Advertisement

ಎರಡನೇ ವಾರದಲ್ಲೂ ಚಮಕಿಸುತ್ತಿದೆ

11:14 AM Jan 12, 2018 | Team Udayavani |

ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಚಿತ್ರ ನಿರ್ಮಿಸುತ್ತೀನಿ ಅಂದಾಗ, ಯಾಕೆ ಬೇಕು ಎಂದು ಹಲವರು ಕೇಳಿದರಂತೆ. ಮಾಡೋಕೆ ಕೆಲಸ ಇದೆ, ಸಂಪಾದನೆಗೆ ಬೇರೆ ದಾರಿ ಇದೆ… ಹಾಗಿರುವಾಗ ಸಿನಿಮಾ ಕ್ಷೇತ್ರಕ್ಕೆ ಹೋಗಿ ಯಾಕೆ ರಿಸ್ಕಾ ಎಂದು ಹಲವರು ಹೇಳಿದ್ದಾರೆ. ಆದರೂ ಟಿ.ಆರ್‌. ಚಂದ್ರಶೇಖರ್‌ ಚಿತ್ರರಂಗಕ್ಕೆ ಬಂದಿದ್ದಾರೆ. ಮೊದಲ ಚಿತ್ರ ಮುಗಿಯುವ ಮುನ್ನ ಇನ್ನೂ ಮೂರು ಚಿತ್ರಗಳನ್ನು ಪ್ರಾರಂಭಿಸಿದ್ದಾರೆ. ಈಗ ಚಂದ್ರಶೇಖರ್‌ ನಿರ್ಮಾಣದ ಮೊದಲ ಚಿತ್ರ “ಚಮಕ್‌’ ಬಿಡುಗಡೆಯಾಗಿದೆ. ಹಾಕಿದ ದುಡೂ ಬಂದಿದೆ. ಈಗ ಅವರು ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ತಮ್ಮ ತಂಡವನ್ನೂ ಕರೆತಂದಿದ್ದರು ಚಂದ್ರಶೇಖರ್‌.

Advertisement

ಎಲ್ಲಾ ಸರಿ, ಚಂದ್ರಶೇಖರ್‌ ಈ ಚಿತ್ರದಿಂದ ಎಷ್ಟು ಸಂಪಾದಿಸಿದ್ದಾರೆ ಎಂದರೆ, ಚಿತ್ರರಂಗದ ಭಾಷೆಯಲ್ಲಿ ಹೇಳುವುದಾದರೆ ಸೇಫ್ ಆಗಿದ್ದೀನಿ ಎನ್ನುತ್ತಾರೆ ಅವರು. “ಹಾಕಿದ ದುಡ್ಡಿಗೆ ಭಯ ಇಲ್ಲ. ನನ್ನ ಅಕೌಂಟ್‌ಗೆ ಇನ್ನೂ ದುಡ್ಡು ಬಂದಿಲ್ಲ. ಬರುವ ಹಾದಿಯಲ್ಲಿದೆ. ಎಷ್ಟು ಬಂದಿದೆ ಎಂದು ನೂರನೇ ದಿನ ಸಿಎನ ಕರೆದುಕೊಂಡು ಬಂದು ಪಕ್ಕಾ ಲೆಕ್ಕ ಕೊಡುತ್ತೇನೆ. ಇದು ವರೆಗೂ ಗಣೇಶ್‌ ಅವರ ಯಶಸ್ಸಿನ ಚಿತ್ರಗಳ ಬಗ್ಗೆ ಹೇಳುವಾಗ ಎಲ್ಲರೂ, “ಮುಂಗಾರು ಮಳೆ’ ಚಿತ್ರವನ್ನು ಮಾನ ದಂಡ ವನ್ನಾಗಿ ಹೇಳ ುತ್ತಿದ್ದರು. ಮುಂದೆ “ಚಮಕ್‌’ ಚಿತ್ರದ ಬಗ್ಗೆಯೂ ಹೇಳಿದರೆ ಇನ್ನಷ್ಟು ಖುಷಿಯಾಗುತ್ತದೆ. ಒಂದು ಚಿತ್ರಕ್ಕೆ ನಾಲ್ಕು ಪ್ರಮುಖ ಕೂಡಿ ಬರಬೇಕು. ಚಿತ್ರತಂಡದ ಸಹಕಾರ, ಪ್ರೇಕ್ಷಕರ ಆಶೀರ್ವಾದ, ಮಾಧ್ಯಮದವರ ಸಹಕಾರ ಜೊತೆಗೆ ಅದೃಷ್ಟ … ಇವೆಲ್ಲವೂ ಒಂದು ಯಶಸ್ಸಿಗೆ ನಿರ್ಣಾಯಕ ಪಾತ್ರವಹಿಸುತ್ತದೆ. ಅದೆಲ್ಲವೂ ಕೂಡಿಬಂದಿರುವು ದರಿಂದಲೇ “ಚಮಕ್‌’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಠಿಯನ್ನು ಮಾಡುವಂತಾಗಿದೆ’ ಎಂದರು.

