುಬ್ಬಚ್ಚಿ ಸ್ಪೀಕಿಂಗ್ ಸಂವಹನ ಭಾಷಾ ಕಲಿಕೆ ತರಗತಿಗಳು ಪ್ರಾರಂಭಗೊಳ್ಳಲಿದೆ.
33 ಪ್ರಾಥಮಿಕ ಶಾಲೆಗಳಲ್ಲಿ ಸಾಂಕೇತಿಕವಾಗಿ ತರಗತಿ ಆರಂಭ
ತಾಲೂಕಿನ ಸುಮಾರು 33 ಪ್ರಾಥಮಿಕ ಶಾಲೆಗಳಲ್ಲಿ ಸಾಂಕೇತಿಕವಾಗಿ ತರಗತಿ ಆರಂಭಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಲಾಗಿದೆ.
ನೇಮಕಗೊಂಡ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ದಾನಿಗಳ ನೆರವಿನೊಂದಿಗೆ ಅವರಿಗೆ ವೇತನ ಪಾವತಿಸಲಾಗುವುದು. ಪ್ರಥಮ ಹಂತವಾಗಿ 1ರಿಂದ 5ರ ವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಶಶಿಧರ್ ಜಿ.ಎಸ್. ತಿಳಿಸಿದ್ದಾರೆ.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ, ಬಜಗೋಳಿ, ಹೆಬ್ರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಸಾಣೂರು, ಕಾಬೆಟ್ಟು, ಪತ್ತೂಂಜಿಕಟ್ಟೆ, ಬಸ್ರಿ ಬೈಲೂರು, ಎಲಿಯಾಳ, ಅಜೆಕಾರು, ಎಣ್ಣೆಹೊಳೆ, ಅಯ್ಯಪ್ಪ ನಗರ, ದುರ್ಗಾ-ತೆಳ್ಳಾರು, ಕಲ್ಯಾ, ಕೈರಬೆಟ್ಟು, ನಂದಳಿಕೆ, ಪುನಾರುಕೆರೆ, ಮುಂಡ್ಕೂರು, ಇನ್ನಾ, ಇಂದಿರಾನಗರ ಮಾಳ, ನಲ್ಲೂರು, ಹೊಸ್ಮಾರು, ಶಿರ್ಲಾಲುಸೂಡಿ, ಕೆರ್ವಾಶೆ, ಜಾರ್ಕಳ-ಮುಂಡ್ಲಿ, ಕುಚ್ಚಾರು, ಶಿವಪುರ, ವಂಡಾರಬೆಟ್ಟು, ಮುದ್ರಾಡಿ, ಸೋಮೇಶ್ವರ ಪೇಟೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲ, ಅಂಡಾರು, ರೆಂಜಾಳ, ಇರ್ವತ್ತೂರು-ಕೊಳಕೆ ಶಾಲೆಗಳಲ್ಲಿ ತರಗತಿ ಆರಂಭಿಸಲಾಗುವುದು ಎಂದು ಬಿಇಒ ವಿವರಿಸಿದರು.