Advertisement

ಪಾಕ್‌ ಕಿತಾಪತಿಗೆ ಭಾರತ ಕಿಡಿ

07:40 AM Oct 11, 2017 | Harsha Rao |

ವಿಶ್ವಸಂಸ್ಥೆ:ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಅನವಶ್ಯಕವಾಗಿ ಕಾಶ್ಮೀರ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಪಾಕ್‌ರಾಯಭಾರಿ ಮಲೀಹಾ ಲೋಧಿ ಅವರು, ವಿಶ್ವಸಂಸ್ಥೆಯು ಈ ಜಗತ್ತನ್ನು ವಸಾಹತು ಮುಕ್ತವಾಗಿಸುವ ಉದ್ದೇಶ ಹೊಂದಿದೆ. ಆದರೆ, ಕಾಶ್ಮೀರ ಸಮಸ್ಯೆ ಇತ್ಯರ್ಥವಾಗದ ಹೊರತು ವಿಶ್ವಸಂಸ್ಥೆಯ ಈ ಘನ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ್ದಾರೆ. 

Advertisement

ಲೋಧಿ ಅವರ ಈ ಭಾಷಣವನ್ನು ಖಂಡಿಸಿರುವ ಭಾರತ, ವಿಶ್ವದ ನಾನಾ ದೇಶಗಳು ಭಾಗವಹಿಸಿರುವ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಪದೇ ಪದೆ ಕಾಶ್ಮೀರ ವಿಚಾರ ಪ್ರಸ್ತಾಪಿಸುವ ಮೂಲಕ ಮಹಾ ಸಭೆಯ ಉದ್ದೇಶ ಹಳ್ಳ ಹಿಡಿಯುವಂತೆ ಮಾಡುತ್ತಿದೆ ಎಂದು ಕಿಡಿಕಾರಿದೆ.

ವಿಶ್ವಸಂಸ್ಥೆಯಲ್ಲಿರುವ ಭಾರತೀಯ ನಿಯೋಗದ ಸಚಿವರಾದ ಶ್ರೀನಿವಾಸ್‌ ಪ್ರಸಾದ್‌ ಮಾತನಾಡಿ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಈವರೆಗೆ ಪ್ರತಿನಿಧಿಸಿರುವ ಯಾವುದೇ ನಿಯೋಗವು ಈ ಪ್ರಮಾಣದಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿರಲಿಲ್ಲ. ಹಾಲಿ ಸಮಿತಿಯ ಈ ನಡೆ ಸಮ್ಮೇಳನದ ಉದ್ದೇಶವನ್ನು ಮಣ್ಣುಪಾಲು ಮಾಡುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next