ಗಣೇಶ್‌ಗೆ ಈ ಚಿತ್ರದ ಬಗ್ಗೆ ಖುಷಿಯಾಗಿರುವುದಕ್ಕೆ ಪ್ರಮುಖ ಕಾರಣ, ಹೇಳಿದಂತೆ ಮಾಡಿರುವುದು. “ಸುನಿ ಏನು ಹೇಳಿದ್ದರೋ, ಅದರಂತೆಯೇ ಚಿತ್ರ ಮಾಡಿದ್ದಾರೆ. ಚಿತ್ರದ ಯಶಸ್ಸಿನ ಕ್ರೆಡಿಟ್‌ ಚಿತ್ರತಂಡಕ್ಕೆ ಹೋಗಬೇಕು. ಅಭಿಮಾನಿಗಳು ಸಹ ಖುಷಿಯಾಗಿದ್ದಾರೆ. ಚಿತ್ರ ಒಂದು ವಾರದ ನಂತರವೂ ಯಶಸ್ವಿ ಪ್ರದರ್ಶನವಾಗುತ್ತಿದೆ. ಅದು ಇನ್ನಷ್ಟು ಚೆನ್ನಾಗಿ ಪ್ರದಶರ್ನವಾಗಲಿ ಎಂದರು.

ಇದೊಂದು ಅದ್ಭುತ ಚಿತ್ರವಲ್ಲ ಎಂದು ಸುನಿ ಮುಲಾಜಿಲ್ಲದೆ ಒಪ್ಪಿಕೊಳ್ಳದೆ. “ಆದರೂ ಚಿತ್ರ ನೋಡಿದವರು ಒಳ್ಳೆಯ ಮಾತುಗಳಾಡುತ್ತಿದ್ದಾರೆ. ಹಣ ಹಾಕಿದ ನಿರ್ಮಾಪಕರು ಸುರಕ್ಷಿತವಾಗಿದ್ದಾರೆ. ಅವರ ಅಕೌಂಟ್‌ಗೆ ಇನ್ನೂ ಹಣ ಬಂದಿಲ್ಲದಿರಬಹುದು. ನಮಗೂ ಇನ್ನೂ ಬರಬೇಕಿದೆ. ಮುಂದಿನ ದಿನಗಳಲ್ಲಿ ಬರುತ್ತದೆ ಎಂಬ ನಂಬಿಕೆ ಇದೆ. ನಾನು ಇದುವರೆಗೂ ಮಾಡಿದ ಚಿತ್ರಗಳಲ್ಲೇ ಇದು ದೊಡ್ಡ ಬಜೆಟ್‌ನ ಚಿತ್ರ ಎಂದರು.ರಶ್ಮಿಕಾ ಮಂದಣ್ಣಗೆ ಹೆಚ್ಚು ಮಾತನಾಡುವುದಕ್ಕೆ ಇರಲಿಲ್ಲ. ಎಲ್ಲರಿಗೂ ಥ್ಯಾಂಕ್ಸ್‌ ಹೇಳಿ ಸುಮ್ಮನಾದರು. ಇನ್ನು ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವ ಗಿರಿ ಸಹ ಒಂದೊಳ್ಳೆಯ ಪಾತ್ರ ಕೊಟ್ಟಿದ್ದಕ್ಕೆ ಖುಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next