Advertisement

ಉ.ಕೊರಿಯಾ ಕ್ಷಿಪಣಿಗೆ ಅಮೆರಿಕ ಕಿಡಿ

03:45 AM Jul 05, 2017 | Harsha Rao |

ಸಿಯೋಲ್‌: ಅಮೆರಿಕ ಸೇರಿದಂತೆ, ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಕಾಲು ಕೆರೆಯುತ್ತಲೇ ಇರುವ ಉತ್ತರ ಕೊರಿಯಾ, ಇದೇ ಮೊದಲ ಬಾರಿಗೆ ಪರಮಾಣು ಸಿಡಿತಲೆಯೊಂದಿಗೆ ಉಡಾಯಿಸ ಬಹುದಾದ ಖಂಡಾಂತರ ಕ್ಷಿಪಣಿಯ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. 

Advertisement

ಹವಾಸಂಗ್‌-14 ಹೆಸರಿನ ಕ್ಷಿಪಣಿ ಇದಾಗಿದ್ದು, 2,802 ಕಿ.ಮೀ. ಎತ್ತರಕ್ಕೆ ಇದು ಸಾಗಿ, 933 ಕಿ.ಮೀ. ದೂರಕ್ಕೆ ಹೋಗಿ ಗುರಿ ಛೇದಿಸಿದೆ. ಈ ಬೆಳವಣಿಗೆಯನ್ನು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ವೀಕ್ಷಿಸಿದ್ದಾರೆ ಎಂದು ಉ.ಕೊರಿಯಾದ ಅಧಿಕೃತ ಮಾಧ್ಯಮ ವರದಿ ಹೇಳಿದೆ. ಉ.ಕೊರಿಯಾದ ಈ ಉನ್ಮಾದದಿಂದ ದ.ಕೊರಿಯಾ, ಜಪಾನ್‌, ಅಮೆರಿಕಗಳಿಗೆ ಹೊಸ ತಲೆನೋವು ಶುರುವಾಗಿದೆ. ಈ ನೂತನ ಕ್ಷಿಪಣಿ ಅಮೆರಿಕದ ಅಲಾಸ್ಕಾವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಹೇಳಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್‌ ಟ್ವೀಟ್‌ ಮಾಡಿದ್ದು, ಉ.ಕೊರಿಯಾದ ಈ ಅಸಂಬಂದ್ಧಗಳನ್ನು ಚೀನಾ ಒಂದೇ ಬಾರಿಗೆ ನಿಲ್ಲಿಸಬೇಕು ಎಂದಿದ್ದಾರೆ. ಟ್ರಂಪ್‌ ಟ್ವೀಟ್‌ಗೆ ಚೀನಾ ಪ್ರತಿಕ್ರಿಯಿಸಿದ್ದು, ಉ.ಕೊರಿಯಾದ ಪರಮಾಣು ವಿವಾದ ಗಳನ್ನು ಬಗೆಹರಿಸಲು ಸರ್ವಯತ್ನ ಮಾಡುತ್ತಿರುವುದಾಗಿ, ಸಂಯಮವಹಿಸಬೇಕೆಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next